ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ, ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಕೆಳಗಿಳಿಯುತ್ತಾರೆಂಬ ಊಹಾಪೋಹಗಳ ಮಧ್ಯೆ ಲಿಂಗಾಯತ ಮಠಾಧಿಪತಿಗಳು ಪಕ್ಷದ ಹೈಕಮಾಂಡ್ ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ ಬೆಂಗಳೂರಿನಲ್ಲಿ ಬಿಎಸ್ವೈ ಅವರನ್ನು ಭೇಟಿಯಾಗಿರುವ 30 ಮಠಾಧಿಪತಿಗಳು ಸಿಎಂಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ವೀರಶೈವ-ಲಿಂಗಾಯತ ರಾಜಕೀಯ ಮುಖಂಡರು ಕೂಡ ಬಿಎಸ್ವೈ ಬದಲಾವಣೆಗೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಜನಸಂಖ್ಯೆಯ ಶೇ.16 ರಷ್ಟಿದೆ ಅಂತಾ ಅಂದಾಜಿಸಲಾಗಿರುವ ಪ್ರಬಲ ಸಮುದಾಯದ ಅನೇಕ ಮಠಾಧಿಪತಿಗಳು ಮತ್ತು ನಾಯಕರು ಬಿಎಸ್ವೈ ಅವರನ್ನು ಸಿಎಂ ಸ್ಥಾನದಿಂದ ಕಳೆಗಿಳಿಸುವ ವಿಚಾರವಾಗಿ ಬಿಜೆಪಿ ಹೈಕಮಾಂಡ್(BJP HighCommand) ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ವೀರಶೈವ-ಲಿಂಗಾಯತ ಸಮುದಾಯವನ್ನು ಬಿಜೆಪಿಯ ಪ್ರಮುಖ ಶಕ್ತಿಯ ನೆಲೆ ಎಂದು ಪರಿಗಣಿಸಲಾಗಿದೆ. ಬಿಎಸ್ವೈ ಬದಲಾವಣೆ ಖಚಿತವೆನ್ನುವ ಊಹಾಪೋಹದೊಂದಿಗೆ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ಮುಖ್ಯಸ್ಥ ಶಾಮನೂರು ಶಿವಶಂಕರಪ್ಪ(Shamanuru Shivashankarappa)ನವರು 78 ವರ್ಷದ ಪ್ರಬಲ ಲಿಂಗಾಯತ ನಾಯಕನ ಬೆನ್ನಿಗೆ ನಿಂತಿದ್ದಾರೆ.
CM said that he isn't in a position to say much but will bow his head to whatever decision the High Command takes. But the concern of Mutt heads is that in this state if BJP is in power, it's because of the efforts of BS Yediyurappa & his close subordinates: Dingaleshwar Swamiji pic.twitter.com/c5CWfBmyj1
— ANI (@ANI) July 20, 2021
ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ ನಲ್ಲಿ ಯಾವುದೇ ಬಿರುಕು, ಭಿನ್ನಾಭಿಪ್ರಾಯವಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ
‘ಬಿಜೆಪಿ ನಾಯಕರು ಹಿಂದಿನ ಇತಿಹಾಸವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮಾಜಿ ಸಿಎಂಗಳಾದ ಎಸ್.ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಜೆ.ಎಚ್.ಪಟೇಲ್ ಮತ್ತು ಎಸ್.ಆರ್.ಬೊಮ್ಮಾಯಿ ಅವರೆಲ್ಲಾ ಇಂತಹ ಪ್ರಯತ್ನದಲ್ಲಿ ಸೋತು ಸುಣ್ಣವಾಗಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂಬುದು ಸಮುದಾಯದ ಇಚ್ಛೆಯಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಯಡಿಯೂರಪ್ಪ(BS Yediyurappa)ನವರು ತಳಮಟ್ಟದಿಂದ ಕಟ್ಟಿ ಬೆಳೆಸಿದ್ದಾರೆ. ಯಡಿಯೂರಪ್ಪನವರು ಇರುವವರೆಗೂ ವೀರಶೈವ ಮಹಾಸಭಾ ಅವರ ಬೆನ್ನಿಗಿರುತ್ತದೆ. ಅವರಿಗೆ ಏನಾದರೂ ತೊಂದರೆಯಾದರೆ, ಎಲ್ಲವೂ ಅಂದೇ ಕೊನೆಯಾಗಲಿದೆ’ ಅಂತಾ ಶ್ಯಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಲಿಂಗಾಯತ ಸಮುದಾಯದ ಪ್ರಮುಖ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಸಚಿವ ಎಂ.ಬಿ.ಪಾಟೀಲ್(MB Patil) ಕೂಡ ಬಿಎಸ್ವೈಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ಯಡಿಯೂರಪ್ಪನವರಂತಹ ಎತ್ತರದ ನಾಯಕನನ್ನು ಕೆಟ್ಟದಾಗಿ ನಡೆಸಿಕೊಂಡರೆ ಬಿಜೆಪಿಯು ಲಿಂಗಾಯತರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ. ‘ಪಕ್ಷವು ಬಿಎಸ್ವೈ ಕೊಡುಗೆಯನ್ನು ಗೌರವಿಸುವ ಮೂಲಕ ಗೌರವದಿಂದ ನೋಡಿಕೊಳ್ಳಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದು, ಉದ್ದೇಶಿತ ಬದಲಾವಣೆಗಳು ಬಿಜೆಪಿಯ ಆಂತರಿಕ ವಿಷಯಗಳಾಗಿರಬಹುದು. ಆದರೆ ಪಕ್ಷದ ನಾಯಕರು ಇದನ್ನು ಅರ್ಥಮಾಡಿಕೊಳ್ಳಬೇಕು ಅಂತಾ’ ಎಂ.ಬಿ.ಪಾಟೀಲ್ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: BS Yediyurappa: ‘ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ’
ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಮಠದ ಮುಖ್ಯಸ್ಥರಾದ ಶಿವಮೂರ್ತಿ ಮುರುಘಾ ಶರಣರು, ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀ ವೀರ ಸೋಮೇಶ್ವರ ಶಿವಚಾರ್ಯ ಸ್ವಾಮಿ, ಶ್ರೀಶೈಲ ಜಗದ್ಗುರು ಚೆನ್ನ ಸಿದ್ದರಾಮ ಪಂಡಿತಾರಾದ್ಯ ಸೇರಿದಂತೆ ಲಿಂಗಾಯತ-ವೀರಶೈವ ಸಮುದಾಯದ ಪ್ರಮುಖ ಪೀಠಾಧಿಪತಿಗಳು ಬಿಎಸ್ವೈ(BS Yediyurappa) ಅವರನ್ನು ಏನಾದರೂ ಬದಲಾವಣೆ ಮಾಡಿದರೆ ಬಿಜೆಪಿಗೆ ದೊಡ್ಡ ಹೊಡೆತ ಉಂಟಾಗುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