ಮೇಕೆದಾಟು ಪಾದಯಾತ್ರೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ಸೋಂಕು: ಡಿಕೆಶಿ ವಿರುದ್ಧ ಬಿಜೆಪಿ ಗರಂ

ಕೋವಿಡ್ ಸೂಪರ್ ಸ್ಪ್ರೆಡರ್ ಡಿ.ಕೆ.ಶಿವಕುಮಾರ್ ಅವರೇ ಇದಕ್ಕೆ ಹೊಣೆ ಯಾರು? ಅಂತಾ ಪ್ರಶ್ನಿಸಿದೆ.

Written by - Zee Kannada News Desk | Last Updated : Jan 17, 2022, 12:54 PM IST
  • ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ಕೊರೊನಾ ಸೋಂಕು
  • ಕೋವಿಡ್ ಸೂಪರ್ ಸ್ಪ್ರೆಡರ್ ಡಿಕೆಶಿ ಅವರೇ ಇದಕ್ಕೆ ಹೊಣೆ ಯಾರು? ಅಂತಾ ಪ್ರಶ್ನಿಸಿದ ಬಿಜೆಪಿ
  • ಡಿಕೆಶಿ ಹಾಗೂ ಸಿದ್ದರಾಮಯ್ಯ ಅತ್ಯಂತ ಅಗತ್ಯವಾಗಿ ಕೋವಿಡ್ ಪರೀಕ್ಷಾ ವರದಿ ಬಿಡುಗಡೆಗೊಳಿಸಬೇಕೆಂದು ಒತ್ತಾಯ
ಮೇಕೆದಾಟು ಪಾದಯಾತ್ರೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ಸೋಂಕು: ಡಿಕೆಶಿ ವಿರುದ್ಧ ಬಿಜೆಪಿ ಗರಂ title=
ಸಿದ್ದರಾಮಯ್ಯ ಮತ್ತು ಡಿಕೆಶಿ ವಿರುದ್ಧ ಬಿಜೆಪಿ ಕಿಡಿಕಾರಿದೆ

ಬೆಂಗಳೂರು: ಮೇಕೆದಾಟು ಯೋಜನೆ(Mekedatu Project Dispute)ಗೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಾಯಾತ್ರೆಯ ಭದ್ರತೆಗೆ ನಿಯೋಜನೆಗೊಂಡಿದ್ದ ಅನೇಕ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೇ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ವಿರುದ್ಧ ಬಿಜೆಪಿ ಗಂರ ಆಗಿದೆ.

#ಉತ್ತರಿಸಿಡಿಕೆಶಿ ಹ್ಯಾಶ್ ಟ್ಯಾಗ್ ಬಳಿಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ರಕ್ಷಣೆಗೆ ನಿಯೋಜನೆಯಾಗಿದ್ದ ಪೊಲೀಸರು ಕೋವಿಡ್ ಸೋಂಕಿತರಾಗುತ್ತಿದ್ದಾರೆ. ಕೋವಿಡ್ ಸೂಪರ್ ಸ್ಪ್ರೆಡರ್ ಡಿಕೆಶಿ(DK Shivakumar) ಅವರೇ ಇದಕ್ಕೆ ಹೊಣೆ ಯಾರು?’ ಅಂತಾ ಪ್ರಶ್ನಿಸಿದೆ.

ಇದನ್ನೂ ಓದಿ: Milk Price : ಸಾಮಾನ್ಯ ಜನರಿಗೆ ಬಿಗ್ ಶಾಕ್ : ನಂದಿನ ಹಾಲಿನ ದರ ₹3 ಏರಿಕೆಗೆ KMF ಚಿಂತನೆ

‘ಯಾರಿಗೆ ಆರೋಗ್ಯ ಸರಿ ಇಲ್ಲವೋ, ಅವರು ಮಾತ್ರ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಉಡಾಫೆ ಉತ್ತರ ಕೊಟ್ಟರೆ ಹೇಗೆ ಡಿಕೆಶಿ ಅವರೇ? ಹಳೇ ಮೈಸೂರು ಭಾಗದಲ್ಲಿ‌ ಕೋವಿಡ್(COVID-19) ಹಂಚಿಕೆಯ ಅನಧಿಕೃತ ಫ್ರಾಂಚೈಸಿದಾರರು ನೀವು. ಸಾಂಕ್ರಾಮಿಕ ಕಾಯಿದೆ ಉಲ್ಲಂಘನೆಯ ನೇತಾರರಲ್ಲವೇ ನೀವು?’ ಅಂತಾ ಬಿಜೆಪಿ ಟ್ವೀಟ್ ಮಾಡಿ ಟೀಕಿಸಿದೆ.

‘ಡಿಕೆಶಿಯವರೇ ನಿಮ್ಮ ಆರೋಗ್ಯ ಹೇಗಿದೆ? ಅಂದ ಹಾಗೆ ನಿಮ್ಮ ಜೊತೆಯಲ್ಲಿ #ಕೋವಿಡ್‌ಜಾತ್ರೆ(Mekedatu Padayatra)ಯಲ್ಲಿ ಹೆಜ್ಜೆ ಹಾಕಿದ ಹಲವು ನಾಯಕರಿಗೆ ಈಗ ಕೋವಿಡ್ ದೃಢಪಟ್ಟಿದೆ. ಅಂದರೆ ಕೋವಿಡ್ ನಿಮ್ಮ ಅಕ್ಕಪಕ್ಕದಲ್ಲಿತ್ತು, ಅದಕ್ಕಾಗಿ ನಿಮ್ಮ ಬಗ್ಗೆ ನಮಗೆ ಕಾಳಜಿ! ಉತ್ತರಿಸಿ ಡಿಕೆಶಿ’ ಅಂತಾ ಬಿಜೆಪಿ ವ್ಯಂಗ್ಯವಾಡಿದೆ.  

ಇದನ್ನೂ ಓದಿ: ಸಂಪುಟ ವಿಸ್ತರಣೆ: ರಮೇಶ್ ಜಾರಕಿಹೊಳಿಗೆ ಮತ್ತೆ ಒಲಿಯುತ್ತಾ ಮಂತ್ರಿಗಿರಿ!?

‘ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರು ಅತ್ಯಂತ ಅಗತ್ಯವಾಗಿ ಕೋವಿಡ್ ಪರೀಕ್ಷಾ ವರದಿ ಬಿಡುಗಡೆಗೊಳಿಸಬೇಕು. ಇವರು ಪಾದಯಾತ್ರೆ(Mekedatu Project) ನಡೆಸಿದ ಭಾಗದಲ್ಲಿ ಈಗ ಕೋವಿಡ್ ಸೋಂಕು ಹೆಚ್ಚುತ್ತಿದೆ. ಈ ಬಾರಿ ಕೋವಿಡ್ ಸೂಪರ್ ಸ್ಪ್ರೆಡರ್ ರೀತಿ ಕೆಲಸ ಮಾಡಿದ್ದೀರಿ. ಸಾರ್ವಜನಿಕ ಹಿತದೃಷ್ಟಿಯಿಂದ ನಿಮ್ಮ‌ ಕೋವಿಡ್ ವರದಿ ಬಹಿರಂಗಗೊಳಿಸುವಿರಾ?’ ಅಂತಾ ಬಿಜೆಪಿ ಪ್ರಶ್ನಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News