ವಿಜಯೇಂದ್ರ ಬಿಜೆಪಿಯಲ್ಲಿರುವ ಕೆಜೆಪಿಯ ಅಧ್ಯಕ್ಷರೇ ಹೊರತು ಅಸಲಿ ಬಿಜೆಪಿಯ ಅಧ್ಯಕ್ಷರಲ್ಲ!
ನಿಗಮ-ಮಂಡಳಿ ನೇಮಕಾತಿ ವಿಚಾರವಾಗಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆರೋಪಿಸಿದ್ದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ‘ಹರಾಜು, ಖರೀದಿ, ಮಾರಾಟ, ಇವೆಲ್ಲವೂ ಬಿಜೆಪಿಯ ಪೇಟೆಂಟ್! ಬೇಕಿದ್ದರೆ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನೇ ಕೇಳಿ ನೋಡಿ ಎಂದು ಟೀಕಿಸಿದೆ.
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನ ಆಯ್ಕೆ ಕುರಿತು ಮಾಜಿ ಸಚಿವ ಅರವಿಂದ ಲಿಂಬಾವಳಿ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರರನ್ನು ನಾವು ಅಳೆದು, ತೂಗಿ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರವಾಗಿ ಟೀಕಿಸಿರುವ ಕಾಂಗ್ರೆಸ್ ‘ವಿಜಯೇಂದ್ರ ಬಿಜೆಪಿಯಲ್ಲಿರುವ ಕೆಜೆಪಿಯ ಅಧ್ಯಕ್ಷರೇ ಹೊರತು ಅಸಲಿ ಬಿಜೆಪಿಯ ಅಧ್ಯಕ್ಷರಲ್ಲ!’ವೆಂದು ವ್ಯಂಗ್ಯವಾಡಿದೆ.
ಬಿ.ವೈ.ವಿಜಯೇಂದ್ರ ಬಿಜೆಪಿಯಲ್ಲಿರುವ ಕೆಜೆಪಿಯ ಅಧ್ಯಕ್ಷರೇ ಹೊರತು ಅಸಲಿ ಬಿಜೆಪಿಯ ಅಧ್ಯಕ್ಷರಲ್ಲ! ಆರ್.ಅಶೋಕ್ ಮತ್ತು ವಿಜಯೇಂದ್ರರನ್ನು ಒಪ್ಪಿಕೊಳ್ಳಲು ಬಿಜೆಪಿಗರು ತಯಾರಿಲ್ಲ. ಆರ್.ಅಶೋಕ್ ಅವರೇ, ನೀವು ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡುವ ಮೊದಲು ನಿಮ್ಮ ಪಕ್ಷದ ನಾಯಕರ ವಿರುದ್ಧ ಹೋರಾಟ ನಡೆಸಬೇಕಾದ ಸ್ಥಿತಿ ಇದೆ, ದಿನಕ್ಕೊಬ್ಬರು ವಿರೋಧ ಪಕ್ಷದ ವಿರೋಧಿ ನಾಯಕರು ಹುಟ್ಟಿಕೊಳ್ಳುತ್ತಿದ್ದಾರೆ! 6 ತಿಂಗಳು ಸುದೀರ್ಘ ಸರ್ಕಸ್ ನಡೆಸಿದರೂ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಅಳೆದು ತೂಗಲು ಸಮಯ ಸಿಗಲಿಲ್ಲವೇ ಬಿಜೆಪಿ?’ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: ಉಗ್ರರ ವಿರುದ್ಧದ ಕಾದಾಟದಲ್ಲಿ ಹುತಾತ್ಮರಾಗಿದ್ದ ಯೋಧ
ಬಿಜೆಪಿ ಆರೋಪಕ್ಕೆ ತಿರುಗೇಟು
ನರಸೀಪುರ ತಾ.ನ ವಿವಿಧ ಗ್ರಾಮಗಳಲ್ಲಿ ಆನೆ ಪ್ರತ್ಯಕ್ಷ
ಬೀದಿ ಕಾಳಗವಾಗಿವುದು ನಿಶ್ಚಿತ!
‘ಬಿಜೆಪಿಯ ಆಂತರಿಕ ಕಲಹ ಈಗ ಬಹಿರಂಗ ಕಲಹವಾಗಿ ಮಾರ್ಪಟ್ಟಿದೆ, ಮುಂದೆ ಬೀದಿ ಕಾಳಗವಾಗಿವುದು ನಿಶ್ಚಿತ. ರಾಜ್ಯಾಧ್ಯಕ್ಷ, ವಿಪಕ್ಷ ನಾಯಕರನ್ನು ಬಿಜೆಪಿಗರು ಒಪ್ಪಿಕೊಳ್ಳಲು ತಯಾರಿಲ್ಲ ಎನ್ನುವುದು ಕನ್ನಡಿಯ ಪ್ರತಿಬಿಂಬದಷ್ಟೇ ಸತ್ಯ. ಈ ಅಸಮಧಾನ ಯಾಕಾಗಿ ಬಿಜೆಪಿ? ಆಯ್ಕೆಯಾದವರು ಅನರ್ಹರು ಎಂದೇ? ಅಥವಾ ಅಸೂಯೆಗಾಗಿಯೇ? ಬಿಜೆಪಿಗರೇ ಬೆಲೆ ಕೊಡದ ವಿಪಕ್ಷ ನಾಯಕನ ಮಾತಿಗೆ ಕಾಂಗ್ರೆಸ್ ಬೆಲೆ ಕೊಡಬೇಕೆ? ಆರ್.ಅಶೋಕ್ ಅವರು ಮೊದಲು ತಮ್ಮ ಪಕ್ಷದವರ ಮೆಚ್ಚುಗೆ ಪಡೆದು ಬರಲಿ, ನಂತರ ಕಾಂಗ್ರೆಸ್ ಬಗ್ಗೆ ಮಾತಾಡಲಿ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.