ಬೆಂಗಳೂರು: ಹಿಜಾಬ್ ಟೆನ್ಶನ್ ನಡುವೆ  ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಲಿದ್ದು,  ರಾಜ್ಯದಲ್ಲಿ ಒಟ್ಟು 8,73,846 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಜ್ಜಾಗಿದ್ದರೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.‌


COMMERCIAL BREAK
SCROLL TO CONTINUE READING

ಕಳೆದ ಎರಡು ವರ್ಷಗಳಿಂದ ಕೊರೊನಾವೈರಸ್ (Coronavirus) ಭಯದ ನಡುವೆ ಕೇವಲ ಮೂರು ದಿನ ಮಾತ್ರ ಪರೀಕ್ಷೆ ನಡೆದಿತ್ತು. ಆದರೆ ಈ ವರ್ಷ ಯಾವುದೇ ಭಯವಿಲ್ಲದೆ ಪರೀಕ್ಷೆ ನಡೆಯಲಿದೆ. ಮಾರ್ಚ್ 28 ರಿಂದ ಏಪ್ರಿಲ್ 11ರವರೆಗೆ, ಬೆಳಗ್ಗೆ 10:30ಕರಿಂದ ಮಧ್ಯಾಹ್ನ 01:45ರವರೆಗೆ ಪರೀಕ್ಷೆ ನಡೆಯಲಿದೆ. 


ಪರೀಕ್ಷೆ ವೇಳಾಪಟ್ಟಿ:
28-3-2022- ಪ್ರಥಮ ಭಾಷೆ
30-3-2022- ದ್ವಿತೀಯ ಭಾಷೆ
1-4-2022- ಅರ್ಥ ಶಾಸ್ತ್ರ, ಕೋರ್ ಸುಬ್ಜೆಕ್ಟ್ಸ್
4-4-2022- ಗಣಿತ, ಸಮಾಜಶಾಸ್ತ್ರ
6-4-2022- ಸಮಾಜ ವಿಜ್ಞಾನ
8-4-2022- ತೃತೀಯ ಭಾಷೆ
11-4-2022- ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ/ ಹಿಂದೂಸ್ತಾನಿ ಸಂಗೀತ.


ಇದನ್ನೂ ಓದಿ- ಏಪ್ರಿಲ್ 8 ರಿಂದ ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳ


ಪರೀಕ್ಷೆಗೆ ತಯಾರಿ:
ಮಾರ್ಚ್ 28 ರಿಂದ ಎಪ್ರಿಲ್ 11ರವರೆಗೆ ನಡೆಯಲಿರುವ ಪರೀಕ್ಷೆ

* ಪರೀಕ್ಷೆ ಬರೆಯಲಿರುವ 8,73,846 ವಿದ್ಯಾರ್ಥಿಗಳು
* ಗಂಡು ಮಕ್ಕಳು - 4,52,732
* ಹೆಣ್ಣು ಮಕ್ಕಳು , 4,21,110
* ತೃತಿಯ ಲಿಂಗಿಗಳು - 04 
* ವಿಭಿನ್ನ ಸಾಮಾರ್ಥ್ಯವುಳ್ಳ ವಿದ್ಯಾರ್ಥಿಗಳು - 5,307 
* ಒಟ್ಟು 8,73,846 ವಿದ್ಯಾರ್ಥಿಗಳು


ಪರೀಕ್ಷೆಗೆ ನೋಂದಾಯಿತ ಒಟ್ಟು ಶಾಲೆಗಳ ಸಂಖ್ಯೆ - 15,387
>> ಸರ್ಕಾರಿ - 5,717
>> ಅನುದಾನಿತ - 3,412
>> ಅನುದಾನ ರಹಿತ - 6,258
>> ಒಟ್ಟು ಶಾಲೆಗಳು - 15,387


ಪರೀಕ್ಷಾ ಕೇಂದ್ರಗಳ ಸಂಖ್ಯೆ - 3,444
ಎಸ್‌ಎಸ್‌ಎಲ್‌ಸಿ ಪರೀಕ್ಷೆಗಾಗಿ (SSLC Exam) 45,289 ಪರೀಕ್ಷಾ ಕೊಠಡಿಗಳ ಸಿದ್ಧತೆ ಮಾಡಲಾಗಿದ್ದು, 3,444 ಮುಖ್ಯ ಅಧಿಕ್ಷಕರು ಹಾಗೂ  49,817 ಕೊಠಡಿ ಮೇಲ್ವಿಚಾರಕರ  ನೇತೃತ್ವದಲ್ಲಿ ಪರೀಕ್ಷೆ ನಡೆಯಲಿದೆ. 


