ಮತ್ತೆ ಕೋರ್ಟ್ ಮೆಟ್ಟಿಲೇರಿದ ಸಿಗಂದೂರು ಚೌಡೇಶ್ವರಿ ಪೂಜೆಯ ಹಕ್ಕಿನ ವಿವಾದ!

ಸಿಗಂದೂರು ಚೌಡೇಶ್ವರಿ ದೇವಾಲಯ ನವರಾತ್ರಿ ಆಚರಣೆ ಸಿದ್ಧವಾಗುತ್ತಿದೆ. ಇದರ ನಡುವೆ ಹಿಂದಿನಿಂದಲೂ ತಲೆಮಾರುಗಳಿಂದ ಪಡೆದ ಪೂಜೆ ಹಕ್ಕಿಗೆ ಯಾವುದೇ ಅಡ್ಡಿಯಾಗಬಾರದು ಎಂದು ದೇವಾಲಯದ ಅರ್ಚಕ ಎಸ್.ಪಿ.ಶೇಷಗಿರಿ ಭಟ್, ಖಾಯಂ ಪ್ರತಿಬಂಧಕಾಜ್ಞೆಯನ್ನು ಕೋರಿ ಸಾಗರ ಕೋರ್ಟ್ ಮೊರೆಹೋಗಿದ್ದಾರೆ. 

Written by - Zee Kannada News Desk | Last Updated : Sep 25, 2022, 05:16 PM IST
  • ಸಿಗಂದೂರು ಚೌಡೇಶ್ವರಿ ದೇವಾಲಯ ನವರಾತ್ರಿ ಆಚರಣೆ ಸಿದ್ಧವಾಗುತ್ತಿದೆ
  • ಮತ್ತೆ ಕೋರ್ಟ್ ಮೆಟ್ಟಿಲೇರಿದ ಸಿಗಂದೂರು ಚೌಡಶ್ವರಿ ಪೂಜೆಯ ಹಕ್ಕಿನ ವಿವಾದ
  • ಇದೇ ಸೆಪ್ಟೆಂಬರ್ 26 ಕ್ಕೆ ಅರ್ಜಿ ಆದೇಶವನ್ನು ಕಾದಿರಿಸಿದೆ ಎನ್ನಲಾಗಿದೆ
ಮತ್ತೆ ಕೋರ್ಟ್ ಮೆಟ್ಟಿಲೇರಿದ ಸಿಗಂದೂರು ಚೌಡೇಶ್ವರಿ ಪೂಜೆಯ ಹಕ್ಕಿನ ವಿವಾದ! title=
ಸಿಗಂದೂರು ಚೌಡೇಶ್ವರಿ ದೇವಾಲಯ

ಸಿಗಂದೂರು ಚೌಡೇಶ್ವರಿ ದೇವಾಲಯ ನವರಾತ್ರಿ ಆಚರಣೆ ಸಿದ್ಧವಾಗುತ್ತಿದೆ. ಇದರ ನಡುವೆ ಹಿಂದಿನಿಂದಲೂ ತಲೆಮಾರುಗಳಿಂದ ಪಡೆದ ಪೂಜೆ ಹಕ್ಕಿಗೆ ಯಾವುದೇ ಅಡ್ಡಿಯಾಗಬಾರದು ಎಂದು ದೇವಾಲಯದ ಅರ್ಚಕ ಎಸ್.ಪಿ.ಶೇಷಗಿರಿ ಭಟ್, ಖಾಯಂ ಪ್ರತಿಬಂಧಕಾಜ್ಞೆಯನ್ನು ಕೋರಿ ಸಾಗರ ಕೋರ್ಟ್ ಮೊರೆಹೋಗಿದ್ದಾರೆ. 

