KMF : ಸಾಮಾನ್ಯ ಜನರಿಗೆ ಬಿಗ್ ಶಾಕ್ : ನಾಳೆಯಿಂದ ಹಾಲು - ಮೊಸರಿನ ದರ ಏರಿಕೆ

ಇಂದು ನಡೆದಿದೆ ಆಡಳಿತ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತವು, ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.

Written by - Channabasava A Kashinakunti | Last Updated : Nov 23, 2022, 06:09 PM IST
  • ನಾಳೆಯಿಂದ ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆ
  • ಪ್ರತಿ ಲೀಟರ್ ಗೆ ಎರಡು ರೂಪಾಯಿ ಹೆಚ್ಚಳ
  • ಇಂದು ನಡೆದಿದೆ ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನ
KMF : ಸಾಮಾನ್ಯ ಜನರಿಗೆ ಬಿಗ್ ಶಾಕ್ : ನಾಳೆಯಿಂದ ಹಾಲು - ಮೊಸರಿನ ದರ ಏರಿಕೆ title=

ಬೆಂಗಳೂರು : ನಾಳೆಯಿಂದ ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆ ಮಾಡಲಾಗಿದೆ. ಪ್ರತಿ ಲೀಟರ್ ಗೆ ಎರಡು ರೂಪಾಯಿ ಹೆಚ್ಚಿಸಿ ಕೆಎಂಎಫ್ ಆದೇಶ ಹೊರಡಿಸಿದೆ. 

ಇಂದು ನಡೆದಿದೆ ಆಡಳಿತ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತವು, ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.

ಇದನ್ನೂ ಓದಿ : ನಾಲ್ಕು ದಿನಗಳಿಂದ ಇಂದಿರಾ ಕ್ಯಾಂಟೀನ್ ಗಳು ಬಂದ್, ಜನರ ಪರದಾಟ.!

ಕೆಎಂಎಫ್ ನವೆಂಬರ್ 14 ರಂದು ಪ್ರತಿ ಲೀಟರ್ ಹಾಲು ಮತ್ತು ಮೊಸರಿನ ದರವನ್ನು 3 ರೂ. ಏರಿಕೆ ಮಾಡಿತ್ತು. ಆದರೆ, ಈ ಏರಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಒಪ್ಪದ ಕಾರಣ ಪರಿಷ್ಕೃತ ದರ ತಡೆ ಹಿಡಿಯಲಾಗಿತ್ತು.

ನ. 21 ರಂದು ಸಿಎಂ ಬೊಮ್ಮಾಯಿ ಅವರು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಜತೆ ಚರ್ಚೆ ನಡೆಸಿ ಪ್ರತಿ ಲೀಟರ್ ಗೆ ಹಾಲು ಮತ್ತು ಮೊಸರಿನ ದರವನ್ನು 3 ರೂ. ಏರಿಕೆ ಮಾಡುವುದು ಬೇಡ. ಗ್ರಾಹಕರಿಗೆ ಹಾಗೂ ಹಾಲು ಉತ್ಪಾದಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ದರ ಏರಿಕೆ ಬಗ್ಗೆ ಎಲ್ಲ ಹಾಲು ಒಕ್ಕೂಟಗಳ ಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ ಮಾಡುವಂತೆ ಸೂಚಿಸಿದ್ದರು. 

ಅದರಂತೆ ಇಂದು ಕೆಎಂಎಫ್ ಅಧ್ಯಕ್ಷ ಜಾರಕಿಹೊಳಿ ನೇತೃತ್ವದಲ್ಲಿ ಇಂದು ಮಧ್ಯಾಹ್ನ ಸಭೆ ನಡೆದಿದ್ದು, ಈ ಸಭೆಯಲ್ಲಿ ಪ್ರತಿ ಲೀಟರ್ ಹಾಲು ಮತ್ತು ಮೊಸರಿನ ದರವನ್ನು 2 ರೂ.ಗೆ ಏರಿಕೆ ಮಾಡಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಕೆಎಂಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ, ಗ್ರಾಹಕರಿಗೆ, ರೈತರಿಗೆ ಹೊರೆ ಯಾಗದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಎರಡು ರೂ. ದರ ಹೆಚ್ಚಳ ಮಾಡಿದ್ದೇವೆ. ಇದು ನಾಳೆಯಿಂದಲೇ ಹೆಚ್ಚಳ ದರ ಜಾರಿಗೆ ಬರಲಿದೆ. ಇದಕ್ಕೆ ಗ್ರಾಹಕರು ಸಹಕಾರ‌ ಕೊಡಬೇಕು ಎಂದು ಮನವಿ ಮಾಡಿದರು. 

