ESIC Recruitment 2021: 'ESIC'ನಲ್ಲಿ 6,552 ಹುದ್ದೆಗಳ ನೇಮಕಾತಿಗೆ ಅರ್ಜಿ!

ಅಧಿಸೂಚನೆ ಪ್ರಕಾರ ಒಟ್ಟು 6,552 ಹುದ್ದೆಗಳ ಪೈಕಿ 6,306 ಹುದ್ದೆಗಳು ಉತ್ತರ ವಿಭಾಗದ ಮೇಲ್ದರ್ಜೆ ಗುಮಾಸ್ತ ಮತ್ತು 246 ಸ್ಟೆನೊಗ್ರಾಫರ್ ಹುದ್ದೆಗಳು ಖಾಲಿ ಇವೆ.

Last Updated : Mar 3, 2021, 08:47 PM IST
  • ನಿರುದ್ಯೋಗಿಗಳಿಗೆ ನೌಕರರ ರಾಜ್ಯ ವಿಮಾ ನಿಗಮ (ಇಎಸ್ ಐಸಿ) ಭರ್ಜರಿ ಸಿಹಿ ಸುದ್ದಿ
  • ಖಾಲಿ ಇರುವ ಒಟ್ಟು 6,552 ಮೇಲ್ದರ್ಜೆ ಗುಮಾಸ್ತ (Upper Division Clerk) ಮತ್ತು ಸ್ಟೆನೋಗ್ರಾಫರ್ ಹುದ್ದೆಗಳಿಗೆ ನೇಮಕ ಅಧಿಸೂಚನೆ
  • ಅಧಿಸೂಚನೆ ಪ್ರಕಾರ ಒಟ್ಟು 6,552 ಹುದ್ದೆಗಳ ಪೈಕಿ 6,306 ಹುದ್ದೆಗಳು ಉತ್ತರ ವಿಭಾಗದ ಮೇಲ್ದರ್ಜೆ ಗುಮಾಸ್ತ ಮತ್ತು 246 ಸ್ಟೆನೊಗ್ರಾಫರ್ ಹುದ್ದೆಗಳು ಖಾಲಿ ಇವೆ.
ESIC Recruitment 2021: 'ESIC'ನಲ್ಲಿ 6,552 ಹುದ್ದೆಗಳ ನೇಮಕಾತಿಗೆ ಅರ್ಜಿ! title=

‌ನಿರುದ್ಯೋಗಿಗಳಿಗೆ ನೌಕರರ ರಾಜ್ಯ ವಿಮಾ ನಿಗಮ (ESIC) ಭರ್ಜರಿ ಸಿಹಿ ಸುದ್ದಿ ನೀಡಿದ್ದು, ಖಾಲಿ ಇರುವ ಒಟ್ಟು 6,552 ಮೇಲ್ದರ್ಜೆ ಗುಮಾಸ್ತ (Upper Division Clerk) ಮತ್ತು ಸ್ಟೆನೋಗ್ರಾಫರ್ ಹುದ್ದೆಗಳಿಗೆ ನೇಮಕ ಮಾಡಿ ಅಧಿಸೂಚನೆ ಹೊರಡಿಸಿದೆ.

ಅಧಿಕೃತ ಅಧಿಸೂಚನೆ ಪ್ರಕಾರ ಒಟ್ಟು 6,552 ಹುದ್ದೆಗಳ ಪೈಕಿ 6,306 ಹುದ್ದೆ(Jobs)ಗಳು ಉತ್ತರ ವಿಭಾಗದ ಮೇಲ್ದರ್ಜೆ ಗುಮಾಸ್ತ ಮತ್ತು 246 ಸ್ಟೆನೊಗ್ರಾಫರ್ ಹುದ್ದೆಗಳು ಖಾಲಿ ಇವೆ.

