ಬೆಂಗಳೂರು: ರಾಜಕೀಯ ಕಾರಣಕ್ಕಾಗಿ ತಿರಂಗ ಬಳಸಿ ಕಾಂಗ್ರೆಸ್(Congress) ದೇಶದ ಗೌರವಕ್ಕೆ ಚ್ಯುತಿ ತಂದಿದೆ ಅಂತಾ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. #ದೇಶದ್ರೋಹಿಕಾಂಗ್ರೆಸ್ ಹ್ಯಾಶ್ ಟ್ಯಾಗ್ ಬಳಿಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಕ್ಕೆ ತನ್ನದೇ ಆದ ಸ್ಥಾನವಿದೆ. ಆದರೆ ಕಾಂಗ್ರೆಸ್‌ ಪಕ್ಷ ತನ್ನ ಜವಾಬ್ದಾರಿಯನ್ನು ಮರೆತು ಸದನದ ಗೌರವವನ್ನು ಹಾಳು ಮಾಡಿದೆ. ರಾಜಕೀಯ ಕಾರಣಕ್ಕಾಗಿ ತಿರಂಗ ಬಳಸಿ ದೇಶದ ಗೌರವಕ್ಕೆ ಚ್ಯುತಿ ತಂದಿದೆ. ಇದು ಕ್ಷಮಿಸಲನರ್ಹ’ ಅಂತಾ ಕಿಡಿಕಾರಿದೆ.


COMMERCIAL BREAK
SCROLL TO CONTINUE READING

‘ಕಾಂಗ್ರೆಸ್ಸಿಗರೇ ಮತದಾರರು ಆಯ್ಕೆ ಮಾಡಿ ವಿಧಾನಸೌಧ(Assembly Session)ಕ್ಕೆ ಕಳುಹಿಸಿದ್ದು ಜನರ ಸಂಕಷ್ಟಗಳಿಗೆ ಧ್ವನಿಯಾಗಿ ಸಮಸ್ಯೆ ಬಗೆಹರಿಸಿ ಎಂದು, ತ್ರಿವರ್ಣಕ್ಕೆ ಅವಮಾನ ಮಾಡಲು ಅಲ್ಲ. ಜನರ ತೆರಿಗೆ ಹಣದಲ್ಲಿ ನಡೆಸುವ ಕಲಾಪವನ್ನು ನಿಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಂಡಿರುವುದು ವಿಷಾದನೀಯ’ ಅಂತಾ ಟ್ವೀಟ್ ಮಾಡಿದೆ.


DK Shivakumar vs KS Eshwarappa: ಏಕವಚನದಲ್ಲಿ ಬೈದಾಡಿಕೊಂಡ ಡಿಕೆಶಿ ಮತ್ತು ಈಶ್ವರಪ್ಪ


‘ತನ್ನ ರಾಜಕೀಯ ಬೇಳೆ ಬೇಯಿಸಲು ಸದನದ ಹೊರಗೆ ಹಿಜಾಬ್(Hijab Row) ವಿಷಯವನ್ನು ಎತ್ತಿಕೊಂಡ ಕಾಂಗ್ರೆಸ್‌ ಪಕ್ಷ ಏನೂ ಅರಿಯದ ಮಕ್ಕಳಲ್ಲಿ ವಿಷ ಬೀಜ ಬಿತ್ತಿತು. ಈಗ ಸದನದೊಳಗೆ ರಾಷ್ಟ್ರ ಧ್ವಜವನ್ನು ರಾಜಕೀಯ ಲೆಕ್ಕಾಚಾರಕ್ಕೆ ಬಳಸಿ, ತಿರಂಗಕ್ಕೆ ಅವಮಾನ ಮಾಡಿದೆ. ನಾಡಿನ ಜನರು ನಿಮ್ಮನ್ನು ಕ್ಷಮಿಸುವರೇ? ಧ್ವಜ ಸಂಹಿತೆಯ ಬಗ್ಗೆ ಮಾತನಾಡುವ #ಬುರುಡೆರಾಮಯ್ಯ ಅವರೇ ನಿಮ್ಮ ಪಕ್ಷದ ಶಾಸಕರು ಧ್ವಜವನ್ನು ದುರ್ಬಳಕೆ ಮಾಡುತ್ತಿದ್ದಾಗ ಕೈ ಕಟ್ಟಿ ಕುಳಿತಿದ್ದೇಕೆ?’ ಅಂತಾ ಪ್ರಶ್ನಿಸಿದೆ.


Assembly Session)ಯಲ್ಲಿ ಭಿತ್ತಿಪತ್ರದ ರೀತಿಯಲ್ಲಿ ಬಳಸುವ ಮೂಲಕ ಕಾಂಗ್ರೆಸ್ ಪಕ್ಷ ತಿರಂಗ ಧ್ವಜಕ್ಕೆ ಅಪಮಾನ ಮಾಡಿದೆ. ಈ ದುರ್ವರ್ತನೆಯನ್ನು ಸಹಿಸಲು ಸಾಧ್ಯವೇ? ರಾಷ್ಟ್ರ ಧ್ವಜ ಹಿಡಿದು ಪ್ರತಿಭಟನೆ ನಡೆಸಿದವರ ಮೇಲೆ ಗುಂಡು ಹಾರಿಸಿದ ಕಾಂಗ್ರೆಸ್ ಪಕ್ಷ ಈಗ ರಾಷ್ಟ್ರ ಧ್ವಜಕ್ಕೆ ಘೋರ ಅಪಮಾನ ಮಾಡಿದೆ’ ಅಂತಾ ಬಿಜೆಪಿ ವಾಗ್ದಾಳಿ ನಡೆಸಿದೆ.


ಇದನ್ನೂ ಓದಿ: Karnataka Hijab row: "ಪ್ರತಿಭಟನೆ ಮುಂದುವರಿದರೆ ಕಠಿಣ ಕ್ರಮ"- ಗೃಹ ಸಚಿವರ ಎಚ್ಚರಿಕೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.