ಮೈಸೂರು : ಸ್ಯಾಂಡಲ್‌ವುಡ್‌ ಸಿಂಹ, ನಟ ಡಾ. ವಿಷ್ಣುವರ್ಧನ್​ ಅವರಿಗೆ ʼಕರ್ನಾಟಕ ರತ್ನʼ ಪ್ರಶಸ್ತಿ ನೀಡುವ ಬಗ್ಗೆ ಮುಂದಿನ ದಿನಗಳಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ʼಯಜಮಾನʼನ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ನಟ ಡಾ. ವಿಷ್ಣುವರ್ಧನ್‌ ಅವರ ಸ್ಮಾರಕ ಉದ್ಘಾಟನೆ ಮಾಡಿ ಮಾತನಾಡುವ ವೇಳೆ ವಿಷ್ಣು ಅಭಿಮಾನಿಗಳು ʼಮಾನ್ಯ ಮುಖ್ಯಮಂತ್ರಿಗಳೇ ಡಾ. ವಿಷ್ಣುವರ್ಧನ್ ಅವರು ಕರ್ನಾಟಕ ರತ್ನ ಅಲ್ಲವೇ.. ಎಂಬ ಪೋಸ್ಟರ್ ಹಿಡಿದು ಮುಖ್ಯಮಂತ್ರಿಗಳಿಗೆ ಪ್ರಶ್ನೆ ಮಾಡಿದರು. ಅಲ್ಲದೆ, ʼಆಪ್ತಮಿತ್ರʼನಿಗೆ ಕರ್ನಾಟಕ ರತ್ನ ಕೊಡಬೇಕೆಂದು ಪಟ್ಟು ಹಿಡಿದರು. ಈ ವೇಳೆ ಪ್ಯಾನ್ಸ್‌ಗಳನ್ನು ಸಮಾಧಾನ ಮಾಡಲು ಬಂದ ನಟ ಅನಿರುದ್ದ್ ಮಾತಿಗೂ ಅವಕಾಶ ಕೊಡದೆ ಕರ್ನಾಟಕ ರತ್ನ ಪ್ರಶಸ್ತಿಗೆ ಪಟ್ಟು ಅಭಿಮಾನಿಗಳು ಪಟ್ಟು ಹಿಡಿದರು.


ಇದನ್ನೂ ಓದಿ: ನನ್ನ ಮುಂದಿನ ಜನ್ಮ ಶಿಗ್ಗಾವಿಯಲ್ಲೇ ಆಗಲಿ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ


ನಂತರ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತು ಪ್ರಾರಂಭಿಸಿ, ವಿಷ್ಣುವರ್ಧನ್ ಅವ್ರ ಕಲೆ, ಸಾಹಸ, ಚಿತ್ರರಂಗದಲ್ಲಿ ಮಾಡಿರೋ ಸಾಧನೆ ನಮ್ಮ ಕಣ್ಣ ಮುಂದೆ ಇದೆ. ನಾನು ಒಬ್ಬ ವಿಷ್ಣುವರ್ಧನ್ ಅಭಿಮಾನಿಯಾಗಿ ಇಲ್ಲಿ ಬಂದಿದ್ದೇನೆ. 70 ರ ದಶಕದಲ್ಲಿ ನಾಗರಹಾವಿನ ಮೂಲಕ ನಾಯಕ ನಟನಾಗಿ ಚಿತ್ರರಂಗೆ ಬಂದ್ರು. ಅವರನ್ನು ಮೊದಲ ಸಲಾ ನೋಡಿದವ್ರು ಖಂಡಿತವಾಗಿ ಫ್ಯಾನ್ ಆಗ್ತಾ ಇದ್ರು. ನಾಗರಹಾವು ಚಿತ್ರದ ಮೂಲಕ ನಾಡಿನ ಜನಮನ ಗೆದ್ದವ್ರು ಡಾ. ವಿಷ್ಣುವರ್ಧನ್ ಎಲ್ಲಾ ರೀತಿಯ ಪಾತ್ರಗಳನ್ನ ಮಾಡಿ ಸಾಹಸ ಸಿಂಹನಾಗಿ ಕರ್ನಾಟಕದಲ್ಲಿ ಮೆರೆದವರು ಎಂದು ವಿಷ್ಣು ಅವರ ಸಾಧನೆಯನ್ನು ನೆನೆದರು.


ಅಲ್ಲದೆ, ಹಲವು ಭಾಷೆಗಳಲ್ಲಿ ನಟಿಸಿ ವಿಷ್ಣುವರ್ಧನ್‌ ಅವರು ಕರ್ನಾಟಕದ ಧ್ವಜ ಎತ್ತಿ ಹಿಡಿದವರು. ಎಂಥಹದ್ದೆ ಪಾತ್ರ ಕೊಟ್ಟರೂ ತುಂಬಾ ಚೆನ್ನಾಗಿ ನಟಿಸುತ್ತಿದ್ದರು. ಇಂದಿಗೂ ಕೂಡ ವಿಷ್ಣುವರ್ಧನ್ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ವಿಷ್ಣುವರ್ಧನ್ ಭಾವುಕ ಜೀವಿ, ಮಾನವೀಯತೆಯಿಂದ ಮೆರೆದವರು. ಅವ್ರ ಪಾತ್ರದಲ್ಲಿಯೂ ಮಾನವೀಯತೆ ಎದ್ದು ಣುತ್ತಿತ್ತು. ಸ್ಮಾರಕ ವಿಚಾರದಲ್ಲಿ ಸ್ಥಳದ ಕುರಿತು ಹಲವು ವಿವಾದಗಳು ಎದ್ದವು. ಅವ್ರು ಮೈಸೂರಿನವ್ರು, ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣ ಆಗಬೇಕು ಎಂದು ಗಟ್ಟಿಯಾಗಿ ನಿಂತರು. ಯಡಿಯೂರಪ್ಪ ಅವರು 11 ಕೋಟಿ ರೂ. ನೀಡಿದ್ದರು. ಇದಕ್ಕಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. 


ಇದನ್ನೂ ಓದಿ: IAF Fighter Jets Crash : ಯುದ್ದ ವಿಮಾನ ಅಪಘಾತದಲ್ಲಿ ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹುತಾತ್ಮ!


ವಿಷ್ಣುವರ್ಧನ್‌ ಅವರ ಸ್ಮಾರಕ ಒಂದು ಇನ್ಸ್ಟಿಟ್ಯೂಟ್ ಆಗಲು ನಾವು ಶ್ರಮಿಸುತ್ತೇವೆ. ವಿಷ್ಣುವರ್ಧನ್‌ ಅವರಿಗೆ ʼಕರ್ನಾಟಕ ರತ್ನʼ ನೀಡುವಂತೆ ಅಭಿಮಾನಿಗಳ ಒತ್ತಾಯದ ಹಿನ್ನಲೆ. ಅಭಿಮಾನಿಗಳ ಭಾವನೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತೇವೆ. ಮುಂದಿನ ದಿನಗಳಲ್ಲಿ ಕರ್ನಾಟಕ ರತ್ನ ನೀಡೋ ಬಗ್ಗೆ ತೀರ್ಮಾನ ಮಾಡ್ತೇವೆ ಎಂದು ವಿಷ್ಣು ಸ್ಮಾರಕ ಉದ್ಘಾಟನೆ ವೇಳೆ ಸಿಎಂ ಬಸವರಾಜ ಬೊಮ್ಮಯಿ ಭರವಸೆಯ ಮಾತುಗಳನ್ನಾಡಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.