ಬೆಂಗಳೂರು: ಇನ್ನು ಒಂದೇ ತಿಂಗಳಲ್ಲಿ ಶಕ್ತಿ ಯೋಜನೆ ಸ್ಥಗಿತಗೊಳ್ಳಲಿದೆ ಎಂದು ಆರೋಪಿಸಿದ್ದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಶಕ್ತಿ ಯೋಜನೆ’ಯ ಯಶಸ್ಸು  ಬಿಜೆಪಿಯವರ ನಿದ್ದೆಗೆಡಿಸಿರುವುದರಲ್ಲಿ ಎರಡು ಮಾತಿಲ್ಲ. ‘ಶಕ್ತಿ ಯೋಜನೆ’ಗೆ ನಿಜವಾಗಲೂ ಶಕ್ತಿ ತುಂಬುತ್ತಿರುವ ಬಿಜೆಪಿಯವರಿಗೆ ಧನ್ಯವಾದಗಳು’ ಎಂದು ಟೀಕಿಸಿದೆ.


COMMERCIAL BREAK
SCROLL TO CONTINUE READING

ಶಕ್ತಿ ಯೋಜನೆ ಇನ್ನೊಂದು ತಿಂಗಳಿಗೆ ನಿಲ್ಲಲಿದೆ ಎಂದು‌ ಬಡಬಡಾಯಿಸುತ್ತಿರುವ ಬಿಜೆಪಿಯವರೇ.. ಶಕ್ತಿ ಯೋಜನೆ ಅನುಷ್ಠಾನವೇ ಆಗುವುದಿಲ್ಲ, ಸಾರಿಗೆ ಸಂಸ್ಥೆಗಳು ದಿವಾಳಿಯಾಗಲಿವೆ ಎಂದು ಬೊಬ್ಬೆ ಇಡುತ್ತಿದ್ದವರು ಇಂದು ಈಗಾಗಲೇ 2,000 ಕೋಟಿ ರೂ. ವೆಚ್ಚವಾಗಿದೆ, ಬಜೆಟ್‌ನಲ್ಲಿ ಮೀಸಲಿಟ್ಟಿರುವ ಹಣ ಖಾಲಿಯಾಗುತ್ತಿದೆ ಎನ್ನುತ್ತಿದ್ದಾರೆ.  ಬಜೆಟ್‍ನಲ್ಲಿ ಮೀಸಲಿಟ್ಟಿರುವ ಹಣವನ್ನು ಹೆಚ್ಚಿಸಿ ಸಾರಿಗೆ ಸಂಸ್ಥೆಗಳಿಗೆ‌ ಹಣ ನೀಡುವ ಜವಾಬ್ದಾರಿ ನಮ್ಮದಿದೆ’ ಎಂದು ಬಿಜೆಪಿಗೆ ಕಾಂಗ್ರೆಸ್ ಕುಟುಕಿದೆ.


ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಬಿಸಿಯೂಟ ನೌಕರರ ಪ್ರೊಟೆಸ್ಟ್


‘ಕಳೆದ 5 ವರುಷಗಳ ಬಿಜೆಪಿ ಆಡಳಿತದಲ್ಲಿ ಒಂದೇ‌ ಒಂದು ನೇಮಕಾತಿ ಮಾಡದೆ, ಬಸ್ಸುಗಳನ್ನು ಖರೀದಿಸದೆ, ಸಾರ್ವಜನಿಕರು ಡಕೋಟ ಬಸ್ಸಿನಲ್ಲಿ ಓಡಾಡುವಂತೆ ಮಾಡಿ, ಸಾರಿಗೆ ಸಂಸ್ಥೆಗಳಲ್ಲಿ 3,735 ಕೋಟಿ ರೂ. ಬಾಕಿ‌ ಹೊಣೆಗಾರಿಕೆ ಇಟ್ಟಿರುವ ಕೀರ್ತಿ ಬಿಜೆಪಿಯವರಿಗೆ ಸಲ್ಲಬೇಕು’ ಎಂದು ಕಾಂಗ್ರೆಸ್ ಟೀಕಿಸಿದೆ.


‘ಈಗಾಗಲೇ ನಾವು 5675  ಬಸ್ಸುಗಳ ಖರೀದಿಯ ಪ್ರಕ್ರಿಯೆ ಹಾಗೂ 8719 ಸಿಬ್ಬಂದಿಗಳ ನೇಮಕಾತಿಗೆ ಅನುಮತಿ‌ ನೀಡಿದ್ದೇವೆ. ನಮ್ಮ ಕೆಲಸವೇ‌ ನಮ್ಮ ಶಕ್ತಿ ಎಂದು ನಿರೂಪಿಸಿದ್ದೇವೆ. ಶಕ್ತಿ‌ ಯೋಜನೆಯು ಮುಂದಿನ 10 ವರ್ಷಗಳವರೆಗೆ ಯಾವುದೇ ಅಡೆತಡೆಯಿಲ್ಲದೆ ನಡೆಯಲಿದೆ. ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆಯ ನಮ್ಮ ಪ್ರಯಾಣ ಗುರಿ‌ ಮುಟ್ಟಲಿದೆ’ ಎಂದು ಕಾಂಗ್ರೆಸ್ ಭರವಸೆ ವ್ಯಕ್ತಪಡಿಸಿದೆ.


ಇದನ್ನೂ ಓದಿ: ಅರಣ್ಯ ಇಲಾಖೆ ಅಧಿಕಾರಿಗಳಿಗೆ ಲೋಕಾ ಅಧಿಕಾರಿಗಳ ಶಾಕ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.