ಕೊಪ್ಪಳ: ವ್ಯಕ್ತಿಯೊಬ್ಬರು 105 ಕೆಜಿ ತೂಕದ‌ ಜೋಳದ ಚೀಲ‌ ಹೊತ್ತು ಇತಿಹಾಸ ಪ್ರಸಿದ್ಧ ಅಂಜನಾದ್ರಿ ಬೆಟ್ಟವನ್ನು ಏರಿದ್ದಾರೆ. ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ ಹನುಮಂತಪ್ಪ ಅವರೇ ಬೆಟ್ಟ ಏರಿದ ವ್ಯಕ್ತಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತ ಏರಿ ಹನುಮಂತಪ್ಪ ಅವರು ಭಕ್ತಿ ಪ್ರದರ್ಶನ ಮಾಡಿದ್ದಾರೆ. 105 ಕೆಜಿ ತೂಕದ ಜೋಳದ ಚೀಲವನ್ನು ಹೊತ್ತು 575 ಮೆಟ್ಟಿಲು ಹತ್ತಿ ಸಾಹಸ ಮೆರೆದಿದ್ದಾರೆ.


ಇದನ್ನೂ ಓದಿ: ಜೆಡಿಎಸ್ ಅಭ್ಯರ್ಥಿಗಳಿಗೆ ಎಚ್ಚರಿಕೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ


ಅಂಜಾನಾದ್ರಿ ಬೆಟ್ಟವನ್ನು ಹತ್ತಿದ ಹನುಮಂತಪ್ಪ ದೇವಸ್ಥಾನಕ್ಕೆ ಜೋಳವನ್ನು ಕಾಣಿಕೆಯಾಗಿ ನೀಡಿದ್ದಾರೆ. ಬೆಟ್ಟ ಏರಿದ ಹನುಮಂತಪ್ಪನ ಸಾಹಸಕ್ಕೆ ಜನರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.


ಕಳೆದ 4 ದಿನಗಳ ಹಿಂದಷ್ಟೇ ಬಾಗಲಕೋಟೆ ಮೂಲದ ವ್ಯಕ್ತಿಯೊಬ್ಬರು 110 ಕೆಜಿ ಜೋಳದ ಚೀಲ ಹೊತ್ತು ಬೆಟ್ಟ ಏರಿದ್ದರು. ಇದೀಗ 105 ಕೆಜಿ ಜೋಳದ ಚೀಲವನ್ನು ಹೊತ್ತು ಬೆಟ್ಟ ಹತ್ತಿದ ಹನುಮಂತಪ್ಪ ಸಾಹಸ ಮಾಡಿದ್ದಾರೆ.


ಇದನ್ನೂ ಓದಿ: ಕರಕುಶಲ ಪರಂಪರೆಯ ಪುನರುಜ್ಜೀವನಕ್ಕೆ ಸಾಥ್ ನೀಡಿದ ಆರ್ಟ್ ಆಫ್ ಲಿವಿಂಗ್‌..!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.