ಬೆಂಗಳೂರು: ಈವರೆಗೆ ಬಾಯಿಮಾತಿಗೆ ಮಾತ್ರ ಸೀಮಿತವಾಗಿದ್ದ "ಕನ್ನಡ ಕಡ್ಡಾಯ", ಇನ್ನು ಮುಂದೆ ಕಾನೂನು ಬದ್ಧವಾಗಿರಲಿದೆ. ಇದೇ ಅಧಿವೇಶನದಲ್ಲಿ ಕನ್ನಡ ಕಡ್ಡಾಯ ಕಾನೂನು ತರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.


COMMERCIAL BREAK
SCROLL TO CONTINUE READING

ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಾನು ಕನ್ನಡ ಪರ ಇದ್ದೇನೆ. ಕನ್ನಡವನ್ನು ಬೆಳೆಸೋದ್ದಕ್ಕೆ ಸರ್ಕಾರ ಬದ್ದವಾಗಿದೆ. ಇದರಲ್ಲಿ ಯಾವ ಕಾರಣಕ್ಕೂ ರಾಜೀಯೇ ಇಲ್ಲ, ನೆಲ, ಜಲ, ಭಾಷೆ ವಿಷಯದಲ್ಲಿ ರಾಜಕೀಯ ಮೀರಿ ನಿರ್ಧಾರ ಮಾಡುತ್ತೇವೆ ಎಂದು ಭರವಸೆ ನೀಡಿದರು.


ಇದನ್ನೂ ಓದಿ- ಸಿಸಿಬಿ ಕಾರ್ಯಾಚರಣೆ: ಸರ್ಕಾರ, ಟೆಲಿಕಾಂ ಕಂಪನಿಗೆ ಮೋಸ ಮಾಡುತ್ತಿದ್ದ ಖತರ್ನಾಕ್‌ ಗ್ಯಾಂಗ್‌ ಅಂದರ್‌


ಕನ್ನಡ ಅಗ್ರಮಾನ್ಯ ಭಾಷೆ ಆಗಿದೆ. ಕನ್ನಡವನ್ನು ಹೆಚ್ಚು ಬಳಸಲು ಹಾಗೂ ಕನ್ನಡ ಕಡ್ಡಾಯಕ್ಕಾಗಿ ಒಂದು ಕಾನೂನನ್ನೇ ಜಾರಿ ಮಾಡ್ತಿದ್ದೇವೆ. ಆ ಕಾನೂನು ಕನ್ನಡ ರಕ್ಷಣೆಗಾಗಿಯೂ ಆಗಿರುತ್ತದೆ. ಕನ್ನಡವನ್ನು ನಾವು ಖಂಡಿತವಾಗಿ ರಕ್ಷಣೆ ಮಾಡುತ್ತೇವೆ ಎಂದು ಘೋಷಣೆ ಮಾಡಿದರು.


ಇದನ್ನೂ ಓದಿ- ಧಮ್‌ ಇದ್ರೆ ಸೋನಿಯಾ, ರಾಹುಲ್‌ ಅವರಿಂದ ʼಹಿಂದಿ ದಿವಸ್‌ʼ ರದ್ದು ಮಾಡುತ್ತೇವೆ ಎಂದು ಹೇಳಿಸಿ.!


ಈ ಘೋಷಣೆಯನ್ನ ರಾಜ್ಯದಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ಹಿನ್ನಲೆಯಲ್ಲಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ನಗರದಲ್ಲಿ ಹಾಗೂ ಇಟತೆ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬುದು ಗಮನಾರ್ಹ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.