ಲಖನೌ (ಉತ್ತರ ಪ್ರದೇಶ): ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ (Rahul Gandhi) ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ವ್ಯಂಗ್ಯವಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಬೇರೆ ಯಾರೂ ಅಗತ್ಯವಿಲ್ಲ. ರಾಹುಲ್ ಗಾಂಧೀ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ತಾವೇ ಅದನ್ನು ಮಾಡುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: Hijab Controversy: 'ದೇಶದಲ್ಲಿ ಹಿಜಾಬ್ ಪದ್ಧತಿ ಇಲ್ಲದಿರುವುದರಿಂದ ಅತ್ಯಾಚಾರ ದರ ಹೆಚ್ಚಾಗಿದೆ'
ಈ ಹಿಂದೆ ಉತ್ತರಾಖಂಡದಲ್ಲಿ ನಡೆದ ರ್ಯಾಲಿಯಲ್ಲಿ ಇದೇ ರೀತಿಯ ಹೇಳಿಕೆಯನ್ನು ಉಲ್ಲೇಖಿಸಿದ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath), "ನಾನು ಉತ್ತರಾಖಂಡಕ್ಕೆ ಹೋಗಿ ಭಾಷಣ ಮಾಡಿದ್ದೆ. ಕಾಂಗ್ರೆಸ್ ಅನ್ನು ಕೊನೆಗೊಳಿಸಲು ಬೇರೆ ಯಾರೂ ಕೆಲಸ ಮಾಡಬೇಕಾಗಿಲ್ಲ. ಸಹೋದರರಿಬ್ಬರೂ ಅದನ್ನು ತಾವೇ ಮಾಡುತ್ತಾರೆ" ಎಂದು ಹೇಳಿದರು.
ಇದಕ್ಕೂ ಮುನ್ನ ಉತ್ತರಾಖಂಡದ (Uttarakhand) ಪೌರಿ ಗರ್ವಾಲ್ನಲ್ಲಿ ನಡೆದ ರ್ಯಾಲಿಯಲ್ಲಿ ಯೋಗಿ ಅವರು, "ಕಾಂಗ್ರೆಸ್ ಸಂಪೂರ್ಣವಾಗಿ ಮುಳುಗಿದೆ. ಎಲ್ಲಿ ಸ್ವಲ್ಪ ಅಸ್ತಿತ್ವವಿದೆಯೋ ಅಲ್ಲೆಲ್ಲಾ ಅದನ್ನು ಮುಳುಗಿಸಲು ಸಹೋದರ ಮತ್ತು ಸಹೋದರಿ ಇಬ್ಬರೂ ಸಾಕು, ಆದ್ದರಿಂದ ಅದನ್ನು ಅದರ ಅದೃಷ್ಟಕ್ಕೆ ಬಿಡಬೇಕು" ಎಂದು ಹೇಳಿದ್ದರು.
ಇದನ್ನೂ ಓದಿ: ಕಾನೂನು ಸುವ್ಯವಸ್ಥೆ ಬಗ್ಗೆ ಉಲ್ಲೇಖವಿಲ್ಲದೆ ರಾಜ್ಯಪಾಲರ ಭಾಷಣ, ವಿಪಕ್ಷ ನಾಯಕರ ವಿರೋಧ
ಉತ್ತರಾಖಂಡ ವಿಧಾನಸಭೆ ಚುನಾವಣೆಗೆ (Uttarakhand Election) ಸೋಮವಾರ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.