Congress : ಜಮೀರ್ ಹೇಳಿಕೆಗೆ ಕೈ ಪಾಳೆಯ ಗರಂ; ಸೆಟ್ ಬ್ಯಾಕ್ ಆಗುತ್ತಾ ಹಿಜಾಬ್-ರೇಪ್ ಹೇಳಿಕೆ!
ಡಿಕೆಶಿ ಮಾತಿನಂತೆ ವಿರೋಧ ನಾಯಕ ಸಿದ್ದರಾಮಯ್ಯ ಮತ್ತು ಕೈ ಮುಸ್ಲಿಂ ನಾಯಕರು ಮಾತ್ರ ಪ್ರಶ್ನೆಗಗಳಿಗೆ ಉತ್ತರ ನೀಡುತಿದ್ರು. ಇದರ ಮಧ್ಯೆ ಸದಾ ವಿವಾದಗಳಿಂದಲೇ ಗುರುತಿಸಿಜೊಂಡಿದ್ದ ಜಮೀರ್ ಅಹ್ಮದ್ ಖಾನ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಹಿಜಾಬ್ ಹಾಕದೆ ಹೊದ್ರೆ ಅತ್ಯಾಚಾರ ಪ್ರಕರಣ ಹೆಚ್ಚಾಗುತ್ತವೆ ಅಂತ ವಿವಾದ ಸೃಷ್ಠಿಸುವ ಮೂಲಕ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬೆಂಗಳೂರು : ಹಿಜಾಬ್ ವಿವಾದ ವಿಚಾರವಾಗಿ ಕಾಂಗ್ರೆಸ್ ಎಚ್ಚರಿಕೆ ಹೆಜ್ಜೆ ಇಟ್ಟಿತ್ತು. ಯಾವ ನಾಯಕರಿಗೂ ಬಹಿರಂಗವಾಗಿ ಮಾತನಾಡದಂತೆ ಅಪ್ಪಣೆ ಕೂಡ ಮಾಡಿತ್ತು. ಆದ್ರೆ ಜಮೀರ್ ಅಹ್ಮದ್ ನೀಡಿದ ಹೇಳಿಕೆ ಕೈ ಪಡೆಗೆ ನುಂಗಲಾರದ ತುಪ್ಪ ಆಗಿ ಪರಿಣಮಿಸಿದೆ ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಾರ್ನಿಂಗ್ ಜಮೀರ್ ಗೆ ಮಾಡಿದ್ದಾರೆ.
ಬಹಿರಂಗವಾಗಿ ಮಾತನಾಡದಂತೆ ಕನಕಪುರ ಬಂಡೆ ವಾರ್ನಿಂಗ್
ಹಿಜಾಬ್ ವಿವಾದ(Hijab Row) ರಾಜ್ಯದಲ್ಲಿ ದಿನದಿಂದ ದಿನಕ್ಕೆ ದೊಡ್ಡದಾಗಿ ರಾಜಕೀಯ ಅಂಗಳವನ್ನು ತಲುಪಿತ್ತು. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಕಮಲ ಪಡೆ ಕಾಂಗ್ರೆಸ್ ನಾಯಕರನ್ನು ಕೆಣಕುವ ಪ್ರಯತ್ನ ಮಾಡಿದ್ರು. ಇದು ಧರ್ಮಗಳ ಸೂಕ್ಷ್ಮ ವಿಚಾರ ಹಾಗಾಗಿ ಯಾವ ನಾಯಕರು ಕೂಡ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಮಾತನಾಡದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರಮಾಣು ಹೊರಡಿಸಿದ್ರು. ಡಿಕೆಶಿ ಮಾತಿನಂತೆ ವಿರೋಧ ನಾಯಕ ಸಿದ್ದರಾಮಯ್ಯ ಮತ್ತು ಕೈ ಮುಸ್ಲಿಂ ನಾಯಕರು ಮಾತ್ರ ಪ್ರಶ್ನೆಗಗಳಿಗೆ ಉತ್ತರ ನೀಡುತಿದ್ರು. ಇದರ ಮಧ್ಯೆ ಸದಾ ವಿವಾದಗಳಿಂದಲೇ ಗುರುತಿಸಿಜೊಂಡಿದ್ದ ಜಮೀರ್ ಅಹ್ಮದ್ ಖಾನ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಹಿಜಾಬ್ ಹಾಕದೆ ಹೊದ್ರೆ ಅತ್ಯಾಚಾರ ಪ್ರಕರಣ ಹೆಚ್ಚಾಗುತ್ತವೆ ಅಂತ ವಿವಾದ ಸೃಷ್ಠಿಸುವ ಮೂಲಕ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ : ಹಿಜಾಬ್ ವಿವಾದ ಕೆಲವರಿಗೆ ತಿರುಗುಬಾಣ ಆಗುವುದು ಖಚಿತ: ಹೆಚ್.ಡಿ.ಕುಮಾರಸ್ವಾಮಿ
ಯಾವಾಗ ಜಮೀರ್ ಅಹ್ಮದ್(Zamir Ahmad) ಹೇಳಿಕೆ ವಿವಾದವಾಗಿ ಹೊರಹೊಮ್ಮಿತೊ ಕಾಂಗ್ರೆಸ್ ನಾಯಕರು ತುಟಿ ಬಿಚ್ಚಲಿಲ್ಲ. ಜಮೀರ್ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳಲಿಲ್ಲ. ಬದಲಾಗಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ದೂರ ನೀಡಿದ್ರು. ಬಾಯಿಗೆ ಬಂದಂತೆ ಮಾತನಾಡವ ಜಮೀರ್ಗೆ ಕಡಿವಾಣ ಹಾಕಿ. ಸಿದ್ದರಾಮಯ್ಯ ಅವರು ಹೇಳಿದ್ರೆ ಜಮೀರ್ ಗಫ್ ಚುಫ್ ಆಗ್ತಾರೆ ಅಂತ ನಾಯಕರ ಗಮನಕ್ಕೆ ತಂದ್ರು. ಜೊತೆಗೆ ಡಿ ಕೆ ಶಿವಕುಮಾರ್ ಕೂಡ ಈಗಾಗಲೇ ಮಾತನಾಡಿದ ಬಗ್ಗೆ ಸ್ಪಷ್ಟನೆ ನೀಡುವಂತೆ ಜಮೀರ್ ಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಕೋರ್ಟ್ ನಲ್ಲಿ ಹಿಜಾಬ್ ಪ್ರಕರಣ ಇತ್ಯರ್ಥ ಆಗುವವರೆಗೆ ಯಾರು ಕೂಡ ಬಹಿರಂಗವಾಗಿ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿದ್ದಾರೆ.
ಅಧಿವೇಶನ ವಿಚಾರವಾಗಿ ಸಂಜೆ ಕಾಂಗ್ರೆಸ್(Congress) ಶಾಸಕಾಂಗ ಸಭೆ ಮಾಡಿದೆ. ಸರ್ಕಾರದ ವೈಪಲ್ಯಗಳನ್ನು ಯಾವ ರೀತಿಯಲ್ಲಿ ಎತ್ತಬೇಕು ಅಂತ ಚರ್ಚೆ ಮಾಡಲಾಗಿದೆ. ಹಿಜಾಬ್ ವಿಚಾರವಾಗಿ ಪಕ್ಷದ ನಿಲುವು ಹೇಗೆ ಇರಬೇಕು ಅಂತ ಕೈ ನಾಯಕರ ಸಮಾಲೋಚನೆ ಮಾಡಿದ್ದರೆ. ಅಲ್ಲದೆ ಹಿಜಾಬ್ ವಿವಾದಲ್ಲಿ ಅನಗತ್ಯ ಗೊಂದಲ ಸೃಷ್ಟಿ ಮಾಡದಂತೆ ಕಾಂಗ್ರೆಸ್ ತಮ್ಮ ಶಾಸಕರಿಗೆ ಮನವಿ ಮಾಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.