ಬೆಂಗಳೂರು: ಮಹಾಶಿವರಾತ್ರಿ ಹಬ್ಬದ ಆಚರಣೆಗಾಗಿ ರಾಜ್ಯಾದ್ಯಂತ ಜನರು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ಮಹಾಶಿವರಾತ್ರಿ ಆಚರಣೆಗಾಗಿ ಭರ್ಜರಿ ತಯಾರಿ ನಡೆಯುತ್ತಿದ್ದು, ಇಲ್ಲಿನ ಮಲ್ಲೇಶ್ವರಂನಲ್ಲಿ ಶಿವನ ವಿಶೇಷ ದೇವಾಲಯವನ್ನು ನಿರ್ಮಿಸಲಾಗಿದೆ. ವಿಶೇಷವೆಂದರೆ ಈ ದೇವಾಲಯವನ್ನು ಕೇವಲ ಇಪ್ಪತ್ತು ದಿನಗಳಲ್ಲಿ ನಿರ್ಮಿಸಲಾಗಿದೆ.


COMMERCIAL BREAK
SCROLL TO CONTINUE READING

ಇಪ್ಪತ್ತು ದಿನದಲ್ಲಿ ಸಿದ್ದವಾಯ್ತು ಶಿವನ ವಿಶೇಷ ದೇವಾಲಯ:
ಶಿವರಾತ್ರಿ ಹಬ್ಬದ ಪ್ರಯುಕ್ತ ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಮಲ್ಲೇಶ್ವರಂ ನ 8ನೇ ಕ್ರಾಸ್ ನಲ್ಲಿರುವ ವಾಸವಿ ದೇವಾಲಯದಲ್ಲಿ ಶಿವನ ಪ್ರತಿಮೆಯ ವಿಶೇಷವಾದ ಸೆಟ್ ಹಾಕಲಾಗಿದೆ. ಒಂದು ಕಡೆ ಹುಲಿಯ ಬಾಯೊಳಗೆ ನುಗ್ಗಿ ಬಳಿಕ ಶಿವ‌ಲಿಂಗಕ್ಕೆ ಅಭಿಶೇಕ ಮಾಡುವ ಮೂಲಕ ಹಸುವಿನ ಬಾಯೊಳಗಿಂದ ಬರುವ ಭಕ್ತಾದಿಗಳು ಬಳಿಕ ಶಿವನ ದೇವಾಲಯಕ್ಕೆ ನಮಸ್ಕರಿಸಿ ಬರಬಹುದಾಗಿದೆ. 


ಇದನ್ನೂ ಓದಿ- Maha Shivaratri: ಮಹಾಶಿವರಾತ್ರಿಯಂದು ಈ ವಿಶೇಷ ರೀತಿ ಶಿವನನ್ನು ಆರಾಧಿಸಿದರೆ, ನಿಮ್ಮೆಲ್ಲಾ ಆಸೆಗಳು ಈಡೇರುತ್ತವೆ


ರಾಜೇಶ್ ಮತ್ತು ತಂಡದವರು ಈ ಅಪರೂಪದ ಕಲಾಕೃತಿಯನ್ನು ನಿರ್ಮಿಸಿದ್ದಾರೆ. 15-20 ದಿನಗಳಲ್ಲಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಿದ್ದಾರೆ. ಮಾರ್ಚ್ 1ರಂದು ಮಹಾಶಿವರಾತ್ರಿ (Mahashivaratri) ಹಬ್ಬದ ಪ್ರಯುಕ್ತ ಈ ಕಲಾಕೃತಿಯನ್ನು ನಿರ್ಮಿಸಲಾಗಿದ್ದು, ಮಾರ್ಚ್ 1 ಮತ್ತು ಮಾರ್ಚ್ 2ರಂದು ಈ ಕಲಾಕೃತಿ ಸಾರ್ವಜನಿಕರ ದರ್ಶನಕ್ಕೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ ಎಂದು ಮಾಹಿತಿ ಲಭ್ಯವಾಗಿದೆ.


ಇದನ್ನೂ ಓದಿ- Mahashivaratri: ಮಹಾಶಿವರಾತ್ರಿಯಂದು 'ಮಹಾಸಂಯೋಗ'! ಈ 5 ರಾಶಿಯವರ ಮೇಲೆ ಶಿವನ ಕೃಪೆ!


ಈ ವಿಶೇಷ ದೇವಾಲಯದ ಒಂದು ಸಣ್ಣ ಝಲಕ್ ಇಲ್ಲಿದೆ ನೋಡಿ: https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.