ಬೆಂಗಳೂರಿನ ಕಾರ್‌ ಗ್ಯಾರೇಜ್‌ನಲ್ಲಿ ಬೆಂಕಿ ಅವಘಡ - ಕೋಟ್ಯಾಂತರ ರೂ. ಮೌಲ್ಯದ ಐಷಾರಾಮಿ ಕಾರ್‌ಗಳು ಭಸ್ಮ

ಬೆಂಗಳೂರಿನ ಕಾರ್‌ ಗ್ಯಾರೇಜ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಐಶಾರಾಮಿ ಕಾರುಗಳು ಭಸ್ಮವಾಗಿವೆ.

Written by - Yashaswini V | Last Updated : Feb 16, 2023, 08:16 AM IST
  • ತಡರಾತ್ರಿ ಬೆಂಗಳೂರಿನ ಕಾರು ಗ್ಯಾರೇಜ್‌ನಲ್ಲಿ ಬೆಂಕಿ ಅವಘಡ
  • ಕೋಟ್ಯಾಂತರ ರೂ. ಮೌಲ್ಯದ ಐಷಾರಾಮಿ ಕಾರ್‌ಗಳು ಭಸ್ಮ..!
  • ರಾಮಮೂರ್ತಿನಗರದ ಕಸ್ತೂರಿನಗರದಲ್ಲಿ ನಡೆದಿರುವ ಘಟನೆ
ಬೆಂಗಳೂರಿನ ಕಾರ್‌ ಗ್ಯಾರೇಜ್‌ನಲ್ಲಿ ಬೆಂಕಿ ಅವಘಡ - ಕೋಟ್ಯಾಂತರ ರೂ. ಮೌಲ್ಯದ ಐಷಾರಾಮಿ ಕಾರ್‌ಗಳು ಭಸ್ಮ  title=
Fire Accident in Car Garage

ಬೆಂಗಳೂರು: ತಡರಾತ್ರಿ ಬೆಂಗಳೂರಿನ ರಾಮಮೂರ್ತಿನಗರದ ಕಸ್ತೂರಿನಗರದಲ್ಲಿ  ಕಾರು ಗ್ಯಾರೇಜ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಕೋಟ್ಯಾಂತರ ರೂ. ಮೌಲ್ಯದ ಐಷಾರಾಮಿ ಕಾರ್‌ಗಳು ಭಸ್ಮವಾಗಿರುವ ಘಟನೆ ನಡೆದಿದೆ. 

ಘಟನೆಯಲ್ಲಿ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ. ಈ ಅಗ್ನಿ ಅನಾಹುತದಲ್ಲಿ  ಹತ್ತಕ್ಕೂ ಅಧಿಕ ಕಾರುಗಳು ಸುಟ್ಟು ಕರಕಲಾಗಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ- ಹೊಸಪೇಟೆ-ಹಂಪಿ-ಗಂಗಾವತಿ ಮಾರ್ಗದಲ್ಲಿ ಬರಲಿದೆ ಚತುಷ್ಪಥ ರಸ್ತೆ..!

ರಾಮಮೂರ್ತಿನಗರದ ಕಸ್ತೂರಿನಗರದಲ್ಲಿರುವ ಚಾಂದ್ ಪಾಷ, ಎಂಬುವವರಿಗೆ ಸೇರಿದ ಗ್ಯಾರೇಜ್‌ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಐದಕ್ಕೂ ಅಧಿಕ ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ- ಪೊರಕೆಯೇ ಪರಿಹಾರ ಎಂಬ ಅಭಿಯಾನಕ್ಕೆ ಆಪ್ ಚಾಲನೆ

ಗ್ಯಾರೇಜ್‌ನಲ್ಲಿ ಸ್ಟಾಟರ್ ಕೆಲಸ ಮಾಡುವಾಗ ಬೆಂಕಿ ಕಿಡಿ ಹಾರಿ ಈ ಅನಾಹುತ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದಾಗ್ಯೂ, ಅಗ್ನಿ ಅನಾಹುತಕ್ಕೆ ನಿಖರ ಕಾರಣ ಏನು ಎಂಬ ಬಗ್ಗೆ ಇನ್ನೂ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News