ನೇರ ಪೊಲೀಸ್ ಮಹಾನಿರ್ದೇಶಕರ ನಿವಾಸಕ್ಕೆ ನುಗ್ಗಿದ ಬಸ್..! ಕಾರಣ..?

ಆಂಧ್ರಪ್ರದೇಶದ ಹಿಂದೂಪುರದಿಂದ ಬೆಂಗಳೂರಿಗೆ  ಖಾಸಗೀ ಬಸ್  ಒಂದು ಬರುತಿತ್ತು. ಇನ್ನೇನು ಬೆಂಗಳೂರಿನ ಕೇಂದ್ರ ಸ್ಥಳವಾಗಿರುವ ನೃಪತುಂಗ ರಸ್ತೆಗೆ ಎಂಟ್ರಿ ಕೊಡುತ್ತಿದ್ದಂತೆಯೇ ಬಸ್ ಬ್ರೇಕ್ ಫೇಲ್  ಆಗಿರುವುದು ಚಾಲಕನ  ಅರಿವಿಗೆ ಬಂದಿದೆ.

Written by - Ranjitha R K | Last Updated : Mar 9, 2021, 12:31 PM IST
  • ಪೊಲೀಸ್ ಮಹಾನಿರ್ದೇಶಕರ ನಿವಾಸಕ್ಕೆ ಖಾಸಗೀ ಬಸ್ ನುಗ್ಗಿ ಅವಾಂತರ ಸೃಷ್ಟಿಸಿದೆ.
  • ಬಹುಭದ್ರತೆಯ ಡಿಜಿ ಮತ್ತು ಐಜಿಪಿ ನಿವಾಸಕ್ಕೆ ಬಸ್ ನುಗ್ಗಿರುವುದರಿಂದ ಸಂಚಾರವೂ ಅಸ್ತವ್ಯಸ್ತಗೊಂಡಿದೆ.
  • ಕ್ರೇನ್ ಮೂಲಕ ಬಸ್ ಎತ್ತಿದ ಪೊಲೀಸ್.!
ನೇರ ಪೊಲೀಸ್ ಮಹಾನಿರ್ದೇಶಕರ ನಿವಾಸಕ್ಕೆ ನುಗ್ಗಿದ ಬಸ್..! ಕಾರಣ..? title=
ಪೊಲೀಸ್ ಮಹಾನಿರ್ದೇಶಕರ ನಿವಾಸಕ್ಕೆ ಖಾಸಗೀ ಬಸ್ ನುಗ್ಗಿ ಅವಾಂತರ

ಬೆಂಗಳೂರು : ರಾಜಧಾನಿ  ಬೆಂಗಳೂರಿನ (Bengaluru) ಹೃದಯಭಾಗದಲ್ಲಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರ ನಿವಾಸಕ್ಕೆ ಖಾಸಗೀ ಬಸ್ ನುಗ್ಗಿ ಅವಾಂತರ ಸೃಷ್ಟಿಸಿದೆ. ಬಹುಭದ್ರತೆಯ ಡಿಜಿ ಮತ್ತು ಐಜಿಪಿ ನಿವಾಸಕ್ಕೆ (DG & IGP Residence) ಬಸ್ ನುಗ್ಗಿರುವುದರಿಂದ  ಸಂಚಾರವೂ ಅಸ್ತವ್ಯಸ್ತಗೊಂಡಿದೆ.

ನಡೆದಿದ್ದೇನು..?:
ಆಂಧ್ರಪ್ರದೇಶದ ಹಿಂದೂಪುರದಿಂದ ಬೆಂಗಳೂರಿಗೆ (Bengaluru) ಖಾಸಗೀ ಬಸ್ (private Bus) ಒಂದು ಬರುತಿತ್ತು. ಇನ್ನೇನು ಬೆಂಗಳೂರಿನ ಕೇಂದ್ರ ಸ್ಥಳವಾಗಿರುವ ನೃಪತುಂಗ ರಸ್ತೆಗೆ ಎಂಟ್ರಿ ಕೊಡುತ್ತಿದ್ದಂತೆಯೇ ಬಸ್ ಬ್ರೇಕ್ ಫೇಲ್ (Bus Break Fail) ಆಗಿರುವುದು ಚಾಲಕನ  ಅರಿವಿಗೆ ಬಂದಿದೆ. ಏನು ಮಾಡಿದರೂ  ಬಸ್ಸಿನ (Bus) ಬ್ರೇಕ್ ಬೀಳುತ್ತಿರಲಿಲ್ಲ. ಸಂಚಾರ ದಟ್ಟಣೆಯ ನೃಪತುಂಗ ರಸ್ತೆಯಲ್ಲಿ ಬಸ್ ಬ್ರೇಕ್ ಫೇಲ್ ಆಗಿದ್ದು ನೋಡಿ ಬಸ್ ಚಾಲಕ ಗಾಬರಿ ಬಿದ್ದಿದ್ದಾನೆ. ಕೂಡಲೇ ಡ್ರೈವರ್ ನೇರ ರಸ್ತೆಯ ಬದಲು  ನೃಪತುಂಗ ರಸ್ತೆಯಲ್ಲಿರುವ ಡಿಜಿ-ಐಜಿಪಿ ನಿವಾಸದ ಕಂಪೌಂಡ್ ಗೆ    ಬಸ್ ನುಗ್ಗಿಸಿದ್ದಾನೆ. ಕಂಪೌಂಡ್ ಗೆ  ಅಪ್ಪಳಿಸಿದ ಬಸ್ ಬಳಿಕ ಅಲ್ಲೇ ನಿಂತಿದೆ. ಈ ಅಪಘಾತದಿಂದ ಬಸ್ಸಿನ ಮುಂಭಾಗದಲ್ಲಿ ಕುಳಿತಿದ್ದ ಮೂವರಿಗೆ ಗಾಯಗಳಾಗಿವೆ. ಪೊಲೀಸ್ ಮಹಾನಿರ್ದೇಶಕರ ನಿವಾಸದ ಕಂಪೌಂಡ್ ಭಾಗಶಃ ಜಖಂಗೊಂಡಿದೆ. ಗೋಡೆ ಶಿಥಿಲಗೊಂಡಿದೆ. 

ಇದನ್ನೂ ಓದಿ : CD case : ಅಪರಾಧಿ ನಾನಲ್ಲ..! ಅಪರಾಧ ಎಸಗಿಲ್ಲ.!ಸ್ಫೋಟಕ ಮಾಹಿತಿ ನೀಡಿದ ಜಾರಕಿಹೊಳಿ

ಕ್ರೇನ್ ಮೂಲಕ ಬಸ್ ಎತ್ತಿದ ಪೊಲೀಸ್.!
ಅಪಘಾತದ ಕಾರಣ ನೃಪತುಂಗ ರಸ್ತೆಯಲ್ಲಿ (Nripatunga Road) ಕೆಲಕಾಲ ಸಂಚಾರ (Traffic) ಅಸ್ತವ್ಯಸ್ತಗೊಂಡಿತ್ತು. ಬೆಳಗಿನ ಹೊತ್ತಿನಲ್ಲಿ ಸಂಚಾರದಲ್ಲಿ ಅಡಚಣೆ ಉಂಟಾಗಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಲಸೂರು ಗೇಟ್ ಪೊಲೀಸರು (Police) ಕ್ರೇನ್ ಬಳಸಿ ಬಸ್ ತೆರವುಗೊಳಿಸಿದ್ದಾರೆ. ನಂತರವೇ ಸುಗಮ ಸಂಚಾರ ಸಾಧ್ಯವಾಗಿದೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ : Ration Card: ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News