BS Yediyurappa: ಸರ್ವಪಕ್ಷಗಳ ಸಭೆಗೆ ಆಸ್ಪತ್ರೆಯಿಂದಲೇ ಹಾಜರಾದ ಸಿಎಂ ಬಿಎಸ್‌ವೈ..!

ಸರ್ವ ಪಕ್ಷಗಳ ಸಭೆಗೆ ವರ್ಚುವಲ್ ಮೂಲಕ  ಹಾಜರಾದ  ಸಿಎಂ ಬಿಎಸ್ ಯಡಿಯೂರಪ್ಪ

Last Updated : Apr 19, 2021, 06:36 PM IST
  • ಬೆಂಗಳೂರಿನಲ್ಲಿ ತಾಂಡವಾಡುತ್ತಿರುವ ಕೊರೋನಾ ನಿಯಂತ್ರ ಕುರಿತು ಇಂದು ಸರ್ವ ಪಕ್ಷಗಳ ಸಭೆ
  • ಸರ್ವ ಪಕ್ಷಗಳ ಸಭೆಗೆ ವರ್ಚುವಲ್ ಮೂಲಕ ಹಾಜರಾದ ಸಿಎಂ ಬಿಎಸ್ ಯಡಿಯೂರಪ್ಪ
  • ನಾಳೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಸರ್ವ ಪಕ್ಷಗಳ ಸಭೆ
BS Yediyurappa: ಸರ್ವಪಕ್ಷಗಳ ಸಭೆಗೆ ಆಸ್ಪತ್ರೆಯಿಂದಲೇ ಹಾಜರಾದ ಸಿಎಂ ಬಿಎಸ್‌ವೈ..!

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತಾಂಡವಾಡುತ್ತಿರುವ ಕೊರೋನಾ ನಿಯಂತ್ರ ಕುರಿತು ಇಂದು ಸರ್ವ ಪಕ್ಷಗಳ ಸಭೆಗೆ ಸಿಎಂ ಬಿಎಸ್ ಯಡಿಯೂರಪ್ಪ ವರ್ಚುವಲ್ ಮೂಲಕ  ಹಾಜರಾಗಿದ್ದಾರೆ.

ಸಿಎಂ ಯಡಿಯೂರಪ್ಪ(BS Yediyurappa) ಅವರಿಗೆ ಎರಡನೇ ಭಾರಿ ಕೊರೋನಾ ಪಾಸಿಟಿವ್ ಆದ ಕಾರಣ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಯುತ್ತಿದ್ದಾರೆ. 

ಇದನ್ನೂ ಓದಿ : BS Yediyurappa: ಆಸ್ಪತ್ರೆಗೆ ದಾಖಾಲಾಗಿರುವ ಸಿಎಂ ಬಿಎಸ್‌ವೈ ಆರೋಗ್ಯದಲ್ಲಿ ಚೇತರಿಕೆ!

ಆಸ್ಪತ್ರೆಯಿಂದಲೇ ಸರ್ವ ಪಕ್ಷಗಳ ಸಭೆಗೆ ಸಿಎಂ ಯಡಿಯೂರಪ್ಪ ವೀಡಿಯೋ ಕಾನ್ಫರೆನ್ಸ್(video conference) ಮೂಲಕ ಹಾಜರಾಗಿದ್ದಾರೆ. ಸಭೆಯಲ್ಲಿ ಬೆಂಗಳೂರಿನ ಕೋವಿಡ್-19 ನಿಯಂತ್ರಣದ ಕುರಿತಂತೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. 

ಇದನ್ನೂ ಓದಿ : Kota Srinivas Poojary: ಧಾರ್ಮಿಕ ಕಾರ್ಯಕ್ರಮಗಳ ಮೇಲಿನ ಕ್ರಮಗಳನ್ನು ಸಡಿಲಿಸುವಂತೆ ಸಚಿವರಿಂದ ಸಿಎಂಗೆ ಒತ್ತಾಯ!

ಈ ಕುರಿತು ನಾಳೆ ರಾಜ್ಯಪಾಲ ವಜುಭಾಯಿ ವಾಲಾ(vajubhai vala) ಅವರು ಸರ್ವ ಪಕ್ಷಗಳ ಸಭೆ ಕರೆದಿದ್ದಾರೆ. ಬೆಂಗಳೂರಿನ ಕೋವಿಡ್-19 ನಿಯಂತ್ರಣ ಕುರಿತಂತೆ ನಾಳಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಂಭವಿದೆ. 

ಇದನ್ನೂ ಓದಿ : "ಸರ್ಕಾರ ರಸಗೊಬ್ಬರ ಕಂಪೆನಿಗಳ ಜೊತೆ ಷಾಮೀಲಾಗಿ ರೈತರನ್ನು ಸುಲಿಗೆ ಮಾಡಲು ಹೊರಟಂತಿದೆ"

ಈ ಕುರಿತು ಟ್ವಿಟ್ಟರ್(Twitter) ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ ಕಚೇರಿ, ಬೆಂಗಳೂರು ಮಹಾನಗರದಲ್ಲಿ ಕೋವಿಡ್-19 ನಿಯಂತ್ರಣದ ಕುರಿತಂತೆ ಇಂದು ಸಂಬಂಧಪಟ್ಟ ಸಚಿವರುಗಳು, ಬೆಂಗಳೂರು ಶಾಸಕರು ಹಾಗೂ ಸಂಸದರುಗಳೊಂದಿಗೆ, ಆಸ್ಪತ್ರೆಯಿಂದಲೇ ವೀಡಿಯೋ ಸಂವಾದದ ಮೂಲಕ ಮುಖ್ಯಮಂತ್ರಿ ಸಿಎಂ ಬಿಎಸ್ ಯಡಿಯೂರಪ್ಪ ರವರು ಪಾಲ್ಗೊಂಡಿದ್ದಾರೆ ಎಂದು ಬರೆದುಕೊಂಡಿದೆ.

ಇದನ್ನೂ ಓದಿ : NWKRTC ಚಾಲಕನ ಸಾವು: ಮುಷ್ಕರ ನಿರತ ನೌಕರರ ವಿರುದ್ಧ ಸಾರಿಗೆ ಸಚಿವರು ಗರಂ!

ಸಭೆಯ ನಂತ್ರ ಸುದ್ದಿಗಾರ ಜೊತೆ ಮಾತನಾಡಿದ ಸಚಿವ ಆರ್ ಅಶೋಕ್(R Ashok), ಬೆಂಗಳೂರು ಮಹಾನಗರದಲ್ಲಿ ಕೋವಿಡ್-19 ನಿಯಂತ್ರಣದ ಕುರಿತಂತೆ ಚರ್ಚೆ ನಡೆದಿದೆ. ಆಸ್ಪತ್ರೆಗಳಲ್ಲಿ ಬೆಡ್ ಕೊರತೆಯ ಬಗ್ಗೆ ಚರ್ಚೆ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಬೆಡ್ ಪಡೆಯುತ್ತೇವೆ. ಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ. ದೊಡ್ಡ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸ್ಟೋರೇಜ್  ಇದೆ ಎಂದು ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News