ಗೃಹಲಕ್ಷ್ಮಿ-ಶಕ್ತಿ ಯೋಜನೆಯಿಂದ ಅತ್ತೆ-ಸೊಸೆ ನಡುವೆ ಕಂದಕ ಸೃಷ್ಟಿಯಾಗಿದೆ: ಬಿಜೆಪಿ
Congress Guarantee Schemes: ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ರಾಜ್ಯಾದ್ಯಂತ ಹಾಡುಹಗಲೇ ಹಣ ಪಡೆಯಲಾಗುತ್ತಿದೆ. ಕಾಂಗ್ರೆಸ್ಗೆ ವೋಟು ಹಾಕಿದ ತಪ್ಪಿಗೆ, ಈಗ ರಾಜ್ಯದ ಮಹಿಳೆಯರು ಗೃಹಲಕ್ಷ್ಮಿ ಗಾರಂಟಿಯ ಹಣ ಪಡೆಯಲು ಹಣ ನೀಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಬಿಜೆಪಿ ಟೀಕಿಸಿದೆ.
ಬೆಂಗಳೂರು: ಅವಾಸ್ತವಿಕ ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ರಾಜ್ಯದ ಜನರನ್ನು ಬೀದಿಗೆ ತಂದು ನಿಲ್ಲಿಸಿದೆ ಎಂದು ಬಿಜೆಪಿ ಟೀಕಿಸಿದೆ. ಈ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ ಬಿಜೆಪಿ, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳ ವಿರುದ್ಧ ಕಿಡಿಕಾರಿದೆ.
‘ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆಯ ಅಪ್ರಬುದ್ಧ ಜಾರಿಯಿಂದ ವಿದ್ಯಾರ್ಥಿಗಳು, ಚಾಲಕರು ಕಂಗೆಟ್ಟು ಹೋಗಿದ್ದಾರೆ, ಅತ್ತೆ-ಸೊಸೆ ನಡುವೆ ಕಂದಕ ಸೃಷ್ಟಿಯಾಗಿದೆ. ಸಿದ್ದರಾಮಯ್ಯನವರೇ, ತುಘಲಕ್ ದರ್ಬಾರಿನ ವಿರುದ್ಧ ಸ್ವಾಭಿಮಾನಿ ಕನ್ನಡಿಗರು ಭುಗಿಲೆದ್ದಿದ್ದಾರೆ’ ನೋಡಿ ಎಂದು ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ಹಂಚಿಕೊಂಡಿದೆ.
ಇದನ್ನೂ ಓದಿ: ಸಿದ್ದು ಸರ್ಕಾರದಲ್ಲಿ ಸಚಿವರು - ಶಾಸಕರ ಲೆಟರ್ ವಾರ್..!
ಕಾಂಗ್ರೆಸ್ ಸರ್ಕಾರ ತನ್ನ ಹಿಂದೂ ವಿರೋಧಿ ನೀತಿಯನ್ನು ಮುಂದುವರೆಸಿದೆ. ಹಿಂದೂ ವಿರೋಧಿ ನೀತಿಗಳನ್ನು ರಾಜಸ್ಥಾನ ಸರ್ಕಾರ ಸಿಎಂ ಸಿದ್ದರಾಮಯ್ಯರವರನ್ನು ನೋಡಿ ಕಲಿತಿದಿಯೋ ಅಥವಾ ಸಿದ್ದರಾಮಯ್ಯರವರು ರಾಜಸ್ಥಾನ ಸರ್ಕಾರವನ್ನು ನೋಡಿ ಕಲಿತಿದ್ದಾರೋ..?’ ಎಂದು ಬಿಜೆಪಿ ಪ್ರಶ್ನಿಸಿದೆ.
ಇದನ್ನೂ ಓದಿ: KPSC Recruitment 2023: ಕೆಪಿಎಸ್‍ಸಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.