ಇನ್ನು ಮುಂದುವರೆದು ಮಾತನಾಡಿದ ಅವರು, ಪ್ರತಿ ಲೀಟರ್ ಹಾಲಿಗೆ 2 ರೂಪಾಯಿ, ಪ್ರತಿ ಕೆಜಿ ಮೊಸರಿಗೆ 2 ರೂಪಾಯಿ ಏರಿಕೆ ಮಾಡಲಾಗಿದೆ. ಈ ಹಣವನ್ನು‌ ನೇರವಾಗಿ ರೈತರಿಗೆ ನೀಡಲಾಗುತ್ತದೆ.  ಗ್ರಾಹಕರು ನಮಗೆ ಸಾಥ್‌ ನೀಡಬೇಕು. ರೈತರಿಗೆ ಅನುಕೂಲ ಆಗಬೇಕು. 

ಇದನ್ನೂ ಓದಿ : ರಮೇಶ್ ಕುಮಾರ್ ವಿರುದ್ಧ ಅಸಭ್ಯ ಪದಬಳಕೆ; ಕ್ಷಮೆಯಾಚಿಸಿದ ಎಚ್‌ಡಿಕೆ

77 ಲಕ್ಷ ಲೀಟರ್ ಹಾಲು ಬರುತ್ತೆ. 27 ಲಕ್ಷ ಲೀಟರ್‌ ನಷ್ಟು ಹಾಲು ಪೌಡರ್ ಆಗುತ್ತದೆ. ಅದರ ಹಣ ರೈತರಿಗೆ ಕೊಡುವುದು ನಿಧಾನವಾಗುತ್ತೆ. 50 ಲಕ್ಷ ಲೀಟರ್ ಹಾಲಿನ ಹಣ ಕೂಡಲೇ ಸಿಗುತ್ತೆ. ಕೆಎಂಎಫ್‌ಗೆ ಒತ್ತಡ ಆದ್ರೂ, ರೈತರಿಗೆ 193 ಕೋಟಿ ಸಬ್ಸಿಡಿ ರೂಪದಲ್ಲಿ ನೀಡಿದ್ದೇವೆ. ನಮಗೆ ಕ್ಷೀರಭಾಗ್ಯ ಯೋಜನೆಯಿಂದ ಪ್ರತಿನಿತ್ಯ 8 ಲಕ್ಷ ಲೀಟರ್ ಹಾಲು ನೀಡ್ತಿದ್ದೇವೆ. ಸಾಮಾನ್ಯ ದರಕ್ಕಿಂತ ಕಡಿಮೆ ದರಕ್ಕೆ ನೀಡಲಾಗ್ತಿದೆ. ತಿಂಗಳಿಗೆ ಇದರಿಂದ ಸುಮಾರು 10 ಕೋಟಿ ಲಾಸ್ ಆಗ್ತಿದೆ. ಇಂದು ರಾತ್ರಿ 11 ಗಂಟೆಯ ನಂತರ ದರ ಏರಿಕೆಯಾಗಲಿದೆ. 

ದೇಶದಲ್ಲಿ ಹಾಲಿನ ದರದಲ್ಲಿ 8ನೇ ಸ್ಥಾನದಲ್ಲಿ ನಾವಿದ್ದೇವೆ. ದೀಪಾವಳಿ ಸಂದರ್ಭದಲ್ಲಿ ಮಾತ್ರ ತುಪ್ಪದ ಬೆಲೆ ಜಾಸ್ತಿಯಾಗಿತ್ತು. ಅನಿವಾರ್ಯ ಕಾರಣದಿಂದ ಜಾಸ್ತಿ ಮಾಡಿದ್ದು ನಿಜ. ಇನ್ನು ಜಾಸ್ತಿ ಮಾಡಲ್ಲ ಎಂದು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News