ಬೆಂಗಳೂರು: ನಾಡಹಬ್ಬ ಮೈಸೂರು ದಸರಾಗೆ ರಾಷ್ಟ್ರಪತಿ ದ್ರೌಪತಿ ಮುರ್ಮು ಸೋಮವಾರ ವಿದ್ಯುಕ್ತ ಚಾಲನೆ ನೀಡಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮೂಲಕ ರಾಷ್ಟ್ರಪತಿಗಳು ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.


COMMERCIAL BREAK
SCROLL TO CONTINUE READING

ಇದರೊಂದಿಗೆ 412ನೇ ಅದ್ದೂರಿ ದಸರಾ ಮಹೋತ್ಸವದ ವಿಧಿವಿಧಾನಗಳು ಅಧಿಕೃತವಾಗಿ ಆರಂಭವಾದವು. ದಸರಾ ಹಬ್ಬದ ಹಿನ್ನೆಲೆ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC)ದಿಂದ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಈ ಟೂರ್ ಪ್ಯಾಕೇಜ್‍ನಲ್ಲಿ ನೀವು ಮೈಸೂರು ಮತ್ತು ಕೊಡಗು ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದಾಗಿದೆ.


ಮೈಸೂರು ದಸರಾ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ರಾಜ್ಯ ಹಾಗೂ ದೇಶ-ವಿದೇಶಗಳಿಗೆ ಪ್ರವಾಸಿಗರ ದಂಡೇ ಹರಿದು ಬರಲಿದೆ. ಈ ಹಿನ್ನೆಲೆ ದಸರಾ ವೀಕ್ಷಣೆಗೆ ಮೈಸೂರಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ KSRTC ವಿಶೇಷ ಟೂರ್‍ ಪ್ಯಾಕೇಜ್‍ಗಳನ್ನು ಘೋಷಿಸಿದೆ. ಕರ್ನಾಟಕ ಸಾರಿಗೆಯ ರಾಜಹಂಸ, ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್ ಹಾಗೂ ಅಂಬಾರಿ ಕ್ಲಬ್‌ ಕ್ಲಾಸ್‌ ಸಾರಿಗೆ ಸೇವೆಯನ್ನು ಈ ವಿಶೇಷ ಪ್ಯಾಕೆಜ್‍ನಲ್ಲಿ ಒದಗಿಸಲಾಗುತ್ತಿದೆ.


Mysuru dasara: ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ ರಾಷ್ಟ್ರಪತಿ ದ್ರೌಪತಿ ಮುರ್ಮು


ಆಸಕ್ತ ಪ್ರವಾಸಿಗರು ಇ-ಟಿಕೇಟ್ ಬುಕಿಂಗ್‌ ಅನ್ನು www.ksrtc.karnataka.gov.in ವೆಬ್ ಸೈಟ್ ಹಾಗೂ ಕೌಂಟರ್‍ಗಳ ಮೂಲಕ ಬುಕಿಂಗ್ ಮಾಡಬಹುದು. ಮೈಸೂರಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಐರಾವತ ಕ್ಲಬ್ ಕ್ಲಾಸ್ ವಾಹನಗಳಿಂದ 1 ದಿನದ ವಿಶೇಷ ಪ್ರವಾಸ ಸಾರಿಗೆ ಕೂಡ ಇರಲಿದೆ. ಅತ್ಯಂತ ಕಡಿಮೆ ದರದಲ್ಲಿ ನೀವೂ ಸಹ ಮೈಸೂರು ಸೇರಿದಂತೆ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು.


ಮೈಸೂರು ದಸರಾ ವಿಶೇಷ ಪ್ಯಾಕೇಜ್‍ಗಳು


1) ಗಿರಿದರ್ಶಿನಿ: ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟ (ಪ್ರಯಾಣ ದರ ವಯಸ್ಥರಿಗೆ: 400 ರೂ. ಮತ್ತು ಮಕ್ಕಳಿಗೆ: 250 ರೂ.)


