ಬೆಂಗಳೂರು : ರಾಜ್ಯದಲ್ಲಿ ಕರೋನಾ ಲಸಿಕೆ (Coronavaccine) ಕೊರತೆಯಾಗದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಸುಧಾಕರ್ (DR K Sudhakar) ಅವರು ಹೇಳಿದ್ದಾರೆ. ಕರೋನಾ ಸೋಂಕು ನಿಯಂತ್ರಣಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ಜರುಗಿಸಲಾಗಿದೆ ಎಂದು ಅವರು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಮುಂದಿನ ವಾರ ಕೇಂದ್ರದಿಂದ  ರಾಜ್ಯಕ್ಕೆ 12.5 ಲಕ್ಷ ಕೊರೋನಾ ಲಸಿಕೆ (Corona Vaccine)ಬರುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ (DR. K. Sudhakar)ಹೇಳಿದ್ದಾರೆ. ಅಲ್ಲದೆ ಸೂಕ್ತ ಪ್ರಮಾಣದಲ್ಲಿ ಲಸಿಕೆ ಪೂರೈಸುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದೆ ಎಂದವರು ಹೇಳಿದ್ದಾರೆ. ರಾಜ್ಯದಲ್ಲಿ ಕರೋನ ಲಸಿಕೆ ಕೊರತೆಯಾಗದಂತೆ ನೋಡಿಕೊಳ್ಳುವುದಾಗಿ ಕೇಂದ್ರ ಭರವಸೆ ನೀಡಿದೆ ಎಂದು ಸುಧಾಕರ್ ಇದೇ  ಸಂದರ್ಭದಲ್ಲಿ ತಿಳಿಸಿದ್ದಾರೆ.  ಇಂದು 4 ಲಕ್ಷ ಡೋಸ್ ಲಸಿಕೆಯನ್ನು (vaccination) ಕೇಂದ್ರದಿಂದ ತರಿಸಿಕೊಳ್ಳಲಾಗುವುದು ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ.  


ಇದನ್ನೂ ಓದಿ : Coronavirus: ಮೈಸೂರಿನಲ್ಲಿ ಮತ್ತೆ ಕೋವಿಡ್ ಆತಂಕ, ಒಂದೇ ಶಾಲೆಯ 19 ಮಕ್ಕಳಿಗೆ ಕರೋನ ದೃಢ


ಕೇಂದ್ರದಿಂದ ಬಂದಿರುವ ಲಸಿಕೆಗಳನ್ನು ಅಗತ್ಯಕ್ಕನುಗುಣವಾಗಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ (Government hospitals) ಪೂರೈಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಇಲ್ಲಿವರೆಗೆ, ರಾಜ್ಯದಲ್ಲಿ 27,10,904 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿರುವ ಬಗ್ಗೆ  ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.  


ಇದನ್ನೂ ಓದಿ HD Kumaraswamy,:'ಕೊರೋನಾ ಲಸಿಕೆ'ಯ ಮೊದಲ ಡೋಸ್ ಪಡೆದ ಹೆಚ್ ಡಿಕೆ 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.