ಮಂಡ್ಯ : ರಾಜ್ಯದಲ್ಲಿ ಇಂದು ಶಾಲೆಗಳು ಪುನರಾರಂಭಗೊಂಡಿವೆ. ಕರ್ನಾಟಕ ಹೈಕೋರ್ಟ್‌ನ (Karnataka High Court) ಮಧ್ಯಂತರ ಆದೇಶದ ಪ್ರಕಾರ ಯಾವುದೇ ಧಾರ್ಮಿಕ ಉಡುಪುಗಳಿಲ್ಲದೆ, ವಿದ್ಯಾರ್ಥಿಗಳು ಶಾಲೆಗೆ ಬರಬೇಕು. ಆದರೆ, ಮಂಡ್ಯದಲ್ಲಿ ವಿದ್ಯಾರ್ಥಿನಿಯರ ಪೋಷಕರು ಶಾಲಾ ಗೇಟ್‌ನಲ್ಲೇ ಶಿಕ್ಷಕಿಯೊಂದಿಗೆ ವಾಗ್ವಾದ ನಡೆಸುತ್ತಿರುವ ದೃಶ್ಯ ಕಂಡು ಬಂದಿದೆ.
ಹಿಜಾಬ್ ಹಾಕಿಕೊಂಡ ವಿದ್ಯಾರ್ಥಿನಿಯನ್ನು ತಡೆದ ಶಿಕ್ಷಕಿ :
ಕರ್ನಾಟಕದ ಮಂಡ್ಯದ ರೋಟರಿ ಶಾಲೆಯ ಹೊರಗೆ ಪೋಷಕರು ಶಿಕ್ಷಕಿಯ ಮಧ್ಯೆ ವಾಗ್ವಾದ ನಡೆದಿದೆ. ಬಾಲಕಿ ಹಿಜಾಬ್ (Hijab) ಧರಿಸಿ ಶಾಲೆಗೆಬಂದಿದ್ದಳು, ಆದರೆ ಇದನ್ನು ಶಿಕ್ಷಕಿ, ತಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಕಿ ಹಾಗೂ ಪೋಷಕರ ನಡುವೆ ವಾಗ್ವಾದ ನಡೆದಿದೆ.
ಇದನ್ನೂ ಓದಿ : ಇಂದಿನಿಂದ ಜಂಟಿ ಅಧಿವೇಶನ: ಕೇಸರಿ-ಹಿಜಾಬ್ ಪ್ರಕರಣ ಸೇರಿದಂತೆ ಹಲವು ವಿಷಯಗಳ ಅಸ್ತ್ರ ಪ್ರಯೋಗಕ್ಕೆ ಕಾಂಗ್ರೆಸ್ ಸಜ್ಜು!
ವಿದ್ಯಾರ್ಥಿಯನ್ನು ತರಗತಿಗೆ ಹೋಗಲು ಅನುಮತಿ ನೀಡುವಂತೆ ಪೋಷಕರು ಒತ್ತಾಯಿಸಿದ್ದಾರೆ. ಆದರೆ ಹಿಜಾಬ್ ತೆಗೆದು ಬರುವಂತೆ ಶಿಕ್ಷಕಿ ಸೂಚಿಸಿದ್ದಾರೆ (Hijab Contraversy). ತರಗತಿಯ ಒಳಗೆ ಹೋಗಿ ಹಿಜಾಬ್ ತೆಗೆಯುವುದಾಗಿ ಹೇಳಿದರೂ, ಅನುಮತಿ ನೀಡುತ್ತಿಲ್ಲ ಎನ್ನುವುದು ಪೋಷಕರ ವಾದ.
#WATCH | K'taka: Argument b/w parents & a teacher outside Rotary School in Mandya as she asked students to take off hijab before entering campus
A parent says,"Requesting to allow students in classroom, hijab can be taken off after that but they're not allowing entry with hijab" pic.twitter.com/0VS57tpAw0
— ANI (@ANI) February 14, 2022
ಹಿಜಾಬ್ ತೆಗೆದು ಶಾಲೆಗೆ ಪ್ರವೇಶ :
ಇದಲ್ಲದೇ ಮೈಸೂರಿನ ನಿಜಾಮಿಯಾ ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿನಿಯರಿಗೆ ಶಾಲಾ ಆವರಣ ಪ್ರವೇಶಿಸುವ ಮುನ್ನ ಬುರ್ಖಾ ಮತ್ತು ಹಿಜಾಬ್ ತೆಗೆಯುವಂತೆ ಸೂಚಿಸಿದೆ. ಹೀಗಾಗಿ ವಿದ್ಯಾರ್ಥಿನಿಯರು ಬುರ್ಖಾ, ಹಿಜಾಬ್ ತೆಗೆದು ಸಮವಸ್ತ್ರದಲ್ಲಿ ತರಗತಿಗೆ ತೆರಳಿದ್ದರು. ಆದರೆ, ಕಲಬುರಗಿ ಜಿಲ್ಲೆಯ ಜೇವರ್ಗಿಯ ಸರ್ಕಾರಿ ಉರ್ದು ಶಾಲೆಯ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಹಾಜರಾಗಿದ್ದರು. ನಂತರ ಶಿಕ್ಷಕರು ಹೈಕೋರ್ಟ್ (Karnataka High Court) ಆದೇಶದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ ಹಿಜಾಬ್ ತೆಗೆಯುವಂತೆ ಹೇಳಿದ್ದಾರೆ.
ಇದನ್ನೂ ಓದಿ : 'ಚೆನ್ನವೀರ ಕಣವಿ ಅವರು ಚೇತರಿಸಿಕೊಂಡು ಅವರ ಚಿಂತನೆಗಳು ನಾಡಿಗೆ ಮತ್ತೆ ದೊರೆಯಬೇಕು'
ಇಂದು ತರಗತಿಯಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ವಿಚಾರಣೆ ನಡೆಸಲಿದೆ. ತನ್ನ ಮಧ್ಯಂತರ ಆದೇಶದಲ್ಲಿ, ಪ್ರಕರಣ ಇತ್ಯರ್ಥವಾಗುವವರೆಗೆ ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ಧರಿಸುವಂತಿಲ್ಲ ಎಂದು ಹೇಳಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.