ಬೆಳಗಾವಿ : ಮಧ್ಯಪ್ರದೇಶದ ಮೊರೆನಾದಲ್ಲಿ ಭಾರತೀಯ ಯುದ್ದ ವಿಮಾನಗಳು ಪರಸ್ಪರ ಡಿಕ್ಕಿಯಾಗಿ ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹನುಮಂತರಾವ್ ಆರ್ ಸಾರಥಿ ಹುತಾತ್ಮರಾದ ಘಟನೆ ನಡೆದಿದೆ.
ಕಮಾಂಡರ್ ಹನುಮಂತರಾವ್ ಅವರು ಬೆಳಗಾವಿ ನಗರದ ಗಣೇಶಪುರದ ನಿವಾಸಿಯಾಗಿದ್ದು, ಅವರು ತಂದೆ, ತಾಯಿ, ಹೆಂಡತಿ ಇಬ್ಬರು ಮಕ್ಕಳನ್ನ ಬಿಟ್ಟು ಅಗಲಿದ್ದಾರೆ.
ಇದನ್ನೂ ಓದಿ : Siddaramaiah : 'ನಾನು ಉತ್ತರ ಕರ್ನಾಟಕ ಭಾಗದ 112 ಕ್ಷೇತ್ರದಲ್ಲಿ ಯಾತ್ರೆ ಮಾಡುತ್ತೆನೆ'
ಗಣೇಶಪುರದ ಹನುಮಂತರಾವ್ ಮನೆಗೆ ಬೆಳಗಾವಿಯ ಏರ್ಪೋರ್ಸ್ ಟ್ರೈನಿಂಗ್ ಸೆಂಟರ್‌ನ ಅಧಿಕಾರಿಗಳು ಭೇಟಿ ನೀಡಿದ್ದಾರೆ. ವಿಂಗ್ ಕಮಾಂಡರ್ ಸಾವಿನ ಸುದ್ದಿ ತಿಳಿದ ಹನುಮಂತರಾವ್ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮಧ್ಯಪ್ರದೇಶದ ಮೊರೆನಾ ಸಮೀಪ ಸುಖೋಯ್ 30 ಹಾಗೂ ಒಂದು ಮಿರಾಜ್ 2000 ಯುದ್ಧವಿಮಾನ ಪತನವಾಗಿತ್ತು. ಈ ಎರಡೂ ವಿಮಾನಗಳು ಗ್ವಾಲಿಯರ್ ವಾಯುನೆಲೆಯಿಂದ ಟೇಕಾಫ್ ಆಗಿದ್ದವು. ಘಟನೆಗೆ ಕಾರಣ ತಿಳಿಯಲು ಭಾರತೀಯ ವಾಯುಪಡೆ ತನಿಖೆಗೆ ಆದೇಶ ಮಾಡಿದೆ.
ಇದನ್ನೂ ಓದಿ : ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಮೊಟ್ಟಮೊದಲ ಬಾರಿಗೆ ಶ್ರೀ ಶ್ರೀ ಪ್ರಶಸ್ತಿ 2023 ಪ್ರಧಾನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.