ಬೆಂಗಳೂರು : ಬಿಜೆಪಿ ಸಂವಿಧಾನದ ಹೆಸರಲ್ಲಿ ಪ್ರಮಾಣವಚನ ತೆಗೆದುಕೊಂಡವರು, ಭಾರತೀಯರನ್ನು ರಕ್ಷಣೆ ಮಾಡಬೇಕಾದವರು. ಈಗ ಜನರಿಗೆ ಮೊಸ‌ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಕರಾಳ ದಿನ ಬರ್ತಾ ಇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ‌ನಾಯಕರ ಜಂಟಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಬಿಜೆಪಿ ಸರ್ಕಾರಗಳು ಸೇಡಿನ ರಾಜಕೀಯ ಮಾಡುತ್ತಿವೆ. 75 ವರ್ಷಗಳಲ್ಲಿ ಆಗದ ಬದಲಾವಣೆ 90 ದಿನಗಳಲ್ಲಿ ಮೀಸಲಾತಿ ಬದಲಾವಣೆ ‌ಮಾಡಿದ್ದಾರೆ. ಅವರ ಮನೆ ಆಸ್ತಿ ಎಂಬಂತೆ ಮೀಸಲಾತಿ ಚೆಂಜ್ ‌ಮಾಡಿದ್ದಾರೆ. ಯಾರು ಇಲ್ಲಿ ಬಿಕ್ಷುಕರಲ್ಲ, ಅವರ ಹಕ್ಕು ಕೇಳ್ತಾ ಇದ್ದಾರೆ. ಲಿಂಗಾಯತ, ಒಕ್ಕಲಿಗ ಹಕ್ಕು ಕೇಳಿದ್ದಾರೆ. ಆದ್ರೆ ಯಾವುದೇ ಆಯೋಗದ ವರದಿ ಇಲ್ಲದೆ ಮೀಸಲಾತಿ ಚೆಂಜ್ ಮಾಡಿದ್ದಾರೆ. ನಾಗಮೋಹನ್ ದಾಸ್ ವರದಿ ಕೊಟ್ಟಿದ್ರು. ಇಷ್ಟು ದಿನ ಏನ್ ಮಾಡ್ತಾ ಇದ್ರಿ. ನಿಮಗೆ ದಲಿತರು, ಅಲ್ಪಸಂಖ್ಯಾತರು ಯಾರು ಬೆಡ್ವಾ ನಿಮಗೆ. ಅಲ್ಪಸಂಖ್ಯಾತರ 4% ಮೀಸಲಾತಿ ಕಿತ್ತುಕೊಂಡಿದ್ದೀರಾ. ಕರ್ನಾಟಕ ಶಾಂತಿಯ ತೋಟ, ಶಾಂತಿ ಕದಡುವ ಕೆಲಸ‌ಮಾಡುತ್ತಿದ್ದಾರೆ. ಬಂಡವಾಳ ಹೂಡಿಕೆ ತಪ್ಪಿಸಲು ಹೊರಟ್ಟಿದ್ದೀರ. ಮೀಸಲಾತಿ ಅವೈಜ್ಞಾನಿಕ ಕ್ರಮವನ್ನು ಕಾಂಗ್ರೆಸ್ ಖಂಡನೆ ಮಾಡುತ್ತೆ. ಕಾಂಗ್ರೆಸ್ ಸರ್ಕಾರ ಬರುತ್ತೆ ಈಗ ಕೊಟ್ಟ ಮೀಸಲಾತಿ ಕಾಂಗ್ರೆಸ್ ರದ್ದು ಮಾಡ್ತೇವೆ ಎಂದರು.


ಇದನ್ನೂ ಓದಿ : SSLC Exam 2023 : ಎಸ್​ಎಸ್ಎಲ್​ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್!


ಇನ್ನು ಮುಂದುವರೆದು ಮಾತನಾಡಿದ ಅವರು,ನಾಲ್ಕು ಜನ ಸ್ವಾಮೀಗಳಿಗೆ ಪೋನ್ ಮಾಡಿ ಹೆದರಸ್ತಿರಿ. ಒಪ್ಪಿಕೊಳ್ಳಿ ನಾವು ಒಳ್ಳೆಯದು ಮಾಡ್ತಾ ಇದ್ದೇವೆ ಅಂತ ಹೆದರಿಸುತ್ತಿದ್ದರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 


ಇನ್ನು ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿ, ಬೊಮ್ಮಾಯಿ ಸರ್ಕಾರ 420 ಸರ್ಕಾರ. ಬೊಮ್ಮಾಯಿ ಸರ್ಕಾರ ಎಲ್ಲಾ ಸಮುದಾಯಗಳನ್ನ ಮೋಸ ಮಾಡಿದೆ. 90 ದಿನಗಳಲ್ಲಿ ಮೀಸಲಾತಿ ಬದಲಾವಣೆ ಮಾಡಿದೆ. ಇಂತಹ ಬದಲಾವಣೆ 75 ವರ್ಷದ ಇತಿಹಾಸದಲ್ಲಿ ಇರಲಿಲ್ಲ ಎಂದು ಮೀಸಲಾತಿ ವಿಚಾರ ಬಗ್ಗೆ ಕಿಡಿಕಾರಿದ್ದಾರೆ. 


ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ಸುರ್ಜೆವಾಲ, ಜಮೀರ್ ಅಹ್ಮದ್, ರಿಜ್ವಾನ್ ಅರ್ಷದ್, ಸಲೀಂ ಅಹ್ಮದ್, ಅಬ್ದುಲ್ ಜಬ್ಬಾರ್ ಭಾಗಿಯಾಗಿದ್ದರು.


ಇದನ್ನೂ ಓದಿ : ಮುಸ್ಲಿಮರಿಗೆ ಮೀಸಲಾತಿ ರದ್ದತಿ: ಬೊಮ್ಮಾಯಿ ತಮ್ಮ ತಂದೆಯ ಸಿದ್ಧಾಂತಗಳಿಗೆ ತಿಲಾಂಜಲಿ ಹಾಕಿದ್ರು - ಸಿ.ಎಂ ಇಬ್ರಾಹಿಂ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.