ನನ್ನ ಮುಂದಿನ ಜನ್ಮ ಶಿಗ್ಗಾವಿಯಲ್ಲೇ ಆಗಲಿ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

 

Written by - Zee Kannada News Desk | Last Updated : Jan 29, 2023, 12:50 AM IST
  • ನಿಮ್ಮ ಆಶೀರ್ವಾದ, ನಿಮ್ಮ ಬೆಂಬಲ ಮತ್ತು ಪ್ರಾಮಾಣಿಕವಾದ ಹಾರೈಕೆಗೆ ಬೆಲೆ ಕಟ್ಟಲು ಆಗುವುದಿಲ್ಲ
  • ನನಗೆ ಸಾಕಷ್ಟು ಪ್ರೀತಿ ವಿಶ್ವಾಸ ಕೊಟ್ಟಿದ್ದೀರಿ. ಈ ಮಣ್ಣಿನ ಋಣವನ್ನು ಎಂದಿಗೂ ತೀರಿಸಲು ಸಾದ್ಹವಿಲ್ಲ
  • ಮುಂದಿನ ಜನ್ಮ ಇದ್ದರೆ ಶಿಗ್ಗಾಂವಿಯಲ್ಲಿ ಆಗಲಿ ಎಂದು ಬಯಸುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು
 ನನ್ನ ಮುಂದಿನ ಜನ್ಮ ಶಿಗ್ಗಾವಿಯಲ್ಲೇ ಆಗಲಿ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ title=
screengrab

ಶಿಗ್ಗಾವಿ: ನಿಮ್ಮ ಆಶೀರ್ವಾದ, ನಿಮ್ಮ ಬೆಂಬಲ ಮತ್ತು ಪ್ರಾಮಾಣಿಕವಾದ ಹಾರೈಕೆಗೆ ಬೆಲೆ ಕಟ್ಟಲು ಆಗುವುದಿಲ್ಲ. ನನಗೆ ಸಾಕಷ್ಟು ಪ್ರೀತಿ ವಿಶ್ವಾಸ ಕೊಟ್ಟಿದ್ದೀರಿ. ಈ ಮಣ್ಣಿನ ಋಣವನ್ನು ಎಂದಿಗೂ ತೀರಿಸಲು ಸಾದ್ಹವಿಲ್ಲ. ಮುಂದಿನ ಜನ್ಮ ಇದ್ದರೆ ಶಿಗ್ಗಾಂವಿಯಲ್ಲಿ ಆಗಲಿ ಎಂದು ಬಯಸುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಅವರು ಇಂದು ತಮ್ಮ 63 ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಶಿಗ್ಗಾಂವಿಯಲ್ಲಿ ಜರುಗಿದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಮಾತನಾಡಿದರು.

ಇದನ್ನೂ ಓದಿ: ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಮೊಟ್ಟಮೊದಲ ಬಾರಿಗೆ ಶ್ರೀ ಶ್ರೀ ಪ್ರಶಸ್ತಿ 2023 ಪ್ರಧಾನ

ನಿಮ್ಮ ಆಶೀರ್ವಾದದಿಂದ ರಾಜ್ಯದ ಸೇವೆ ಮಾಡುತ್ತಿದ್ದೇನೆ

ಶಿಗ್ಗಾಂವಿನ ಮಹಾಜನತೆ ಮುಂದೆ ನಾನು ಸೋತಿದ್ದೀನಿ. ನನ್ನ ಜೀವನದಲ್ಲಿ ಪ್ರಥಮ ಬಾರಿಗೆ ನಾನು ಸಾರ್ವಜನಿಕವಾಗಿ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ತೀದ್ದೀನಿ. ನಿಮ್ಮ ಜೊತೆಗೆ ನಾನು ಸದಾಕಾಲ ಸಮಯ ಕಳೆದಿದ್ದೇನೆ‌. ಆದರೆ ಕಳೆದ ಒಂದೂವರೆ ವರ್ಷದಿಂದ ನಾನು ನಿಮಗೆ ಸಮಯ ಕೊಡಲು ಆಗಲಿಲ್ಲ ಎನ್ನುವ ನೋವು ನನ್ನಲ್ಲಿದೆ. ಆದ್ರೆ ನಿಮ್ಮ ಆಶೀರ್ವಾದದಿಂದ ನಾನು ರಾಜ್ಯವನ್ನು ಮುನ್ನಡೆಸುವ ಹೊಣೆಗಾರಿಕೆ ಇಟ್ಟುಕೊಂಡು ಕರ್ತವ್ಯ ಪ್ರಜ್ಞೆಯಿಂದ ರಾಜ್ಯದ ಸೇವೆ ಮಾಡುತ್ತಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ: IAF Fighter Jets Crash : ಯುದ್ದ ವಿಮಾನ ಅಪಘಾತದಲ್ಲಿ ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹುತಾತ್ಮ!

ನನ್ನ ಈ ಹುಟ್ಟುಹಬ್ಬ ಚಿರಸ್ಮರಣೀಯ

ಇದು ಪ್ರೀತಿ ವಿಶ್ವಾಸವನ್ನು ಹಂಚಿಕೊಳ್ಳುವ ಅಮೃತ ಘಳಿಗೆಯ ಸಮಯ. ರಾಜ್ಯಕ್ಕೆ ಮುಂದಿನ ದಿನಗಳಲ್ಲಿ ಬರುವ ಹಲವು ಸವಾಲುಗಳನ್ನು ಅತ್ಯಂತ ದಿಟ್ಟತನದಿಂದ ಎದುರಿಸಿ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗುತ್ತೇನೆ. ಸ್ವಾಮೀಜಿಗಳ ಹಾಗೂ ಜನರ ಆಶೀರ್ವಾದ, ಮಾರ್ಗದರ್ಶನ ನನಗೆ ಕಾಲ ಕಾಲಕ್ಕೆ ಸಿಗುತ್ತಿದೆ. ಬುದ್ಧಿವಂತಿಕೆ ಮತ್ತು ಪ್ರಾಮಾಣಿಕತೆ ಎಲ್ಲಿದೆಯೋ ಅಲ್ಲಿ ಯಶಸ್ಸು ಇರುತ್ತೆ. ನಮ್ಮ ಕಠಿಣ ಪರಿಶ್ರಮವೂ ಯಶಸ್ಸು ತಂದುಕೊಡುತ್ತದೆ. ನೀವು ರಾಜ್ಯದ ಕೆಲಸ ನೋಡಿ ನಾವು ಕ್ಷೇತ್ರ ನೋಡಿಕೊಳ್ಳುತ್ತೇವೆ ಅಂತ ನೀವು ಸಂದೇಶ ನೀಡಿದ್ದೀರಿ. ಈ ಹುಟ್ಟುಹಬ್ಬವನ್ನು ಚಿರಸ್ಮರಣೀಯ ಮಾಡಿದ್ದೀರಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News