ಬೆಂಗಳೂರು: ಯಾವ ಗಲಾಟೆನೂ ಇಲ್ಲ, ಏನು ಇಲ್ಲ. ನಾನು ಕ್ರಾಸ್ ಚೆಕ್ ಮಾಡಿದೆ, ಆ ಥರ ಏನೂ ಇಲ್ಲ.  ಯಾವ ಗಲಾಟೆನೂ ಇಲ್ಲ. ಯಾರೋ ಮಿಸ್ ಗೈಡ್ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ನಾನು ಸಿದ್ದು ಹಳ್ಳೇಗೌಡ ಜೊತೆ  ಫೋನ್ ನಲ್ಲಿ ಮಾತನಾಡಿದೆ. ನನ್ನ ಫೋನ್ ತಗೊಂಡು ಯಾರೋ ಈ ರೀತಿ ಮಾಡಿದ್ದಾರೆ ಅಂತ ಹೇಳಿದ್ದಾರೆ. ಕೆಲಸ ಮಾಡ್ತಾ ಇದ್ದಾರೆ ಅಂದ್ರೆ ಅವರ ವಿರುದ್ಧ ಈ ರೀತಿ ಏನೋ ಒಂದ್ ಕೇಳಿ ಬರುತ್ತಾಯಿರುತ್ತೆ. ಯಾರೇ ಪಕ್ಷದಲ್ಲಿ ತಪ್ಪು ಮಾಡಿದ್ರೆ ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು ತಿಳಿಸಿದ್ದಾರೆ.


ಸಿಎಂ ಮನೆ ಮುಂದೆ ಪ್ರತಿಭಟನೆ ವಿಚಾರ: 


ನಾನು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದೆ. ಇಂದು ಸಿಎಂ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಕ್ರಮ ತೆಗೆದುಕೊಳ್ಳುತ್ತೇವೆ‌ ಅಂತ ಹೇಳಿದ್ದಾರೆ. ಅವರ ಮೇಲೆ ಇನ್ನೂ ಆ್ಯಕ್ಷನ್ ತೆಗೆದುಕೊಂಡಿಲ್ಲ. ಬರೀ ನಮ್ಮ ಮೇಲೆ ಕೇಸ್ ಹಾಕಿದ್ದಾರೆ. ಅವರ ಮೇಲೆ ಕೇಸ್ ಯಾಕೆ ಇಲ್ಲ. ನಾವು ಸುಮ್ಮನೇ ಕೂರಲ್ಲ. ಸಿದ್ದರಾಮಯ್ಯ (Siddaramaiah) ಜೊತೆ ಫೋನ್ ನಲ್ಲಿ ಮಾತನಾಡಿದ್ದೇನೆ. ಎಲ್ಲರ ಮೇಲೂ ಕ್ರಮತೆಗೆದುಕೊಳ್ಳಿ ಅಂತ ಹೇಳಿದ್ದೇವೆ ಎಂದು ಹೇಳಿದ್ದಾರೆ.  


ಎಲ್ಲೆಲ್ಲಿ ಕೋವಿಡ್ ನಿಯಮಗಳು (Corona Rules) ಉಲ್ಲಂಘನೆ ಯಾಗಿದೆ ಅಲ್ಲಿ ಕ್ರಮತೆಗೆದುಕೊಳ್ಳಬೇಕು. ಡೆಪ್ಯೂಟಿ ಕಮಿಷನರ್ ಹಾಗೂ ಎಸ್‌ಪಿ ಮೇಲೆ ಕ್ರಮ ತೆಗೆದುಕೊಳ್ಳಲಿ. ಯಾವ ಬಿಜೆಪಿ ನಾಯಕರ ಮೇಲೆ ಕೇಸ್ ಹಾಕಿಲ್ಲ‌. ಯಾರೋ ಒಬ್ಬರು ಮೇಲೆ ಹಾಕಿದ್ದಾರೆ ಅಷ್ಟೆ. ಎಲ್ಲಾ ಅಧಿಕಾರಿಗಳ ವಿರುದ್ಧ ಹೋರಾಟ ಮಾಡ್ತೀವಿ ಎಂದು ಹೇಳಿದ್ದಾರೆ. 


ಜನರ ಪ್ರಾಣ ತೆಗೆಯುತ್ತಿದ್ದಾರೆ. ಬದುಕಿದ್ದವರನ್ನ ಸಾಯಿಸುತ್ತಿದ್ದಾರೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ ತೊಂದರೆಯಾಗಿದೆ. ಲಂಡನ್ ನಲ್ಲಿ ಯಾವ ಲಾಕ್ ಡೌನ್, ಕರ್ಫ್ಯೂ ಇಲ್ಲ. ನಿನ್ನೆ ಹೈದರಾಬಾದ್ ಗೆ ಹೋಗಿದ್ದೆ, ಅಲ್ಲೂ ಏನೂ ಇಲ್ಲ. ಎಲ್ಲರ ಜೀವನ ತೊಂದರೆಯಲ್ಲಿದೆ. ಯಾರೋ ಬಡ್ಡಿಗೆ ತಂದಿರುತ್ತಾರೆ, ಇವರು ಬಡ್ಡಿ ಕಟ್ತಾರಾ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.


ಈಗ ಡಿಸಿಗಳಿಗೆ ಸಿಎಸ್ ಸೂಚನೆ ನೀಡಿದ್ದಾರೆ. ಡಿಸಿಗಳು ಮತ್ತು ಎಸ್ಪಿಗಳು ಕ್ರಮ ಕೈಗೊಳ್ಳಬೇಕು. ಯಾರು ಉಲ್ಲಂಘನೆ ಮಾಡಿದ್ದಾರೋ ಅವರ ಮೇಲೆ ದೂರು ದಾಖಲಾಗಬೇಕು. ನಮ್ಮ ಮೇಲೆ ದೂರು ದಾಖಲಿಸಿದ್ದಾರೆ. ಬಿಜೆಪಿ ಶಾಸಕರು ಮತ್ತು ಮುಖಂಡರ ವಿರುದ್ಧ ದೂರು ದಾಖಲಾಗದಿದ್ರೆ ಪ್ರತಿಭಟನೆ ಮಾಡ್ತೀವಿ. ಸರ್ಕಾರ ಕ್ರಮ ಜರಗಿಸಿಲ್ಕ ಅಂದ್ರೆ ನಾವು ಪ್ರತಿಭಟನೆ ಮಾಡ್ತೀವಿ ಎಂದಿದ್ದಾರೆ.


ಬಿಟ್ಟು ಹೋದ ಶಾಸಕರು ಡಿ.ಕೆ.ಶಿವಕುಮಾರ್ ಸಂಪರ್ಕ ಮಾಡಿದ ವಿಚಾರವಾಗಿ ಮಾತನಾಡಿದ ಅವರು, ಅವೆಲ್ಲವನ್ನೂ ನಿಮ್ಮ ಮುಂದೆ ಹೇಳಕ್ಕೆ ಆಗಲ್ಲ ಎಂದಿದ್ದಾರೆ. 


ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ: ಬಂದೋಬಸ್ತ್ ನಲ್ಲಿದ್ದ 42 ಕೆಎಸ್ಆರ್ಪಿ ಸಿಬ್ಬಂದಿಗೆ ಕೊರೊನಾ ದೃಢ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.