ನಕಲಿ ಬಿಎಡ್ ಅಂಕಪಟ್ಟಿ ಪಡೆದು ವಾರ್ಡನ್ ಹುದ್ದೆಯಿಂದ ಪ್ರಾಂಶುಪಾಲ ಹುದ್ದೆಗೇರಿದ ಶಿಕ್ಷಕ

ನಕಲಿ ಬಿಎಡ್ ಅಂಕಪಟ್ಟಿ ಪಡೆದು ವಾರ್ಡನ್ ಹುದ್ದೆಯಿಂದ ಪ್ರಾಂಶುಪಾಲ ಆಗಿರುವ ಘಟನೆ ನಗರದಲ್ಲಿ ನಡೆದಿದೆ.

Written by - Zee Kannada News Desk | Last Updated : Apr 1, 2023, 10:12 AM IST
  • ಯುಪಿ ರಾಜ್ಯದ ಅಂಕಪಟ್ಟಿ ಮಾನ್ಯತೆ ಇಲ್ಲದೆ ಇದ್ದರೂ, ಅದನ್ನ ಕೊಟ್ಟು ಸರ್ಕಾರಕ್ಕೆ ಮೋಸವೆಸಗಿದ್ದಾರೆ.
  • ಹುಬ್ಬಳ್ಳಿಯ ಆಲ್ ಮಿಜಾನ್ ಎಜುಕೇಶನ್ ಅಸೋಸಿಯೇಷನ್ ಕಾಲೇಜಿನಲ್ಲಿ ಕಾನೂನು ಬಾಹಿರ ರೆಗ್ಯುಲರ್ ಬಿಎಡ್ ಪದವಿ ಪಡೆದಿದ್ದಾರೆ.
  • ಈಗ ಅವರ ವಿರುದ್ಧ ಕರ್ತವ್ಯದಲ್ಲಿ ಇದ್ದುಕೊಂಡೆ ಸರ್ಕಾರಕ್ಕೆ ನಂಬಿಕೆ ದ್ರೋಹ ಮಾಡಿದ ಆರೋಪದಡಿ ದೂರು ಧಾರವಾಡ ಉಪನಗರ ಠಾಣೆಯಲ್ಲಿ ದಾಖಲಾಗಿದೆ.
 ನಕಲಿ ಬಿಎಡ್ ಅಂಕಪಟ್ಟಿ ಪಡೆದು ವಾರ್ಡನ್ ಹುದ್ದೆಯಿಂದ ಪ್ರಾಂಶುಪಾಲ ಹುದ್ದೆಗೇರಿದ ಶಿಕ್ಷಕ  title=

ಧಾರವಾಡ: ನಕಲಿ ಬಿಎಡ್ ಅಂಕಪಟ್ಟಿ ಪಡೆದು ವಾರ್ಡನ್ ಹುದ್ದೆಯಿಂದ ಪ್ರಾಂಶುಪಾಲ ಆಗಿರುವ ಘಟನೆ ನಗರದಲ್ಲಿ ನಡೆದಿದೆ.

ಇದರ ವಿರುದ್ಧ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಸಿದ್ದಪ್ಪ ಅಕ್ಕಿ ಎನ್ನುವವರು ಡಾ.ಯಲ್ಲಪ್ಪಗೌಡ ಪಿ.ಕಲ್ಲನಗೌಡರ್ ಎಂಬ ಪ್ರಾಂಶುಪಾಲನ ವಿರುದ್ಧ ದೂರು ಸಲ್ಲಿಸಿದ್ದಾರೆ.ನಕಲಿ ಅಂಕಪಟ್ಟಿ ನೀಡಿ ಧಾರವಾಡದ ಮುತ್ತಣ್ಣ ಸ್ಮಾರಕ ಪೊಲೀಸ್ ವಸತಿ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕಲ್ಲನಗೌಡರ್ ಸೇವೆಸಲ್ಲಿಸುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: "ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯ ಎಂದಿಗೂ ಬೇರೆಯವರ ತಟ್ಟೆಯ ಅನ್ನ ಕಿತ್ತು ತಿನ್ನುವುದಿಲ್ಲ"

ಪ್ರಾಂಶುಪಾಲ ಹುದ್ದೆ ಗಿಟ್ಟಿಸುವ ದುರುದ್ದೇಶದಿಂದ ಉತ್ತರ ಪ್ರದೇಶದ ಬಿಎಡ್ ನಕಲಿ ಅಂಕಪಟ್ಟಿ ಮಾಡಿಸಿದ್ದು, 2001ರಲ್ಲೇ ಉತ್ತರ ಪ್ರದೇಶದ ಡಿಪಾರ್ಟ್ಮೆಂಟ್ ಆಫ್ ಓಪನ್ ಡಿಸ್ಟನ್ಸ್ ಎಜುಕೇಶನ್ ಕೇಂದ್ರದ ಅಂಕಪಟ್ಟಿಯನ್ನು ಸರ್ಕಾರಕ್ಕೆ  2006ರಲ್ಲಿ ವಾರ್ಡನ್ ಹುದ್ದೆಯಿಂದ ನೇರವಾಗಿ ಪ್ರಾಚಾರ್ಯ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕಳಪೆ ಬೀಜ ಪೂರೈಸಿದ ಗಂಗಾ ಕಾವೇರಿ ಸೀಡ್ಸ್ ಕಂಪನಿಗೆ 1.25 ಲಕ್ಷ ರೂ ದಂಡ 

ಯುಪಿ ರಾಜ್ಯದ ಅಂಕಪಟ್ಟಿ ಮಾನ್ಯತೆ ಇಲ್ಲದೆ ಇದ್ದರೂ, ಅದನ್ನ ಕೊಟ್ಟು ಸರ್ಕಾರಕ್ಕೆ ಮೋಸವೆಸಗಿದ್ದಾರೆ.ಇಷ್ಟೇ ಅಲ್ಲದೇ 2007-08 ಸಾಲಿನಲ್ಲಿ ಕರ್ತವ್ಯದಲ್ಲಿದ್ದರೂ ಮತ್ತೊಮ್ಮೆ ಹುಬ್ಬಳ್ಳಿಯ ಆಲ್ ಮಿಜಾನ್ ಎಜುಕೇಶನ್ ಅಸೋಸಿಯೇಷನ್ ಕಾಲೇಜಿನಲ್ಲಿ ಕಾನೂನು ಬಾಹಿರ ರೆಗ್ಯುಲರ್ ಬಿಎಡ್ ಪದವಿ ಪಡೆದಿದ್ದಾರೆ.ಈಗ ಅವರ ವಿರುದ್ಧ ಕರ್ತವ್ಯದಲ್ಲಿ ಇದ್ದುಕೊಂಡೆ ಸರ್ಕಾರಕ್ಕೆ ನಂಬಿಕೆ ದ್ರೋಹ ಮಾಡಿದ ಆರೋಪದಡಿ ದೂರು ಧಾರವಾಡ ಉಪನಗರ ಠಾಣೆಯಲ್ಲಿ ದಾಖಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

 

 

Trending News