JOBS : ಬೆಂಗಳೂರು ರೂರಲ್ ಜಿ.ಪಂನಲ್ಲಿ ಉದ್ಯೋಗವಕಾಶ..!
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ನಿರ್ಧರಿಸಲಾಗಿದೆ.
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ನರೆಗಾ ಯೋಜನೆಯನ್ನು (nrega scheme) ಪರಿಣಾಮಕಾರಿಯಾಗಿ ಜಾರಿ ತರಲು ವಿವಿಧ ಹುದ್ದೆಗಳ ಭರ್ತಿಗೆ ನಿರ್ಧರಿಸಲಾಗಿದೆ. ಈ ಸಂಬಂಧ ಅಧಿಸೂಚನೆ (Notification) ಕೂಡಾ ಹೊರಡಿಸಲಾಗಿದೆ. ಹುದ್ದೆಯ ಹೆಸರು, ವಿದ್ಯಾರ್ಹತೆ, ಇತರೆ ಅರ್ಹತೆ, ಪ್ರಮುಖ ದಿನಾಂಕಗಳು ಒಳಗೊಂಡ ಪ್ರಮುಖ ಮಾಹಿತಿಗಳು ಇಲ್ಲಿವೆ.
ಹುದ್ದೆಗಳ ವಿವರ
1.ತಾಂತ್ರಿಕ ಸಂಯೋಜಕರು 03 ಹುದ್ದೆ
2. ತಾಲೂಕು ಐ.ಇ.ಸಿ ಸಂಯೋಜಕರು, 04 ಹುದ್ದೆ
3. ತಾಂತ್ರಿಕ ಸಹಾಯಕರು (ತೋಟಗಾರಿಕೆ) 01 ಹುದ್ದೆ
4. ತಾಂತ್ರಿಕ ಸಹಾಯಕರು (ಕೃಷಿ) 01 ಹುದ್ದೆ
ವಿದ್ಯಾರ್ಹತೆ :
ಹುದ್ದೆಗಳಿಗೆ ಅನುಗುಣವಾಗಿ BE / ಎಂ.ಟೆಕ್, ಯುಜಿ/ಪಿಜಿ/ ಸಮೂಹ ಸಂವಹನ, BSc/ಎಂಎಸ್ಸಿ ಇನ್ ಅಗ್ರಿಕಲ್ಚರ್, ಬಿಎಸ್ಸಿ/ ಎಂಎಸ್ಸಿ ಇನ್ ಹಾರ್ಟಿಕಲ್ಚರ್ ಪಾಸ್ ಮಾಡಿರಬೇಕು.
ಇದನ್ನೂ ಓದಿ : ESIC Recruitment 2021: 'ESIC'ನಲ್ಲಿ 6,552 ಹುದ್ದೆಗಳ ನೇಮಕಾತಿಗೆ ಅರ್ಜಿ!
ವೇತನ : ರೂ.24000-29000 ವರೆಗೆ.
ಅರ್ಜಿ ಸಲ್ಲಿಕೆ ಹೇಗೆ?
ಅರ್ಜಿಯನ್ನು 'ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಭವನ, ಬೀರಸಂದ್ರ (ಚಪ್ಪರದ ಕಲ್ಲು), ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು-562110' ವಿಳಾಸಕ್ಕೆ ಪೋಸ್ಟ್ ಮೂಲಕ ಅಥವಾ ಖುದ್ದು ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅರ್ಜಿ ನಮೂನೆಯನ್ನು bangalorerural.nic.in ಗೆ ಭೇಟಿ ನೀಡಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಭರ್ತಿ ಮಾಡಿದ ಅರ್ಜಿಯೊಂದಿಗೆ (Application) ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕು.
ಪ್ರಮುಖ ಡೇಟ್ಸ್
ಅರ್ಜಿ ಸಲ್ಲಿಕೆ ಆರಂಭ: 10-03-2021
ಅರ್ಜಿ ಸಲ್ಲಿಕೆ ಅಂತ್ಯ : 26-03-2021 ರ 05 ಗಂಟೆವರೆಗೆ.
ವಯೋಮಿತಿ:
ಕನಿಷ್ಠ 21 ವರ್ಷ ಮೇಲ್ಪಟ್ಟ, ಗರಿಷ್ಠ 40 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ : Reservation In Private Sector - ಈ ರಾಜ್ಯದಲ್ಲಿ ಖಾಸಗಿ ವಲಯಕ್ಕೂ ಕಾಲಿಟ್ಟಿದೆ ಮೀಸಲಾತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.