ಪ್ರಜಾಧ್ವನಿ ಹೆಸರಿನ ಪ್ರಜಾದ್ರೋಹ ಯಾತ್ರೆಯಲ್ಲೂ ಕಾಂಗ್ರೆಸ್ನಿಂದ ದಲಿತರಿಗೆ ದ್ರೋಹ: ಬಿಜೆಪಿ
BJP Slams Congress Prajadwani Yatra: ಪ್ರಜಾಧ್ವನಿ ಹೆಸರಿನಲ್ಲಿ ನಡೆಸುತ್ತಿರುವ ಪ್ರಜಾದ್ರೋಹ ಯಾತ್ರೆಯಲ್ಲೂ ದಲಿತರಿಗೆ ಎಂದಿನಂತೆ ದ್ರೋಹ ಬಗೆಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಬೆಂಗಳೂರು: ದಲಿತ ನಾಯಕರ ವಿಚಾರದಲ್ಲಿ ಕಾಂಗ್ರೆಸ್‍ನದ್ದು ಅನುಕೂಲ ಸಿಂಧು ರಾಜಕಾರಣ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪ್ರಜಾಧ್ವನಿ ಹೆಸರಿನಲ್ಲಿ ನಡೆಸುತ್ತಿರುವ ಪ್ರಜಾದ್ರೋಹ ಯಾತ್ರೆಯಲ್ಲೂ ದಲಿತರಿಗೆ ಎಂದಿನಂತೆ ದ್ರೋಹ ಬಗೆಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
#PrajaDrohaYatre ಹ್ಯಾಶ್‍ಟ್ಯಾಗ್ ಬಳಸಿ ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದೆ. ‘ಅಧಿಕಾರಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯರನ್ನು ಒಟ್ಟು ಮಾಡಲು ಪ್ರಯತ್ನಿಸುತ್ತಿರುವ ‘ಕೈ’ ಪಕ್ಷವು ದಲಿತ ಮುಖಂಡರಾದ ಮರ್ಲಿಕಾರ್ಜುನ್ ಖರ್ಗೆ ಹಾಗೂ ಡಾ.ಜಿ.ಪರಮೇಶ್ವರ್ ಅವರನ್ನು ಮೂಲೆಗುಂಪಾಗಿಸಿರುವುದು ಬಹಿರಂಗ ಸತ್ಯ’ವೆಂದು ಕುಟುಕಿದೆ.
Sagara Marikamba Jatre: ರಂಗೇರಿದ ಸಾಗರದ ಪ್ರಸಿದ್ಧ ಮಾರಿಕಾಂಬ ದೇವಿಯ ಜಾತ್ರೆ
‘ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರು ಪ್ರತ್ಯೇಕ ಪ್ರಜಾದ್ರೋಹ ಯಾತ್ರೆ ಕೈಗೊಂಡಿದ್ದರೆ, ಬಿ.ಕೆ.ಹರಿಪ್ರಸಾದ್ ಅವರು ಕರಾವಳಿ ದ್ರೋಹ ಯಾತ್ರೆ ಮಾಡುತ್ತಿದ್ದಾರೆ. ಇವುಗಳ ಮಧ್ಯೆ ಕಾಂಗ್ರೆಸ್ ಪಕ್ಷಕ್ಕೆ ದಲಿತ ಮುಖಂಡರ ನೆನಪೇ ಇಲ್ಲ’ವೆಂದು ಬಿಜೆಪಿ ಟೀಕಿಸಿದೆ.
ಕಾಂಗ್ರೆಸ್ ತಮ್ಮನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಂಡು ವಂಚಿಸಿರುವುದರ ಅರಿವು ದಲಿತ ಸಮುದಾಯದವರಿಗಿದೆ. ಅವರ್ಯಾರೂ ಕಾಂಗ್ರೆಸ್ ಪರ ಇಲ್ಲ, ಅವರನ್ನು ಮತ್ತೊಮ್ಮೆ ವಂಚಿಸಲಾಗದು ಎಂಬುದು ಕಾಂಗ್ರೆಸಿಗೂ ಗೊತ್ತಾಗಿದೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಹಳೆಯ ಪಿಂಚಣಿ ಯೋಜನೆ ಜಾರಿಗೆ : ಆಮ್ ಆದ್ಮಿ ಪಾರ್ಟಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.