ಬೆಂಗಳೂರು : ಕೆಎಸ್​ಆರ್​ಟಿಸಿ ನಿಗಮದಿಂದ ತನ್ನ ಸಿಬ್ಬಂದಿಗಳಿಗೆ ಬಂಪರ್ ಗಿಫ್ಟ್ ನೀಡಿದೆ. ಇಡೀ ನಿಗಮದ ಸಿಬ್ಬಂದಿಗಳಿಗೆ 50ಲಕ್ಷ ವಿಮಾ‌ ಯೋಜನೆ ಜಾರಿ ಮಾಡಿದೆ. ಈ ನಿಗಮದ‌ ಇತಿಹಾಸದಲ್ಲೇ ಇದೇ ಮೊದಲ ಬಾರಿ 50ಲಕ್ಷ ಹೆಲ್ತ್ ಇನ್ಶ್ಯೂರೆನ್ಸ್ ಸೌಲಭ್ಯ ಜಾರಿ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಕೆಎಸ್​ಆರ್​ಟಿಸಿ ನಿಗಮವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಈ ಬಗ್ಗೆ ಒಡಂಬಡಿಕೆ ಮಾಡಿಕೊಂಡಿದೆ. ವಿಮಾ ಸೌಲಭ್ಯ ಸಂಬಂಧ ಇಂದು ಸಭೆ ನಡೆಸಿ ಅಧಿಕೃತ ಆದೇಶ ಹೊರಡಿಸಿದೆ. 


ಇದನ್ನೂ ಓದಿ : ಪಂಚೆ ಮಾತ್ರ ಶುಭ್ರ, ಮೈಯೆಲ್ಲಾ ಭ್ರಷ್ಟಾಚಾರದ ಕೊಳೆ!: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ


ಶಾಂತಿನಗರದ ಕೆಎಸ್​ಆರ್​ಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೆಎಸ್​ಆರ್​ಟಿಸಿ ಎಂಡಿ ಅನ್ಬುಕುಮಾರ್, ಅಧ್ಯಕ್ಷ ಚಂದ್ರಪ್ಪ, ಸೇರಿ ಎಸ್​ಬಿಐನ ಡಿಜಿಎಂ ಪಂಕಜ್ ತಪ್ಲಿಯಾಲ್ ಭಾಗವಹಿಸಿದ್ದರು. ಸಭೆ ನಂತರ ಭಾರಿ ಮೊತ್ತದ ವಿಮಾ ಸೌಲಭ್ಯಕ್ಕೆ ಒಪ್ಪಿಗೆ ಸಹಿ ಹಾಕಿದ್ದಾರೆ. 


ಸಾರಿಗೆ ನೌಕರರಿಂದ ಹಲವಾರು ಬಾರಿ ಪ್ರತಿಭಟನೆ ಮೂಲಕ ಸಾರಿಗೆ ನಿಗಮಕ್ಕೆ ಈ ಬೇಡಿಕೆ ಇಡಲಾಗಿತ್ತು. ಇದೀಗ ಕೆಎಸ್​ಆರ್​ಟಿಸಿ ನಿಗಮದ ಎಲ್ಲಾ  ನೌಕರರಿಗೂ ಸಂತಸದ ಸುದ್ದಿ ಹೊರ ಹಾಕಿದೆ. 


ಸಿಬ್ಬಂದಿಗಳ ವೇತನ ಪ್ಯಾಕೇಜ್ ಅಪಘಾತ ವಿಮಾ ಯೋಜನೆ ಹೇಗಿರಲಿದೆ :


ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ತಮ್ಮ ವೇತನ ಖಾತೆಯನ್ನು ಹೊಂದಿರುವ ನಿಗಮದ ನೌಕರರಿಗೆ " ಪ್ರೀಮಿಯಂ ರಹಿತ" ವೈಯುಕ್ತಿಕ ಅಪಘಾತ ವಿಮೆಯನ್ನು ಒಳಗೊಂಡಿದೆ. ಈ ವೈಯುಕ್ತಿಕ ವಿಮಾ ಯೋಜನೆಯಿಂದ ಪಾಲಿಸಿದಾರರು ಅಫಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ರೂ.50 ಲಕ್ಷಗಳ ಪರಿಹಾರದ ಹಣ ಕೂಡಲೇ ದೊರೆಯಲಿದೆ.


ಅಫಘಾತದಲ್ಲಿ ಸಿಬ್ಬಂದಿಗಳು ಶಾಶ್ವತವಾಗಿ ಪೂರ್ಣ ಅಂಗವೈಕಲ್ಯಕ್ಕೆ ತುತ್ತಾದಲ್ಲಿ  ರೂ.20 ಲಕ್ಷಗಳ ಹಣ ಹಾಗೂ ಶಾಶ್ವತ ಭಾಗಶ: ಅಂಗವೈಕಲ್ಯ ಉಂಟಾದಲ್ಲಿ 10 ಲಕ್ಷ ರೂ.ಗಳ ವಿಮಾ ಪರಿಹಾರ ದೊರೆಯಲಿದೆ. ಕರ್ತವ್ಯ ನಿರತ ಹಾಗೂ ಕರ್ತವ್ಯದಲ್ಲಿ ಇಲ್ಲದ (On duty and Off duty) ಸಮಯದಲ್ಲೂ ಆಗುವ ವೈಯಕ್ತಿಕ ಅಪಘಾತಗಳಿಗೂ ವಿಮೆ ಅನ್ವಯಿಸುತ್ತದೆ. 


ಇದನ್ನೂ ಓದಿ : ಪಿಎಸ್ಐ ಅಕ್ರಮ ನೇಮಕಾತಿ : ಪುಟ್ ಪಾತ್ ನಲ್ಲಿ ಕೋಟಿ ಹಣ ಪಡೆದಿದ್ದ ಶಾಂತಕುಮಾರ್ 


ಸಿಬ್ಬಂದಿಗಳ ಅಪಘಾತದಲ್ಲಿನ ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆಗಾಗಿ ಗರಿಷ್ಟ 10 ಲಕ್ಷ ರೂ., ಔಷಧಗಳ ಆಮದಿಗಾಗಿ ಗರಿಷ್ಟ 5 ಲಕ್ಷ ರೂ., ಕೋಮಾದಲ್ಲಿ ಮೃತಪಟ್ಟರೆ ಹೆಚ್ಚುವರಿ 2 ಲಕ್ಷ ರೂ. (ರೂ.50 ಲಕ್ಷ + ರೂ. 2 ಲಕ್ಷ), ಏರ್ ಅಂಬ್ಯೂಲೆನ್ಸ್ ಸೇವೆಗೆ 10 ಲಕ್ಷ ರೂ. ವಿಮಾ ಪರಿಹಾರ ನೀಡಲಾಗುವುದು.


ಸಿಬ್ಬಂದಿಗಳು ಅಪಘಾತದಲ್ಲಿ ಮೃತಪಟ್ಟರೆ ಮಕ್ಕಳ ಪದವಿ ಶಿಕ್ಷಣಕ್ಕೆ ಗರಿಷ್ಟ ರೂ.5 ಲಕ್ಷ ಹಾಗೂ ಹೆಣ್ಣು ಮಗಳ ವಿವಾಹಕ್ಕೆ ಗರಿಷ್ಟ 5 ಲಕ್ಷ ರೂ. ಗಳ ವರೆಗೆ ಆರ್ಥಿಕ ಸಹಾಯವನ್ನು ಈ ವಿಮಾ ಯೋಜನೆಯು ಒಳಗೊಂಡಿರುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.