ಕೊಲೆ ಮಾಡುವುದು ಬಿಜೆಪಿಗೆ RSSನಿಂದ ಬಂದಿರುವ ಬಂದಿರುವ ಗುಣ: ಕಾಂಗ್ರೆಸ್
ಇತಿಹಾಸದುದ್ದಕ್ಕೂ ಕೊಲೆ ರಾಜಕೀಯವನ್ನೇ ದಾಳ ಮಾಡಿಕೊಂಡು ಬಂದಿರುವ ಬಿಜೆಪಿ ಈಗಲೂ ಅದನ್ನೇ ಮುಂದುವರೆಸಿದೆ. ನಿಜಕ್ಕೂ ಕಾನೂನು ಪಾಲನೆಯಾಗುತ್ತಿದ್ದರೆ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಅವರನ್ನು ಬಂಧಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಬೆಂಗಳೂರು: ಟಿಪ್ಪು ಸುಲ್ತಾನ್ ರೀತಿ ಸಿದ್ದರಾಮಯ್ಯರನ್ನು ಹೊಡೀಬೇಕು ಎಂಬ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಹೇಳಿಕೆಗೆ ಕಾಂಗ್ರೆಸ್ ಕಿಡಿಕಾರಿದೆ. ಈ ಬಗ್ಗೆ ಗುರುವಾರ ಸರಣಿ ಟ್ವೀಟ್ ಮಾಡಿದ್ದು, ‘ಕೊಲೆ ಮಾಡುವುದು ಬಿಜೆಪಿಗೆ RSSನಿಂದ ಬಂದಿರುವ ಬಂದಿರುವ ಗುಣ’ವೆಂದು ಆಕ್ರೋಶ ವ್ಯಕ್ತಪಡಿಸಿದೆ.
ಸಿದ್ದರಾಮಯ್ಯರನ್ನೂ ಕೊಲ್ಲಲು ಕರೆ ಕೊಟ್ಟಿರುವುದು. ಈ ಕೊಲೆ ಮಾಡುವ ಯೋಚನೆ & ಯೋಜನೆ ಬಂದಿರುವುದು ಕೇಶವ ಕೃಪದಿಂದಲೋ, ನಾಗಪುರದಿಂದಲೋ ಬಿಜೆಪಿ? ಇಲ್ಲಿನ ಬಿಜೆಪಿಗರಿಗೂ ತಾಲಿಬಾನಿನ ಉಗ್ರರಿಗೂ ವ್ಯತ್ಯಾಸವಿಲ್ಲ!’ವೆಂದು ಕಾಂಗ್ರೆಸ್ ಟೀಕಿಸಿದೆ.
ಇದನ್ನೂ ಓದಿ: ಟಿಪ್ಪು ರೀತಿ ಹತ್ಯೆ ಹೇಳಿಕೆ ವಿಚಾರ: ಸಿದ್ದರಾಮಯ್ಯರ ಕ್ಷಮೆ ಕೋರಿದ ಸಚಿವ ಅಶ್ವತ್ಥ್ ನಾರಾಯಣ
ಅಶ್ವತ್ಥ್ ನಾರಾಯಣರನ್ನು ವಜಾಗೊಳಿಸಿ, ಕಾನೂನು ಕ್ರಮ ಜರುಗಿಸಬೇಕು’ ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಇದನ್ನೂ ಓದಿ: Siddaramaiah : 'ಹೊಡಿ, ಬಡಿ, ಕಡಿ ಅನ್ನೋದು ಬಿಜೆಪಿ ಸಂಸ್ಕೃತಿ'
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.