ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ರಾಜ್ಯ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ (Mekedatu Padayatre) ಬಂದೋಬಸ್ತ್ ಗೆ ನಿಯೋಜನೆಗೊಂಡಿದ್ದ 42 ಕೆಎಸ್ಆರ್ಪಿ (KSRP staff) ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದೆ.
ಮೈಸೂರಿನ ಬೆಟಾಲಿಯನ್ 179 ಕೆಎಸ್ಆರ್ಪಿಯ 42 ಮಂದಿ ಪೊಲೀಸರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಮೇಕೆದಾಟು ಪಾದಯಾತ್ರೆ ತಂದ ಗಂಡಾಂತರದಿಂದಾಗಿ ಪೊಲೀಸರಿಗೆ ಕೊವಿಡ್ (Corona Virus) ಸೋಂಕು ತಗುಲಿದೆ.
ಪೊಲೀಸರಿಗೆ ಕಂಟವಾದ ಕೈ ಪಾದಯಾತ್ರೆ:
42 ಮಂದಿ ಕೆಎಸ್ಆರ್ಪಿ ಪೊಲೀಸರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಪಾದಯಾತ್ರೆ ಬಂದೋಬಸ್ತ್ ಗೆ ನಿಯೋಜನೆ ಗೊಂಡಿದ್ದ ಪೊಲೀಸರಿಗೆ ಕೋವಿಡ್ ಪಾಸಿಟಿವ್ (Coivd Positive) ಬಂದಿದೆ.
ಮೇಕುದಾಟು ಪಾದಯಾತ್ರೆಯ ಭದ್ರತೆಗೆ ನಿಯೋಜನೆ ಗೊಂಡಿದ್ದ 170 ಕೆಎಸ್ಆರ್ಪಿ ಸಿಬ್ಬಂದಿಗಳ ಪೈಕಿ 42 ಮಂದಿಗೆ ಕೋವಿಡ್ ದೃಢಪಟ್ಟಿದೆ. ಸೋಂಕಿತ ಸಿಬ್ಬಂದಿಗಳು ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ.
ಇದನ್ನೂ ಓದಿ: ಮುಂದಿನ ವಾರ ಖಾಲಿ ಇರುವ ನಿಗಮ ಮಂಡಳಿಗಳ ಭರ್ತಿ: ನಳೀನ್ ಕುಮಾರ್ ಕಟೀಲ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.