ದಾವಣಗೆರೆ: ಕಾಂಗ್ರೆಸ್ ಪಕ್ಷದವರ 5 ವರ್ಷದ ಆಡಳಿದಿಂದ ಬೇಸತ್ತಿರುವ ರಾಜ್ಯದ ಜನರು ಅವರಿಗೆ ಮತ್ತೆ ಅಧಿಕಾರ ನೀಡಬಾರದೆಂದು ತೀರ್ಮಾನಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಬುಧವಾರ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ‘ಜನ ಸಂಕಲ್ಪ ಯಾತ್ರೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.


COMMERCIAL BREAK
SCROLL TO CONTINUE READING

ಕಾಂಗ್ರೆಸ್ ಪಕ್ಷವು ತನ್ನ 5 ವರ್ಷದ ಅಧಿಕಾರಾವಧಿಯಲ್ಲಿ ಜಗಳೂರನ್ನು ನಿರ್ಲಕ್ಷ್ಯ ಮಾಡಿದೆ. ಮೈತ್ರಿ ಸರ್ಕಾರವೂ ನಿರ್ಲಕ್ಷ ತೋರಿದೆ‌. ಕಾಂಗ್ರೆಸ್ ನವರು ಜನರಿಗೆ ಕೇವಲ ಮಾತಿನಿಂದ ನೀರು ಕುಡಿಸಿದ್ದರು. ಆದರೆ ಮನೆಗಳಿಗೆ ನೀರು ಮಾತ್ರ ಬಂದಿರಲಿಲ್ಲ. ಏನೂ ಮಾತನಾಡದೆ ಜನರ ಕೆಲಸ ಮಾಡುತ್ತಿರುವುದು ಬಿಜೆಪಿ ಸರ್ಕಾರ. ಕಾಂಗ್ರೆಸ್ ನವರು ಸುಳ್ಳು ಆಶ್ವಾಸನೆಗಳನ್ನು ನೀಡಿದರು ಎಂದು ಕಿಡಿಕಾರಿದರು.


ಇದನ್ನೂ ಓದಿ: ಮನೆ ಕಟ್ಟಿಕೊಡದ ಬಿಲ್ಡರ್ ಗೆ ಬಡ್ಡಿ ಸಹಿತ ಪರಿಹಾರ ನೀಡಲು ಗ್ರಾಹಕ ಆಯೋಗದ ಆದೇಶ


ಕಾಂಗ್ರೆಸ್‍ನ ಯಾವ ಭಾಗ್ಯ ಯೋಜನೆಗಳೂ ಜನರನ್ನು ತಲುಪಲಿಲ್ಲ. ಅನ್ನ ಭಾಗ್ಯ, SC/ST, ಹಾಸ್ಟೆಲ್ ಗಳ ದಿಂಬು-ಹಾಸಿಗೆ ಖರೀದಿಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿದರು. ಮೀಸಲಾತಿ ಹೆಚ್ಚಳದ 50 ವರ್ಷದ ಬೇಡಿಕೆಯನ್ನು ಕಾಂಗ್ರೆಸ್ ಈಡೇರಿಸಲಿಲ್ಲ. ಕಾಂಗ್ರೆಸ್ ನಾಯಕರು ತಾವು ಅಧಿಕಾರದಲ್ಲಿದ್ದಾಗ ಕೆಲಸ ಮಾಡದಿದ್ದ ಮೀಸಲಾತಿ ಹೆಚ್ಚಳವನ್ನು ನಾವಿಗ ಮಾಡಿರುವುದನ್ನು ವಿರೋಧಿಸುತ್ತಿದ್ದಾರೆ ‌ಎಂದರು.


ಸಿದ್ದರಾಮಯ್ಯ ಆಡಳಿತದಿಂದ ಜನರಿಗೆ ಭ್ರಮನಿರಸನ


ಅಹಿಂದದ ಬಗ್ಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯನವರಿಗೆ ಅಧಿಕಾರ ಕೊಟ್ಟು ನೋಡೋಣವೆಂದು ಎಲ್ಲರಿಗೂ ಆಸೆ ಇತ್ತು. ಆದರೆ 5 ವರ್ಷಗಳ ಸಿದ್ದರಾಮಯ್ಯರ ಆಡಳಿತದಿಂದ ರಾಜ್ಯದ ಜನರಿಗೆ ಭ್ರಮನಿರಸನವಾಗಿದೆ.  ಜನಗಣತಿಯ ಸಮೀಕ್ಷೆಯ ಪ್ರಕಾರ ಮೀಸಲಾತಿಯನ್ನು ನೀಡಿ ಎಂದು ಹೋರಾಟ ಮಾಡಿದರೂ  ಪ್ರಯೋಜನವಾಗಿರಲಿಲ್ಲ ಎಂದು ಸಿಎಂ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.


ಇದನ್ನೂ ಓದಿ: KMF : ಸಾಮಾನ್ಯ ಜನರಿಗೆ ಬಿಗ್ ಶಾಕ್ : ನಾಳೆಯಿಂದ ಹಾಲು - ಮೊಸರಿನ ದರ ಏರಿಕೆ


ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಭೈರತಿ ಬಸವರಾಜ, ಬಿ.ಶ್ರೀರಾಮುಲು, ಸಂಸದರಾದ ಜಿ.ಎಂ.‌ಸಿದ್ದೇಶ್ವರ್, ಶಾಸಕರಾದ ಎಸ್.ವಿ.ರಾಮಚಂದ್ರಪ್ಪ, ಎಂ.ಪಿ.ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ಕೆ.ಎಸ್.‌ನವೀನ್ ಹಾಗೂ ಮತ್ತಿತರರು ಹಾಜರಿದ್ದರು.‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.