ಬೆಂಗಳೂರು: ಹಿಂದೆ ಏಕಾಏಕಿ ನೋಟ್ ಬ್ಯಾನ್ (NoteBan) ಮಾಡಿದ ರೀತಿಯಲ್ಲಿ ಇಂದು-ಮುಂದು ನೋಡದೆ ಲಾಕ್‌ಡೌನ್‌ ಮಾಡಲಾಯಿತು.‌ ಈಗಲಾದರೂ ಸಮರ್ಪಕವಾಗಿ ಚರ್ಚೆ ನಡೆಸಿ  ತೀರ್ಮಾನ ಕೈಗೊಳ್ಳಲಿ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ (M.B. Patil) ಹೇಳಿದರು.


COMMERCIAL BREAK
SCROLL TO CONTINUE READING

ಲಾಕ್‌ಡೌನ್‌ (Lockdown) ಜಾರಿಗೊಳಿಸುವ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಂ.ಬಿ. ಪಾಟೀಲ್, ಮಾರ್ಚ್ 24ರಂದು ಮೊದಲ ಹಂತದಲ್ಲಿ ಲಾಕ್‌ಡೌನ್‌ ಜಾರಿಗೊಳಿಸುವಾಗ ನೋಟ್ ಬ್ಯಾನ್ ಜಾರಿಗೊಳಿಸಿದ ರೀತಿ ಮಾಡಿದರು. 


'ಕೃಷ್ಣಾ ಮೇಲ್ದಂಡೆಗೆ 20,000 ಕೋಟಿ ಹಣ ಮೀಸಲಿಡುತ್ತೇವೆ ಎಂದ ಆ ಹಣ, ಈಗ ಎಲ್ಲಿ ಮಾಯವಾಯಿತು...ಗೋವಿಂದಾ ಗೋವಿಂದ!'


ಸಿಂಗಪೂರ್ ನಲ್ಲಿ ಲಾಕ್‌ಡೌನ್‌ ಜಾರಿಗೊಳಿಸುವಾಗ ನೋಟಿಸ್ ಕೊಟ್ಟು ಎಚ್ಚರಿಕೆ ನೀಡಲಾಗಿತ್ತು. ಆದರೆ ನಮ್ಮ ದೇಶದಲ್ಲಿ ಹಾಗೆ ಮಾಡಲಿಲ್ಲ. ಏಕಾಏಕಿ ಮಾಡಲಾಗಿತ್ತು. ಅದರಿಂದ ತೀವ್ರ ತೊಂದರೆ ಉಂಟಾಗಿತ್ತು ಎಂದು ವಿವರಿಸಿದರು.


ಇದಾದ ಬಳಿಕ COVID-19 ಹರಡುವಿಕೆ ಬಗ್ಗೆ ಆತಂಕ ವ್ಯಕ್ತಪಡಿಸಿದ ಎಂ.ಬಿ. ಪಾಟೀಲ್, ಹಳ್ಳಿಗಳಲ್ಲಿ ಜನ ಮಾಸ್ಕ್ ಹಾಕೋದನ್ನೇ ಬಿಟ್ಟಿದ್ದಾರೆ. ಅನೇಕ ಸಾವುಗಳು ಸಂಭವಿಸಿವೆ. ನಗರ ಪ್ರದೇಶದಲ್ಲಿ ಇದ್ದ COVID-19 ಈಗ ಹಳ್ಳಿಗಳಲ್ಲಿ ಹರಡಿಕೊಂಡಿದೆ. ಈ ಹಿನ್ನಲೆಯಲ್ಲಿ ಲಾಕ್‌ಡೌನ್‌ ಜಾರಿಗೊಳಿಸುವ ಬಗ್ಗೆ ಚರ್ಚೆ ಆರಂಭವಾಗಿದೆ. ಆದರೆ ಈ ವಿಷಯದಲ್ಲಿ ಎಲ್ಲಾ ಮಗ್ಗಲುಗಳಿಂದ ಯೋಚಿಸಿ ಕ್ರಮ ಕೈಗೊಳ್ಳಬೇಕು. ಏಕಾಏಕಿ ನಿರ್ಧರಿಸಬಾರದು ಎಂದು ಹೇಳಿದರು.


ಹಳ್ಳಿಗಳಲ್ಲೂ ಲಾಕ್‌ಡೌನ್‌ ಮಾಡಬೇಕಾ? ಜನಸಾಂದ್ರತೆ ಹೆಚ್ಚಾಗಿರುವ ಕಡೆ ಲಾಕ್‌ಡೌನ್‌ ಜಾರಿಗೊಳಿಸಬೇಕಾ? ಹೀಗೆ ಹಲವು ವಿಚಾರಗಳನ್ನು ಚರ್ಚೆ ಮಾಡಬೇಕಾದ ಅಗತ್ಯವಿದೆ ಎಂದು ಎಂ.ಬಿ.‌ ಪಾಟೀಲ್ ತಿಳಿಸಿದರು.