ಬೆಂಗಳೂರು : ರಾಜ್ಯ ಸರ್ಕಾರ ಕೊರೋನಾ ಕಾರಣದಿಂದ ತಡೆ ಹಿಡಡಿದ್ದ ತುಟ್ಟಿ ಭತ್ಯೆ(DA)ಯನ್ನ ಶೇ.11 ರಷ್ಟು ಹೆಚ್ಚಿಸಿ ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಕೊರೋನಾದಿಂದಾಗಿ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಕಳೆದ(2020ರ ಜನವರಿಯಿಂದ) 3 ಕಂತುಗಳ ಡಿಎ(DA) ತಡೆ ಹಿಡಿಯಲಾಗಿತ್ತು. ಅಖಿಲ ಭಾರತ ಸೂಚ್ಯಂಕ ಆಧರಿಸಿ ಕಳೆದ ವಾರ ಕೇಂದ್ರ ಸರ್ಕಾರ ತನ್ನ ನೌಕರರ ಶೇ.11ರಷ್ಟು ಡಿಎ ಹೆಚ್ಚಿಸಿತ್ತು.


ಇದನ್ನೂ ಓದಿ : ಬಿ.ಎಸ್.ಯಡಿಯೂರಪ್ಪ ಬದಲಾದರೆ ಬಿಜೆಪಿಗೆ ದೊಡ್ಡ ಹೊಡೆತ: ಮಠಾಧಿಪತಿಗಳ ಖಡಕ್ ಎಚ್ಚರಿಕೆ..!


ಕೇಂದ್ರದ ಡಿಎ ಏರಿಕೆ ಆದೇಶ ಹೊರಬಿದ್ದ ಬಳಿಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಎಸ್ ಷಡಾಕ್ಷರಿ ನೇತೃತ್ವದ ನಿಯೋಗ ಸಿಎಂ ಬಿಎಸ್ ಯಡಿಯೂರಪ್ಪ(BS Yediyurappa)ರನ್ನು ಭೇಟಿ ಮನವಿ ಸಲ್ಲಿಸಿದ್ದರು. ತಕ್ಷಣವೇ ಬಾಕಿ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆ ಅಪರ ಮುಖ್ಯಕಾರ್ಯದರ್ಶಿಯವರಿಗೆ ಸಿಎಂ  ಬಿಎಸ್‌ವೈ ಆದೇಶಿಸಿದರು. 


ರಾಜ್ಯ ಸರ್ಕಾರಿ ನೌಕರರು, ನಿಗಮ ಮಂಡಳಿ ನೌಕರರು, ಪಿಂಚಣಿದಾರರಿಗೆ ಡಿಎ ಹೆಚ್ಚಳ(DA Hike) ಮಾಡಿರುವುದರಿಂದ ಸರ್ಕಾರಕ್ಕೆ 250 ಕೋಟಿ ರೂ. ಹೊರೆ ಬೀಳಲಿದೆ. 6 ಲಕ್ಷ ಸರ್ಕಾರಿ ನೌಕರರು ಮತ್ತು 3 ಲಕ್ಷ ನಿಗಮ ಮಂಡಳಿ ನೌಕರರು, 4.50 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ.


ಇದನ್ನೂ ಓದಿ : OMG: ಹಸುವಿನ ಹೊಟ್ಟೆಯಲ್ಲಿತ್ತು ಬರೋಬ್ಬರಿ 21 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ..!


ಸಿಎಂ ಬಿಎಸ್‌ವೈ ಸೂಚನೆಯು ಆರ್ಥಿಕ ಇಲಾಖೆ ಮೂಲಕ 2-3 ದಿನಗಳಲ್ಲಿ ಸರ್ಕಾರಿ ಆದೇಶ ಹೊರಬೀಳಲಿದೆ. ಜು.1ರಿಂದ ಬಿಡುಗಡೆ ಆಗುವ ಡಿಎ ಮೂಲ ವೇತನ(Salary)ದಲ್ಲಿ ಸೇರಿ ನೌಕರರ ಕೈ ಸೇರಲಿದೆ.


ರಾಜ್ಯದಲ್ಲಿ ಸರಾಸರಿ 50-60 ಸಾವಿರ ರೂ. ಸಂಬಳ ಪಡೆಯುವ ನೌಕರರ(Govt Employee) ಸಂಖ್ಯೆ ಹೆಚ್ಚಿದ್ದು, ಅವರಿಗೆ 5-6 ಸಾವಿರ ಹೆಚ್ಚಾಗಲಿದೆ. ಒಂದು ಲಕ್ಷ ಪಡೆಯುವವರಿಗೆ 10 ಸಾವಿರ ಹೆಚ್ಚಳವಾಗಲಿದೆ. ನಿವೃತ್ತ ನೌಕರರಿಗೆ ಸರಾಸರಿ 2.5 ಸಾವಿರದಿಂದ 4 ಸಾವಿರ ರೂ.ವರೆಗೆ ಪಿಂಚಣಿ ಹೆಚ್ಚಾಗಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