ಚಾಮರಾಜನಗರ: ಪ್ರೇಮಿಗಳಿಬ್ಬರು ಹಾಡಹಗಲೇ ರಸ್ತೆಯಲ್ಲಿಯೇ ಅದು ಬೈಕ್ ಮೇಲೆ ಕುಳಿತು ಲವ್ವಿ-ಡವ್ವಿ ಆಟವನ್ನಾಡಿರುವ ಘಟನೆ ಚಾಮರಾಜನಗರ-ಗುಂಡ್ಲುಪೇಟೆ ರಸ್ತೆಯಲ್ಲಿ ನಡೆದಿದೆ. ಈ ಮ್ಯಾಡ್ ಲವರ್ಸ್‍ ಹುಚ್ಚಾಟಕ್ಕೆ ಜನರು ಅವಕ್ಕಾಗಿದ್ದಾರೆ.


COMMERCIAL BREAK
SCROLL TO CONTINUE READING

ಪಲ್ಸರ್ ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲೆ ಉಲ್ಟಾ ಕುಳಿತ ಯುವತಿ ಹುಡುಗನನ್ನು ಅಪ್ಪಿಕೊಂಡು ಮುತ್ತು ಕೊಡುತ್ತಿದ್ದಳು. ಜನರು, ಬಸ್, ಲಾರಿಗಳ ಸಂಚಾರವಿದ್ದರೂ ಅದರ ಪರಿವೇ ಇಲ್ಲದಂತೆ ಹೆದ್ದಾರಿಯಲ್ಲಿ ಇಬ್ಬರು ಹುಚ್ಚಾಟ ನಡೆಸಿದ್ದಾರೆ. ಬೈಕ್‍ನಲ್ಲಿಯೇ ಮುದ್ದಾಡುತ್ತಾ ಲವ್ ಬರ್ಡ್ಸ್‍ ಸಂಚರಿಸಿದ್ದಾರೆ. ಇವರಿಬ್ಬರ ಹುಚ್ಚಾಟವನ್ನು ಕಂಡು ಒಂದು ಕ್ಷಣ ಜನರೇ ದಂಗುಬಡಿದು ಹೋಗಿದ್ದಾರೆ.


ಇದನ್ನೂ ಓದಿ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿಎಸ್‍ವೈ ಹೆಸರು: ಇದು ಬೊಮ್ಮಾಯಿ ಕುರ್ಚಿ ಕಸರತ್ತಿನ ರಾಜಕಾರಣ ಎಂದ ಕಾಂಗ್ರೆಸ್


ಬೈಕ್ ಚಾಮರಾಜನಗರದ್ದಲ್ಲೇ ನೋಂದಣಿಯಾಗಿದ್ದು, ಕೆಲ ಸವಾರರು ಇಬರಿಬ್ಬರ ಆಟವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.‌ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಡಿವೈಎಸ್‍ಪಿ ಸೂಚನೆ ಮೇರೆಗೆ ಬೈಕ್ ಜಪ್ತಿ ಮಾಡಲು ತಲಾಶ್ ನಡೆಸುತ್ತಿರುವುದಾಗಿ ಚಾಮರಾಜನಗರ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.


ಸದ್ಯ ಈ ಲವ್ ಬರ್ಡ್ಸ್‍ಗಳ ಹುಚ್ಚಾಟದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಸ್ವಲ್ಪವೂ ಮಾನ ಮರ್ಯಾದೆ ಇಲ್ಲದೆ ನಡುರಸ್ತೆಯಲ್ಲಿಯೇ ಈ ರೀತಿ ಅಸಹ್ಯವಾಗಿ ನಡೆದುಕೊಂಡಿರುವ ಲವರ್ಸ್ ಕಂಡು ಜನರು ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ.


ಇದನ್ನೂ ಓದಿ: R Ashoka : ರೈತರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಸಚಿವ ಆರ್ ಅಶೋಕ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.