Bangalore Floods: ರಾಜಕಾಲುವೆ ಸಮಸ್ಯೆ ಯಾವಾಗ ಸರಿ ಮಾಡುತ್ತೀರಿ? : ಶಾಸಕ ಕೃಷ್ಣೆಬೈರೇಗೌಡ ಪ್ರಶ್ನೆ

 ವಿಧಾನಸಭೆ ಕಲಾಪದಲ್ಲಿ ಬ್ಯಾಟರಾಯಣಪುರ ಕ್ಷೇತ್ರದ ಶಾಸಕ ಕೃಷ್ಣೆಬೈರೇಗೌಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಗಳೂರು ಮಳೆ ಸಮಸ್ಯೆ ಹಾಗೂ ಪ್ರವಾಹದ ಬಗ್ಗೆ ಪ್ರಶ್ನೆ ಮಾಡಿದರು.

Written by - Prashobh Devanahalli | Edited by - Chetana Devarmani | Last Updated : Sep 13, 2022, 05:32 PM IST
  • ಬ್ಯಾಟರಾಯಣಪುರ ಕ್ಷೇತ್ರದ ಶಾಸಕ ಕೃಷ್ಣೆಬೈರೇಗೌಡ
  • ರಾಜಕಾಲುವೆ ಸಮಸ್ಯೆ ಯಾವಾಗ ಸರಿ ಮಾಡುತ್ತೀರಿ?
  • ವಿಧಾನಸಭೆ ಕಲಾಪದಲ್ಲಿ ಪ್ರಶ್ನೆ
Bangalore Floods: ರಾಜಕಾಲುವೆ ಸಮಸ್ಯೆ ಯಾವಾಗ ಸರಿ ಮಾಡುತ್ತೀರಿ? : ಶಾಸಕ ಕೃಷ್ಣೆಬೈರೇಗೌಡ ಪ್ರಶ್ನೆ title=
ಕೃಷ್ಣೆಬೈರೇಗೌಡ

ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಬ್ಯಾಟರಾಯಣಪುರ ಕ್ಷೇತ್ರದ ಶಾಸಕ ಕೃಷ್ಣೆಬೈರೇಗೌಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಗಳೂರು ಮಳೆ ಸಮಸ್ಯೆ ಹಾಗೂ ಪ್ರವಾಹದ ಬಗ್ಗೆ ಪ್ರಶ್ನೆ ಮಾಡಿದರು.

ಕೃಷ್ಣೆಬೈರೇಗೌಡ:ಮಳೆಯಿಂದ ಬೆಂಗಳೂರಲ್ಲಿ ಹಾನಿ ಆಗಿದೆ. ಬೆಂಗಳೂರು ಘನತೆಗೆ ತೊಂದರೆ ಆಗ್ತಿದೆ.ರಾಜಕಾಲುವೆ ಅಭಿವೃದ್ಧಿ ಪಡಿಸದೆ ಇದ್ದರೆ ಫ್ಲಡ್ ಆಗ್ತಾ ಇರ್ತದೆ. ನಮ್ಮ ಕಾಲದಲ್ಲಿ 400 ಕಿಮೀ ರಾಜಕಾಲುವೆ ಅಭಿವೃದ್ಧಿ ಮಾಡಲಾಗಿತ್ತು.ಈಗ ಮತ್ತೆ ಫ್ಲಡ್ ಗೆ ಸಿಕ್ಕಿದ್ದೇವೆ. ಯಾವಾಗ ಸರಿ ಮಾಡ್ತಿರಿ..?

ಸಿಎಂ ಉತ್ತರ : ಕೃಷ್ಣ ಬೈರೆಗೌಡರು ಪ್ರಶ್ನೆ ಕೇಳಿದಾಗ ಒಂದು ರಾಜಕೀಯ ಭಾಷಣ ಮಾಡಲೇಬೇಕು.

ಕೃಷ್ಣೆಬೈರೇಗೌಡ : ನೀವೆ ನಮಗೆ ಗೈಡ್ ಮಾಡಿದವರು.

ಇದನ್ನೂ ಓದಿ : CT Ravi : 'ಭಾರತದ ಎಲ್ಲಾ ಭಾಷೆಗಳು ಸಹ ಭಾರತದ ಆತ್ಮ, ಮಾತೃಭಾಷೆಯಲ್ಲೇ ವ್ಯವಹರಿಸಿ'

ಸಿಎಂ : ಇಲ್ಲಪ್ಪ ನಾನು ಗೈಡ್ ಮಾಡಿಲ್ಲ.ನೀವು ದೊಡ್ಡವರು. ಇಷ್ಟು ದೊಡ್ಡ ಮಳೆ ಎಂದು ಬಂದಿಲ್ಲ..ರಾಜಕಾಲುವೆ ಅಂದಿನ ಇಂದಿನ ಕೆಪಾಸಿಟಿಗೂ ವ್ಯತ್ಯಾಸ ಇದೆ,ಕಾಂಗ್ರೆಸ್ ಕಾಲದಲ್ಲಿ ಮಂಜೂರು ಆಗಿದ್ದನ್ನೂ ನಾವು ಮಾಡ್ತಾ ಇದ್ದೇವೆ. ಎಲ್ಲಾ ತೆರವು ಮಾಡಿ ರಾಜಕಾಲುವೆ ಸಂಪೂರ್ಣ ಮಾಡೋಕೆ ಒಂದುವರೆ ಎರಡು ವರ್ಷ ಬೇಕಾಗುತ್ತದೆ.ಎಲ್ಲೆಲ್ಲಿ ಬಹಳ ಅಗತ್ಯವಿದೆ ಅಲ್ಲಿ ಕೆಲಸ ಆರಂಭ ಆಗಿದೆ.1500 ಕೋಟಿ ಕೊಡಲಾಗಿದೆ.,ಇನ್ನಷ್ಟು ಹಣ ಕೊಡ್ತೇವೆ ರಾಜಕಾಲುವೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡ್ತೇವೆ.ಇಷ್ಟು ದಿನ ಬಿಟ್ಟು ಬಿಟ್ಟು ಕೆಲಸ ಮಾಡಲಾಗ್ತಿತ್ತುಇನ್ನುಮುಂದೆ ನಿರಂತರವಾಗಿ ರಾಜಕಾಲುವೆ ಮಾಡುತ್ತೇವೆ.ಮಹಾದೇವಪುರದಲ್ಲಿ ಮೇಜರ್ ಇದೆ,ಹಳ್ಳಿಗಳನ್ನೂ ಅಲ್ಲಿ ಸೇರಿಸಿದ್ದೇವೆ,ಅಲ್ಲಿ ಕೆರೆಗಳು ತುಂಬಿ ಹರಿಯುತ್ತಿದೆ,ಮಹಾದೇವಪುರ ಕ್ಷೇತ್ರದಲ್ಲಿ 69 ಕೆರೆ ಇದೆ.

ಇದನ್ನೂ ಓದಿ : ರಾಜ್ಯದಲ್ಲಿ ಪ್ರವಾಹ: ಬಿಜೆಪಿ ಸರ್ಕಾರದ ಬೇಜವಾಬ್ದಾಯಿಂದ ಈ ಪರಿಸ್ಥಿತಿ ನಿರ್ಮಾಣ- ಸಿದ್ದರಾಮಯ್ಯ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News