ಥೂ.. ನೀನು ಮನುಷ್ಯನಾ..? ಬೀದಿನಾಯಿ ಮೇಲೆ ಕಾರು ಹತ್ತಿಸಿ ಕೊಂದೇಬಿಟ್ಟ ಪಾಪಿ..!

ಏಪ್ರಿಲ್ 19ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ನಾಯಿ ಮೇಲೆ ಕಾರು ಹತ್ತಿಸುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಸ್ತೆ ದಾಟುತ್ತಿದ್ದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ ಬಳಿಕ ನಿಲ್ಲಸದೆ ಎಸ್ಕೇಪ್ ಆಗಿದ್ದಾನೆ.

Written by - VISHWANATH HARIHARA | Edited by - Puttaraj K Alur | Last Updated : Apr 21, 2022, 04:24 PM IST
  • ಬೆಂಗಳೂರಿನಲ್ಲಿ ಬೀದಿನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಕಾರು ಚಾಲಕ
  • ನಾಯಿ ಮೇಲೆ ಕಾರು ಹತ್ತಿಸುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ
  • ಆರೋಪಿ ವಿರುದ್ಧ FIR ದಾಖಲು, ಕಾರು ಚಾಲಕನಿಗಾಗಿ ಪೊಲೀಸರ ಶೋಧ
ಥೂ.. ನೀನು ಮನುಷ್ಯನಾ..? ಬೀದಿನಾಯಿ ಮೇಲೆ ಕಾರು ಹತ್ತಿಸಿ ಕೊಂದೇಬಿಟ್ಟ ಪಾಪಿ..! title=
ಬೀದಿನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ

ಬೆಂಗಳೂರು: ಬೀದಿ ನಾಯಿಯೊಂದರ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದಿರೋ ಅಮಾನವೀಯ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಏಪ್ರಿಲ್ 19ರಂದು ಬೆಳಗ್ಗೆ ರಸ್ತೆ ದಾಟುತ್ತಿದ್ದ ನಾಯಿ ಮೇಲೆ ಕಾರು ಹತ್ತಿಸಿ ಚಾಲಕ ನಿಲ್ಲಿಸದೆ  ಪರಾರಿಯಾಗಿದ್ದಾನೆ.

ಅಪಘಾತಕ್ಕೊಳಗಾದ ನಾಯಿ ನಡು ರಸ್ತೆಯಲ್ಲೇ ವಿಲವಿಲ ಒದ್ದಾಡಿದ್ದನ್ನು ಕಂಡ ಮಹಿಳೆ ಆರೈಕೆ ಮಾಡಿದರೂ ಪ್ರಯೋಜನವಾಗಿಲ್ಲ. ಗಂಭೀರವಾಗಿ ಗಾಯಗೊಂಡಿದ್ದ ನಾಯಿ ಪ್ರಾಣ ಬಿಟ್ಟಿದೆ. ನಾಯಿ ಮೇಲೆ ಕಾರು ಹತ್ತಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಹುಣಸೂರಿನಲ್ಲಿ ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ 6 ಮಂದಿ ದುರ್ಮರಣ

ಘಟನೆ‌ ಕುರಿತು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ಕೂಡ ದಾಖಲಾಗಿದೆ. ನಾಯಿ ಮೇಲೆ ಕಾರು ಹತ್ತಿಸಿದ ಬಳಿಕ ಚಾಲಕ ನಿಲ್ಲಿಸಿದೆ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಘಟನೆ ಸಂಬಂಧ ಕಾರು ಚಾಲಕನ  ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದು, ಸತ್ಯನಾರಾಯಣ ಎಂಬ ವ್ಯಕ್ತಿಗೆ ಸೇರಿದ ಕಾರು ಎಂದಷ್ಟೇ ಗೊತ್ತಾಗಿದೆ.

ಸರ್ ಎಂ.ವಿ.ಲೇಔಟ್‍ನಲ್ಲಿ ವ್ಯಕ್ತಿಯೊಬ್ಬ ಬೀದಿನಾಯಿ ಮೇಲೆ ಕಾರು ಚಲಾಯಿಸಿ ಅದರ ಸಾವಿಗೆ ಕಾರಣವಾಗಿದ್ದಾನೆ. ಈ ಬಗ್ಗೆ FIR ದಾಖಲಾಗಿದ್ದು, ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ: 5 ವರ್ಷದ ಮಗನನ್ನು ಕೊಂದು ನೇಣಿಗೆ ಶರಣಾದ ತಾಯಿ

ಅಪಘಾತಕ್ಕೊಳಗಾದ ನಾಯಿ ನಡು ರಸ್ತೆಯಲ್ಲಿಯೇ ವಿಲವಿಲ ಒದ್ದಾಡಿ ಮೃತಪಟ್ಟಿದೆ. ಮನಸ್ಸು ಮಾಡಿದ್ದರೆ ಚಾಲಕ ತಮ್ಮ ಕಾರನ್ನು ನಿಲ್ಲಿಸಿ ನಾಯಿಗೆ ಚಿಕಿತ್ಸೆ ಕೊಡಿಸಿದ್ದರೆ ಅದು ಬದುಕುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಾಯಿಗಳ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆಯುತ್ತಿರುವ ಘಟನೆಗಳು ಪುನಃ ಪುನಃ ಮರುಕಳಿಸುತ್ತಿವೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರಾಣಿಪ್ರಿಯರು ಆಗ್ರಹಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News