K Sudhakar: 'ಕರ್ನಾಟಕದ ಕೊರೋನಾ ಕೇಂದ್ರಬಿಂದುವಾಗಿದೆ ಬೆಂಗಳೂರು'

ಕರ್ನಾಟಕ ಸರ್ಕಾರ ಇಂದು ರಾಜ್ಯದಲ್ಲಿ ಕಟ್ಟುನಿಟ್ಟಾದ ಕೋವಿಡ್ -19 ಕ್ರಮಗಳನ್ನು ಪ್ರಕಟಿಸಲಿದೆ.

Last Updated : Apr 20, 2021, 01:39 PM IST
  • ಕರ್ನಾಟಕದ ಕೊರೋನಾ ಪ್ರಕರಣಗಳ ಕೇಂದ್ರಬಿಂದುವಾಗಿ ಬೆಂಗಳೂರು ಹೊರಹೊಮ್ಮಿದೆ
  • ಕರ್ನಾಟಕ ಸರ್ಕಾರ ಇಂದು ರಾಜ್ಯದಲ್ಲಿ ಕಟ್ಟುನಿಟ್ಟಾದ ಕೋವಿಡ್ -19 ಕ್ರಮಗಳನ್ನು ಪ್ರಕಟಿಸಲಿದೆ.
  • ಸಂಪೂರ್ಣ ಲಾಕ್ ಡೌನ್ ಅನ್ನು ಸರ್ಕಾರ ಮತ್ತು ವಿರೋಧ ಪಕ್ಷಗಳಿಂದಲೂ ವಿರೋಧ ವ್ಯಕ್ತವಾಗಿದೆ.
K Sudhakar: 'ಕರ್ನಾಟಕದ ಕೊರೋನಾ ಕೇಂದ್ರಬಿಂದುವಾಗಿದೆ ಬೆಂಗಳೂರು'

ಬೆಂಗಳೂರು: ಕರ್ನಾಟಕದ ಕೊರೋನಾ ಪ್ರಕರಣಗಳ ಕೇಂದ್ರಬಿಂದುವಾಗಿ ಬೆಂಗಳೂರು ಹೊರಹೊಮ್ಮಿದೆ ಎಂದು  ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.

ರಾಜ್ಯಪಾಲ ವಜುಭಾಯ್ ವಾಲಾ ಮತ್ತು ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಿಎಂ ಬಿಎಸ್ ಯಡಿಯೂರಪ್ಪ(BS Yediyurappa) ಅವರ ಭೇಟಿಯ ನಂತರ ಕರ್ನಾಟಕ ಸರ್ಕಾರ ಇಂದು ರಾಜ್ಯದಲ್ಲಿ ಕಟ್ಟುನಿಟ್ಟಾದ ಕೋವಿಡ್ -19 ಕ್ರಮಗಳನ್ನು ಪ್ರಕಟಿಸಲಿದೆ. ವರದಿಗಳ ಪ್ರಕಾರ, ಸಂಪೂರ್ಣ ಲಾಕ್ ಡೌನ್ ಅನ್ನು  ಸರ್ಕಾರ ಮತ್ತು ವಿರೋಧ ಪಕ್ಷಗಳಿಂದಲೂ ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ : BS Yediyurappa: ಸರ್ವಪಕ್ಷಗಳ ಸಭೆಗೆ ಆಸ್ಪತ್ರೆಯಿಂದಲೇ ಹಾಜರಾದ ಸಿಎಂ ಬಿಎಸ್‌ವೈ..!

ಸೋಮವಾರ, ಕರ್ನಾಟಕ(Karnataka)ದಲ್ಲಿ 15,785 ಹೊಸ COVID -19 ಪ್ರಕರಣಗಳು ವರದಿಯಾಗಿದ್ದು, 146 ಜನ ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 11,76,850 ಮತ್ತು ಸಾವಿನ ಸಂಖ್ಯೆ 13,497 ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ : BS Yediyurappa: ಆಸ್ಪತ್ರೆಗೆ ದಾಖಾಲಾಗಿರುವ ಸಿಎಂ ಬಿಎಸ್‌ವೈ ಆರೋಗ್ಯದಲ್ಲಿ ಚೇತರಿಕೆ!

ನಿನ್ನೆ ಬೆಂಗಳೂರು ನಗರದಲ್ಲಿ ಮಾತ್ರ 9,618 ಹೊಸ ಪ್ರಕರಣಗಳು ದಾಖಲಾಗಿವೆ. ಕೊರೋನಾ(Corona) ಪಾಸಿಟಿವ್ ಪ್ರಕರಣಗಳ ಪಟ್ಟಿಯಲ್ಲಿ ಬೆಂಗಳೂರು ನಗರ ಅಗ್ರಸ್ಥಾನದಲ್ಲಿದ್ದು, ಒಟ್ಟು 5,56,253, ಮೈಸೂರು 62,319 ಮತ್ತು ಬಳ್ಳಾರಿ 42,339. 

ಇದನ್ನೂ ಓದಿ : Kota Srinivas Poojary: ಧಾರ್ಮಿಕ ಕಾರ್ಯಕ್ರಮಗಳ ಮೇಲಿನ ಕ್ರಮಗಳನ್ನು ಸಡಿಲಿಸುವಂತೆ ಸಚಿವರಿಂದ ಸಿಎಂಗೆ ಒತ್ತಾಯ!

ಇಲ್ಲಿಯವರೆಗೆ ಆಸ್ಪತ್ರೆ(Hospital)ಯಿಂದ  ಮನೆಗೆ  ಹೋದ ಸೋಂಕಿತರ ಸಂಖ್ಯೆ‌ ಬೆಂಗಳೂರು ನಗರದಲ್ಲಿ 4,47,854 ರೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಮೈಸೂರು 57,409 ಮತ್ತು ಬಳ್ಳಾರಿ 39,752 ಜನ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News