ಬೆಂಗಳೂರು: ಶುಕ್ರವಾರ ಮುಂಜಾನೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದವ ದಲಿತ ಹೋರಾಟಗಾರ, ಹಿರಿಯ ಸಾಹಿತಿ ಕೆ.ಬಿ. ಸಿದ್ಧಯ್ಯ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಕೆ.ಬಿ.ಸಿದ್ಧಯ್ಯ ನನ್ನ ಬಹುಕಾಲದ ಗೆಳೆಯ ಎಂದಿರುವ ಸಿದ್ಧರಾಮಯ್ಯ, ಕೆ.ಬಿ. ಸಿದ್ಧಯ್ಯ ಅವರು ದಲಿತತ್ವಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಜೊತೆಗೆ ಬುದ್ಧ, ಬಸವ, ಗಾಂಧಿ ತತ್ವಗಳನ್ನು ಬೆರೆಸಿ ಸೃಜನಶೀಲ ಆಯಾಮವನ್ನು ನೀಡಿದ್ದರು. ಬಾಬು ಜಗ ಜೀವನ್ ರಾಂ ರ ವಿಚಾರಗಳ ಮೂಲಕ ಸಮಕಾಲೀನ ರಾಜಕೀಯ, ಸಾಂಸ್ಕೃತಿಕ ಅಸ್ಮಿತೆಯ ಅಗತ್ಯವನ್ನು ಮನಗಂಡಿದ್ದರು. ಬದುಕಿನುದ್ದಕ್ಕೂ ಶೋಷಿತರ ಪರವಾದ ಹೋರಾಟವನ್ನು ಮಾಡುತ್ತಲೇ ಬಂದ ಅವರು ದಲಿತ  ಹೋರಾಟಕ್ಕೆ  ಮಾನವೀಯತೆಯ ಸ್ಪರ್ಶ ನೀಡಿದ್ದರು ಎಂದಿದ್ದಾರೆ. 


ಬದುಕು, ರಾಜಕಾರಣ, ಬರವಣಿಗೆ ಎಲ್ಲದರಲ್ಲೂ ಒಳಗೊಂಡು ಬದುಕುವ ತತ್ವವನ್ನು ಪ್ರತಿಪಾದಿಸುತ್ತಿದ್ದರು. ಇಂಥ ಸೂಕ್ಷ್ಮತೆಯನ್ನು ಒಳಗೊಂಡು ಬದುಕಿದ ಕೆ.ಬಿ.ಸಿದ್ಧಯ್ಯ ಅಕಾಲಿಕ ಮರಣ ಹೊಂದಿರುವುದು ನಾಡಿಗೆ ಬಹು ದೊಡ್ಡ ನಷ್ಟ. ಈ ಘಟನೆ  ನನಗೆ ತೀವ್ರ ದುಃಖವನ್ನು ತರಿಸಿದೆ. ಅವರ ಕುಟುಂಬ ವರ್ಗಕ್ಕೆ, ಸ್ನೇಹಿತ ಬಳಗಕ್ಕೆ, ಸಂಘಟನೆಯ ಒಡನಾಡಿಗಳಿಗೆ ಇದನ್ನು ಸಹಿಸಿಕೊಳ್ಳುವ ಶಕ್ತಿ ಬರಲಿ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ.