ಬೆಂಗಳೂರು:  ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ ದೀಪಾವಳಿ ಹಬ್ಬದಲ್ಲಿ ರಾಜ್ಯದಲ್ಲಿ ಪಟಾಕಿ ನಿಷೇಧ ಮಾಡಿರುವುದಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೀಪಾವಳಿಗೆ ಯಾವುದೇ ರೀತಿಯ ಪಟಾಕಿ ಬಳಕೆಗೆ ಅಂದರೆ ಪಟಾಕಿ ಮಾರಾಟಕ್ಕಾಗಲಿ ಅಥವಾ ಪಟಾಕಿ ಸಿಡಿಸುವುದಕ್ಕಾಗಲಿ  ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ನಿಷೇಧಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು. ರಾಜ್ಯ ಸರ್ಕಾರ ಪಟಾಕಿ ನಿಷೇಧ ಮಾಡಿರುವುದನ್ನು ಪರಿಸರವಾದಿಗಳು ಸ್ವಾಗತಿಸಿದ್ದಾರೆ.


ಹರಿಯಾಣದಲ್ಲಿ ಆಮದು ಮಾಡಿದ ಪಟಾಕಿ ಸಂಗ್ರಹ, ಮಾರಾಟ ಕಾನೂನುಬಾಹಿರ


ಸಾರ್ವಜನಿಕರಲ್ಲಿ ಪಟಾಕಿ (Firecrackers) ಯನ್ನು ನಿಷೇಧಿಸಬೇಕೆಂಬ ಒತ್ತಡ ಮೊದಲಿನಿಂದಲೂ ಇದೆ. ಆದರೆ ಈ ಬಾರಿ COVID-19 ಕಾರಣಕ್ಕೆ ಆ ಒತ್ತಡ ಹೆಚ್ಚಾಗಿದೆ. ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸುವವರು ಒಂದು ಕಡೆಯಾದರೆ ಪಟಾಕಿ ಹೊಗೆಯಿಂದ ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಹಲವಾರು ರೀತಿಯ ತೊಂದರೆ ಎದುರಿಸುವವರು ಇನ್ನೊಂದೆಡೆ. ಹಾಗಾಗಿಯೇ COVID-19ನಂಥ  ಕಡುಕಷ್ಟದ ಸಂದರ್ಭದಲ್ಲಾದರೂ ಪಟಾಕಿ ನಿಷೇಧಿಸಬೇಕು ಎಂಬ ಕೂಗು ಕೇಳಿಬರುತ್ತಿತ್ತು.


ಭಾರತದಲ್ಲಿ 'ಪಟಾಕಿ' ಮಾರಾಟ ಬ್ಯಾನ್ ಆಗುತ್ತಾ?


ಪಟಾಕಿ ಹಚ್ಚಿದರೆ ಅದರ ಧೂಳು ಮತ್ತು ಹೊಗೆಯಿಂದ COVID-19 ರೋಗಿಗಳ ಆರೋಗ್ಯದಲ್ಲಿ ಮತ್ತಷ್ಟು ಸಮಸ್ಯೆಯಾಗಲಿದೆ. ಇದು ಕೊರೋನಾ ವೈರಸ್ ಇನ್ನಷ್ಟು ತೀವ್ರವಾಗಿ ಹರಡಲು ಕಾರಣವಾಗಲಿದೆ. ಈಗಾಗಲೇ ರಾಜ್ಯದಲ್ಲಿ ಪ್ರತಿದಿನವೂ ಕೊರೋನಾಕ್ಕೆ ತುತ್ತಾಗುತ್ತಿರುವವರ, ಅದರಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಈಗ ಪಟಾಕಿ ಸಿಡಿಸಲು ಅವಕಾಶ ನೀಡಿದರೆ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪಟಾಕಿ ಖರೀದಿಸಲು ಜನ ಒಂದೆಡೆ ಸೇರುತ್ತಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದಿಲ್ಲ. ಇದರಿಂದಲೂ ಸಮಸ್ಯೆ ಆಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.