PM-Kisan: ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಪಿಎಂ-ಕಿಸಾನ್ ಸಮ್ಮನ್ ನಿಧಿಯ 8 ನೇ ಕಂತು

ESIC ನೇಮಕಾತಿ 2021 ಮಾರ್ಚ್/ಏಪ್ರಿಲ್ ತಿಂಗಳಲ್ಲಿ ತನ್ನ ಅಧಿಕೃತ www.esic.in ವೆಬ್ಸೈಟ್ʼನಲ್ಲಿ ಅಧಿಸೂಚನೆಯನ್ನು ಅಪ್ಲೋಡ್ ಮಾಡಿದ ತಕ್ಷಣ ಅಪ್ಲಿಕೇಶನ್ ಪ್ರಕ್ರಿಯೆಯು ಪ್ರಾರಂಭವಾಗುತ್ತೆ.

ಅರ್ಹತೆ: ಸ್ಟೆನೋಗ್ರಾಫರ್ ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ ಬೋರ್ಡ್ ಪರೀಕ್ಷೆ(Exame)ಯಲ್ಲಿ ಉತ್ತೀರ್ಣರಾಗಿರಬೇಕು.

Farmers unions: ಪಂಚ ರಾಜ್ಯ​ಗಳ ಎಲೆಕ್ಷನ್ ನಲ್ಲಿ ಬಿಜೆಪಿ ವಿರುದ್ಧ ರೈತರ ರಣ​ಕ​ಹ​ಳೆ!

ಮೇಲ್ದರ್ಜೆ ಗುಮಾಸ್ತ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ(Candidate)ಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಅಭ್ಯರ್ಥಿಗಳು ಎಂಎಸ್ ಆಫೀಸ್ ಮತ್ತು ಡೇಟಾಬೇಸ್ ಸೇರಿದಂತೆ ಕಂಪ್ಯೂಟರ್(Computer) ಬಗ್ಗೆ ಜ್ಞಾನ ಹೊಂದಿರಬೇಕು.

LPG ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಾರಣನಾ? ಅಲ್ಲದಿದ್ದರೆ ಮತ್ತೇನು?

ಆನ್ ಲೈನ್ ಅರ್ಜಿ ಭರ್ತಿ ಮಾಡುವಾಗ ಅಭ್ಯರ್ಥಿಗಳು ಎಲ್ಲಾ ಪ್ರಮಾಣ ಪತ್ರಗಳು, ಪದವಿ(Degree)ಗಳು ಮತ್ತು ಶೈಕ್ಷಣಿಕ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನ ಅಪ್ಲೋಡ್ ಮಾಡಬೇಕು.

ವಯಸ್ಸಿನ ಮಿತಿ: ಮೇಲ್ದರ್ಜೆ ಗುಮಾಸ್ತ, ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 27 ವರ್ಷ ವಯಸ್ಸಿ(Age)ನವರಾಗಿರಬೇಕು. ಸರ್ಕಾರದ ನಿಯಮದಂತೆ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

Viral Photo: ಶರ್ಟ್-ಪ್ಯಾಂಟ್ ಧರಿಸಿ, ತಲೆಗೆ ರುಮಾಲು ಸುತ್ತಿ, ಟಕ್ ನಲ್ಲಿ ಬೀದಿಗಿಳಿದ ಗಜರಾಜನ ಗಾಂಭೀರ್ಯ ನಡೆ

ಆಯ್ಕೆ ಪ್ರಕ್ರಿಯೆ: ನೌಕರರ ರಾಜ್ಯ ವಿಮಾ ನಿಗಮವು ಲಿಖಿತ ಪರೀಕ್ಷೆ / ಫಿಟ್ ನೆಸ್ / ಸೀಮಿತ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆಯ ಆಧಾರದ ಮೇಲೆ ಮೇಲಿನ ವಿಭಾಗ ಗುಮಾಸ್ತ / ಮೇಲ್ದರ್ಜೆ ಗುಮಾಸ್ತ ಕ್ಯಾಷಿಯರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನ ಶಾರ್ಟ್ ಲಿಸ್ಟ್ ಮಾಡಲಾಗುತ್ತೆ. ಇನ್ನು ಸ್ಟೆನೋಗ್ರಾಫರ್ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆಯ ಮೂಲಕ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News