ಇದನ್ನೂ ಓದಿ- ರಾಜ್ಯದ ಆರು ಸ್ಥಳಗಳಲ್ಲಿ ಚಿತ್ರ ಕಲಾ ಗ್ಯಾಲರಿಗಳನ್ನು ಪ್ರಾರಂಭಿಸಲು ಕ್ರಮ‌-ಸಿಎಂ ಬೊಮ್ಮಾಯಿ


ಹಿಜಾಬ್ ದರಿಸಿ ಬಂದ್ರೆ ಪರೀಕ್ಷೆಗೆ ಇಲ್ಲ ಅವಕಾಶ:
ಹಿಜಾಬ್ ದರಿಸಿ ಪರೀಕ್ಷೆ ಬರೆಯಲು ಬರುವ ಮುಸ್ಲೀಂ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಅವಕಾಶ ನೀಡಿಲ್ಲ. ನಿಯಮ‌ 1995 ರ ನಿಯಮ 11ರಲ್ಲಿ ಇರುವ ಅಧಿಕಾರದನ್ವಯ ಸಮವಸ್ತ್ರ ಜಾರಿ ಮಾಡಿದೆ. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಶಾಲಾ ಸಮವಸ್ತ್ರ ಕಡ್ಡಾಯ ಹಾಗೂ ಖಾಸಗಿ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿಗಳು ನಿರ್ಧರಿಸಿರುವ ಸಮವಸ್ತ್ರ ಕಡ್ಡಾಯವಾಗಿದೆ. ಇನ್ನು ಪರೀಕ್ಷೆಯಲ್ಲಿ ಗೈರಾದ ಹಾಗೂ ಫೇಲಾದ ವಿದ್ಯಾರ್ಥಿಗಳಿಗೆ  ಶಿಕ್ಷಣ ಇಲಾಖೆ ಸಿಹಿ ಸುದ್ದಿ ನೀಡಿದೆ‌. ಪರೀಕ್ಷೆಯಲ್ಲಿ ಗೈರು ಹಾಜರಾಗುವ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಿದೆ.
 
ಇನ್ನೊಂದೆಡೆ ಪರೀಕ್ಷೆ ವೇಳೆ ಮಕ್ಕಳ ಆರೋಗ್ಯದ ಬಗ್ಗೆಯೂ ನಿಗಾ ವಹಿಸಲಾಗಿದ್ದು ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಹಾಗೂ ಮೇಲ್ವಿಚಾರಕರು ಮಾಸ್ಕ್ ಧರಿಸುವುದರ ಜೊತೆಗೆ, ಸಾಮಾಜಿಕ ಅಂತರ ಕಡ್ಡಾಯ ಮಾಡಲಾಗಿದೆ. ಪರೀಕ್ಷೆ ಕೇಂದ್ರಗಳಲ್ಲಿ ರಿಜಿಸ್ಟರ್ ನಂಬರ್ ಸಾಮಾಜಿಕ ಅಂತರದ ಬಾಕ್ಸ್ ಗಳು ಹಾಕಿಕೊಂಡು ಸಿದ್ದತೆ ಮಾಡಿಕೊಂಡಿದ್ದಾರೆ. ಇದಲ್ಲದೆ, ಕೋವಿಡ್ ಪಾಸಿಟಿವ್ ಆಗಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆ  ಪ್ರತ್ಯೇಕ ಕೊಠಡಿ ವ್ಯವಸ್ಥೆಯನ್ನು ಸಹ ಮಾಡಿದೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.