ನಿತ್ಯಪೂಜೆ, ವಿಶೇಷ ಪೂಜೆ, ನವರಾತ್ರಿ ಪೂಜೆ, ಚಂಡಿಕಾಯಾಗ, ಪ್ರಸಾದ ವಿತರಣೆ ಸೇರಿದಂತೆ ಇತರೇ ಪೂಜಾ ಹಕ್ಕಿಗೆ ತೊಂದರೆ ಪಡಿಸಬಾರದು ಎಂದು ಅರ್ಜಿಯಲ್ಲಿ ಕೋರಿರುವ ಶೇಷಗರಿ ಭಟ್ರವರ ಕಳೆದ 20 ನೇ ತಾರೀಖು ಸಿವಿಲ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. 

ಇದನ್ನೂ ಓದಿ : SM Krishna : ಮಾಜಿ ಸಿಎಂ ಎಸ್.ಎಂ.ಕೃಷ್ಣ ಆಸ್ಪತ್ರೆಗೆ ದಾಖಲು

ಅರ್ಚಕ ಶೇಷಗಿರಿ ಭಟ್ರವರ ವಾದವೇನು?

ಈ ಹಿಂದೆ ನಡೆದಿದ್ದ ರಾಜೀ ಸಂಧಾನ ಈ ಮೂಲಕ ಬಹುತೇಕ ಮುರಿದುಬಿದ್ದಂತಾಗಿದೆ. ಇನ್ನೂ ಈ ಸಂಬಂದ ನಿನ್ನೆ ವಾದ-ಪ್ರತಿವಾದ ನಡೆದಿದ್ದು, ಶೇಷಗಿರಿ ಭಟ್ರವರು ತಮ್ಮ ವಕೀಲರ ಮೂಲಕ ತಮ್ಮ ಹಕ್ಕಿಗೆ ದಕ್ಕೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ 2021 ರಲ್ಲಿ ಶೇಷಗಿರಿ ಭಟ್ರಿಗೆ ಧರ್ಮದರ್ಶಿ ರಾಮಪ್ಪರವರು ದೇವಾಲಯದ ಜವಾಬ್ದಾರಿ ನೋಡಿಕೊಂಡು ಹೋಗುವಂತೆ ನೀಡಿದ ಪತ್ರವನ್ನು ಕೋರ್ಟ್ಗೆ ಹಾಜರು ಪಡಿಸಲಾಗಿದೆ. 

ಇದನ್ನೂ ಓದಿ : BMS ಅಕ್ರಮ: ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ರಾಜೀನಾಮೆಗೆ ಬೀಗಿ ಪಟ್ಟು

ಧರ್ಮದರ್ಶಿ ರಾಮಪ್ಪರವರ ವಾದವೇನು?

ಇನ್ನೂ ಧರ್ಮದರ್ಶಿ ರಾಮಪ್ಪರವರ ಪರ ವಕೀಲುರು ಶೇಷಗಿರಿ ಭಟ್ರವರ ಆರೋಪ ಅಲ್ಲಗಳೆದಿದ್ದು, ಸಿಗಂದೂರು ದೇವಾಲಯದಲ್ಲಿ ವಂಶಪಾರಿಕವಾದ ಪೂಜೆಯ ಹಕ್ಕು ಇಲ್ಲ. ಅವರು ಕೆಲಸ ಕಳೆದುಕೊಳ್ಳುವ ಭೀತಿಯಿಂದ ಸುಳ್ಳು ಸಂಗತಿಯನ್ನು ಬಿಂಬಿಸುತ್ತಿದ್ದಾರೆ. ಅಲ್ಲದೆ ಜವಾಬ್ದಾರಿ ನೀಡಿದ್ಧಾರೆ ಎನ್ನಲಾದ ಒಪ್ಪಿಗೆ ಪತ್ರ ಕೂಡ ಅವರದ್ದೆ ಸೃಷ್ಟಿ ಎಂದು ವಾದಿಸಿದ್ದಾರೆ. ಸದ್ಯ ಎರಡು ಕಡೆಯಿಂದ ವಾದ ಆಲಿಸಿರುವ ಕೋರ್ಟ್ ಇದೇ ಸೆಪ್ಟೆಂಬರ್ 26 ಕ್ಕೆ ಅರ್ಜಿ ಆದೇಶವನ್ನು ಕಾದಿರಿಸಿದೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News