2) ಜಲದರ್ಶಿನಿ: ಗೋಲ್ಡನ್ ಟೆಂಪಲ್ (ಬೈಲುಕುಪ್ಪೆ), ದುಬಾರೆ ಅರಣ್ಯ ನಿಸರ್ಗಧಾಮ, ರಾಜಾಸೀಟ್, ಹಾರಂಗಿ ಜಲಾಶಯ ಮತ್ತು ಕೆಆರ್‍ಎಸ್. (ಪ್ರಯಾಣ ದರ ವಯಸ್ಕರಿಗೆ: 450 ರೂ. ಮತ್ತು ಮಕ್ಕಳಿಗೆ: 250 ರೂ.)


3) ದೇವದರ್ಶಿನಿ: ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣ (ಪ್ರಯಾಣ ದರ ವಯಸ್ಥರಿಗೆ: 300 ರೂ. ಮತ್ತು ಮಕ್ಕಳಿಗೆ: 175 ರೂ.)


4) ಮೈಸೂರು ನಗರ ದೀಪಾಲಂಕಾರ ದರ್ಶನ: ನಗರ ಬಸ್‌ ನಿಲ್ದಾಣದಿಂದ ಅರಮನೆ ರಸ್ತೆ, ಮೈಸೂರು ಕೇಂದ್ರೀಯ ಬಸ್ ನಿಲ್ದಾಣ ರಸ್ತೆ. ಎಲ್‍ಐಸಿ ಸರ್ಕಲ್, ಬಂಬೂ ಬಜಾರ್ ರಸ್ತೆ, ರೈಲ್ವೆ ನಿಲ್ದಾಣ ವೃತ್ತ, ಜೆಎಲ್‍ಬಿ ರಸ್ತೆ(ಮೂಡಾ ಕಚೇರಿ) ಮತ್ತು ನಗರ ಬಸ್‌ ನಿಲ್ದಾಣ (ಪ್ರಯಾಣ ದರ ವಯಸ್ಕರಿಗೆ: 200 ರೂ. ಮತ್ತು ಮಕ್ಕಳಿಗೆ 150 ರೂ.)


5) ಮೈಸೂರು ದರ್ಶಿನಿ: ನಗರದ ಒಳಗೆ ವೋಲ್ವೋ ವಾಹನಗಳಿಂದ ನಂಜನಗೂಡು, ಚಾಮುಂಡಿಬೆಟ್ಟ, ಮೃಗಾಲಯ, ಅರಮನೆ, ಶ್ರೀರಂಗಪಟ್ಟಣ, ಕೆಆರ್‍ಎಸ್(ಪ್ರಯಾಣ ದರ ವಯಸ್ಕರಿಗೆ: 400 ರೂ. ಮತ್ತು ಮಕ್ಕಳಿಗೆ: 200 ರೂ.)


ಇದನ್ನೂ ಓದಿ: Mysuru Dasara Festival: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಸಾಂಸ್ಕೃತಿಕ ನಗರಿ ಮೈಸೂರು


ಇದಲ್ಲದೆ ಮೈಸೂರಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಐರಾವತ ಕ್ಲಬ್ ಕ್ಲಾಸ್ ವಾಹನಗಳಿಂದ 1 ದಿನದ ವಿಶೇಷ ಪ್ರವಾಸ ವ್ಯವಸ್ಥೆ ಮಾಡಲಾಗಿದೆ.


ವಿಶೇಷ ಟೂರ್ ಪ್ಯಾಕೇಜ್‍ಗಳು


ಮೈಸೂರು ನಗರ ದೀಪಾಲಂಕಾರ ದರ್ಶನ ಹೊರತುಪಡಿಸಿ ಬಸ್‍ಗಳು ಬೆಳಗ್ಗೆ ಮೈಸೂರಿನಿಂದ ಹೊರಟು ಮೇಲ್ಕಂಡ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ಸಾಯಂಕಾಲ ಮೈಸೂರಿಗೆ ವಾಪಸ್ಸಾಗಲಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.