ಹುಬ್ಬಳ್ಳಿ: ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗ ತೊಡಗಿದೆ,. ಎಲ್ಲಾ ಪಕ್ಷಗಳು ಮತದಾರರ ಒಲೈಕೆಯಲ್ಲಿ ಬಿರುಸಿನಲ್ಲಿಯೇ ತೊಡಗಿವೆ. ಈ ಮಧ್ಯೆ, ಚುನಾವಣೆಗೆ ಮುನ್ನವೇ ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಮಾರ್ಚ್ 4 ರಂದು ಅರವಿಂದ್ ಕೇಜ್ರಿವಾಲ್ ಕರ್ನಾಟಕಕ್ಕೆ ಆಗಮಿಸಲಿದ್ದಾರೆ.
ಮಾರ್ಚ್ 4 ರಂದು ರಾಜ್ಯಕ್ಕೆ ಆಗಮಿಸಲಿರುವ ಅರವಿಂದ್ ಕೇಜ್ರಿವಾಲ್, ದಾವಣಗೆರೆಯಲ್ಲಿ ಪಕ್ಷದ ನೂತನವಾಗಿ ಆಯ್ಕೆಯಾದ ವಲಯ ಮತ್ತು ಬ್ಲಾಕ್ ಮಟ್ಟದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಎಎಪಿಯ ಕಾರ್ಯಾಧ್ಯಕ್ಷ ರವಿಚಂದ್ರ ನೆರಬೆಂಚಿ ಈ ವಿಷಯ ತಿಳಿಸಿದ್ದಾರೆ.
ಇದನ್ನೂ ಓದಿ : Sagara Marikamba Jatre: ರಂಗೇರಿದ ಸಾಗರದ ಪ್ರಸಿದ್ಧ ಮಾರಿಕಾಂಬ ದೇವಿಯ ಜಾತ್ರೆ
ಕರ್ನಾಟಕದಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಪ್ರಗತಿಗೆ ಸಂಬಂಧಿಸಿದಂತೆ ಸ್ಥಾಪಿತ ರಾಜಕೀಯ ಪಕ್ಷಗಳು ಜನರ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿವೆ. ದೆಹಲಿಯ ಆಡಳಿತ ಮಾದರಿಯಲ್ಲಿ ಎಎಪಿ ಪರ್ಯಾಯ ವಿಚಾರಗಳನ್ನು ರೂಪಿಸಲಿದೆ ಎಂದು ರವಿಚಂದ್ರ ನೆರಬೆಂಚಿ ಹೇಳಿದರು.
ಎಎಪಿಯ ಪ್ರಣಾಳಿಕೆಯು ಮಹಿಳೆಯರು, ರೈತರು, ಕಾರ್ಮಿಕರು ಮತ್ತು ಸರ್ಕಾರಿ ನೌಕರರನ್ನು ಕೇಂದ್ರೀಕರಿಸುತ್ತದೆ ಮತ್ತು ಪ್ರತಿ ಜಿಲ್ಲೆಯ ಆಕಾಂಕ್ಷೆಗಳು ಮತ್ತು ಬೇಡಿಕೆಗಳು ವಿಭಿನ್ನವಾಗಿರುವುದರಿಂದ ಜಿಲ್ಲೆಯ ನಿರ್ದಿಷ್ಟ ಪ್ರಣಾಳಿಕೆಗಳತ್ತ ಕೂಡಾ ಪಕ್ಷ ಗಮನ ಹರಿಸುತ್ತದೆ ಎಂದು ನೆರಬೆಂಚಿ ಹೇಳಿದರು. ಪಕ್ಷವು ಅಧಿಕಾರಕ್ಕೆ ಬಂದರೆ ಸರ್ಕಾರಿ ಸಿಬ್ಬಂದಿಗೆ ಹಳೆಯ ಪಿಂಚಣಿ ಯೋಜನೆಯನ್ನು ಮರಳಿ ತರಲಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ : DK Sivakumar : ಸರ್ವೇ ಆಧಾರದಲ್ಲಿ ಕೈ ಟಿಕೆಟ್ ಹಂಚಿಕೆ ಇದ್ದರೂ ಬೆಂಬಲಿಗರ ಪರ ಡಿಕೆ ಬ್ಯಾಟಿಂಗ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.