ಬೆಂಗಳೂರು: ಕೊರೊನಾ ಎರಡನೇ ಅಲೆ ಸ್ಫೋಟ ಹಿನ್ನೆಲೆ CBSE, ICSE ಪರೀಕ್ಷೆಗಳು ರದ್ದುಗೊಳಿಸಿದ ಬೆನ್ನಲ್ಲೇ ರಾಜ್ಯದ 1 ರಿಂದ 9 ನೇ ತರಗತಿ ಪರೀಕ್ಷೆ ರದ್ದು ಮಾಡಿ ಮುಂದಿನ ತರಗತಿಗೆ ಪಾಸ್ ಮಾಡಿವಂತೆ ಶಿಕ್ಷಣ ಇಲಾಖೆ ‌ಮೌಕಿಕ‌ ಆದೇಶ ಹೊರಡಿಸಿದೆ.


COMMERCIAL BREAK
SCROLL TO CONTINUE READING

6 ರಿಂದ 9ನೇ ತರಗತಿ ಮೌಲ್ಯಂಕನ ಪರೀಕ್ಷೆ ನಡೆಸುವಂತೆ ಶಿಕ್ಷಣ ಇಲಾಖೆ(Education Department)ಗೆ ಸಲಹೆ ಬಂದಿತ್ತು. 4 ದಿನದ ಹಿಂದೆ DSERT  ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಜೂಮ್ ಮೀಟಿಂಗ್ ಮೂಲಕ ಸಭೆ ನಡೆಸಿದ್ದರೂ. ಈ ಸಭೆಯಲ್ಲಿ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದರೂ.  


ಇದನ್ನೂ ಓದಿ : K Sudhakar: 'ಕರ್ನಾಟಕದ ಕೊರೋನಾ ಕೇಂದ್ರಬಿಂದುವಾಗಿದೆ ಬೆಂಗಳೂರು'


ಈ ಹಿಂದೆ, ಏಪ್ರಿಲ್ 30 ರೊಳಗೆ ಫಲಿತಾಂಶ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಶಿಕ್ಷಣ ಇಲಾಖೆ ಎಲ್ಲಾ ಶಾಲೆ(School)ಗಳಿಗೆ ನಿರ್ದೇಶನ ನೀಡಿತ್ತು. ಸಚಿವರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಮಕ್ಕಳನ್ನು ದೈಹಿಕವಾಗಿ ಮೌಲ್ಯಮಾಪನಕ್ಕೆ ಶಾಲೆಗಳಿಗೆ ಬರುವಂತೆ ಹೇಳಿಲ್ಲ ಎಂದು ತಿಳಿಸಲಾಗಿದೆ.


ಇದನ್ನೂ ಓದಿ : BS Yediyurappa: ಸರ್ವಪಕ್ಷಗಳ ಸಭೆಗೆ ಆಸ್ಪತ್ರೆಯಿಂದಲೇ ಹಾಜರಾದ ಸಿಎಂ ಬಿಎಸ್‌ವೈ..!


"ಮೌಲ್ಯಮಾಪನ ಮತ್ತು ಫಲಿತಾಂಶ(Result) ಪ್ರಕಟಣೆಯು ಮಕ್ಕಳ ಕಲಿಕೆಯ ಸಾಮರ್ಥ್ಯದ ಮೇಲೆ  ನಿರ್ಣಯಿಸಲು ಮಾತ್ರ ಒಂದು ಸಾಧನವಾಗಿರಬೇಕು. ಕಡಿಮೆ ಕಲಿಕೆಯ ಫಲಿತಾಂಶಗಳಿದ್ದಲ್ಲಿ, ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭದ ಸಮಯದಲ್ಲಿ ಸೇತುವೆ ಬಂದು ಭಾಗವಾಗಿ ಇದನ್ನು ಗಮನಿಸಬೇಕು, "ಸುರೇಶ್ ಕುಮಾರ್(S Suresh Kumar) ಹೇಳಿದರು.


ಇದನ್ನೂ ಓದಿ : BS Yediyurappa: ಆಸ್ಪತ್ರೆಗೆ ದಾಖಾಲಾಗಿರುವ ಸಿಎಂ ಬಿಎಸ್‌ವೈ ಆರೋಗ್ಯದಲ್ಲಿ ಚೇತರಿಕೆ!


ಈ ಮಧ್ಯೆ, 1 ರಿಂದ 8 ನೇ ತರಗತಿಗಳಿಗೆ ಮೇ 1 ರಿಂದ ಜೂನ್ 14 ರವರೆಗೆ ಬೇಸಿಗೆ ರಜೆ(Summer Holidays) ಘೋಷಿಸಲಾಗಿದೆ.  ಜೂನ್ 15 ರಿಂದ 2021 ರ ಶೈಕ್ಷಣಿಕ ವರ್ಷ ಆರಂಭವಾಗಲಿದೆ.


ಇದನ್ನೂ ಓದಿ : Kota Srinivas Poojary: ಧಾರ್ಮಿಕ ಕಾರ್ಯಕ್ರಮಗಳ ಮೇಲಿನ ಕ್ರಮಗಳನ್ನು ಸಡಿಲಿಸುವಂತೆ ಸಚಿವರಿಂದ ಸಿಎಂಗೆ ಒತ್ತಾಯ!


ಅಂತೆಯೇ, 8 ಮತ್ತು 9 ನೇ ತರಗತಿಗಳಿಗೆ ಮೇ 1 ರಿಂದ ಜುಲೈ 15 ರವರೆಗೆ ಬೇಸಿಗೆ ರಜೆ ಪ್ರಾರಂಭವಾಗುತ್ತದೆ.


ಇದನ್ನೂ ಓದಿ : "ಸರ್ಕಾರ ರಸಗೊಬ್ಬರ ಕಂಪೆನಿಗಳ ಜೊತೆ ಷಾಮೀಲಾಗಿ ರೈತರನ್ನು ಸುಲಿಗೆ ಮಾಡಲು ಹೊರಟಂತಿದೆ"


"ಜೂನ್ 21 ರಿಂದ ಜುಲೈ 5 ರವರೆಗೆ ವೇಳಾಪಟ್ಟಿಯ ಪ್ರಕಾರ ಎಸ್‌ಎಸ್‌ಎಲ್‌ಸಿ(SSLC) ಪರೀಕ್ಷೆ ನಡೆಯಲಿದೆ" ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.