/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ: ಮಾರ್ಚ್ 1ರ ಮಂಗಳವಾರ ಮಹಾಶಿವರಾತ್ರಿ ಹಬ್ಬ(Mahashivratri 2022). ಶಿವ ಮತ್ತು ತಾಯಿ ಪಾರ್ವತಿಯ ವಿವಾಹದ ಈ ಪವಿತ್ರ ದಿನವು ತುಂಬಾ ವಿಶೇಷವಾಗಿದೆ. ಈ ದಿನ ಪೂಜೆಯ ಜೊತೆಗೆ ತಂತ್ರ-ಮಂತ್ರ, ಉಪಾಯ-ಪರಿಹಾರ ಮಾಡುವುದು ಬಹಳ ಮುಖ್ಯ. ಈ ದಿನ ಮಾಡುವ ಪೂಜೆ, ಪರಿಹಾರಗಳು ಅನೇಕ ಪಟ್ಟು ಹೆಚ್ಚಿನ ಫಲಿತಾಂಶವನ್ನು ನೀಡುತ್ತದೆ. ಅಂದು ಮಹಾದೇವನನ್ನು ಮೆಚ್ಚಿಸಲು ಕೆಲವು ವಿಶೇಷ ಪೂಜಾ ವಿಧಿ-ವಿಧಾನ(Mahashivratri Worship Time)ಗಳನ್ನು ಮಾಡಬೇಕು. ಇದರಿಂದ ಅದೃಷ್ಟ ನಿಮ್ಮ ಕೈಹಿಡಿಯಲಿದೆ. ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ ಮತ್ತು ಜೀವನದಲ್ಲಿ ಯಾವುದಕ್ಕೂ ಕೊರತೆಯಿರುವುದಿಲ್ಲ.

ಮಹಾಶಿವರಾತ್ರಿಯ ಈ ಪರಿಹಾರಗಳು ತುಂಬಾ ಪರಿಣಾಮಕಾರಿ

ಧನ ಪ್ರಾಪ್ತಿಗೆ: ಮಹಾಶಿವರಾತ್ರಿಯಂದು ಶಿವನನ್ನು ಪೂಜಿಸಿದ ನಂತರ ದಿನದ ಯಾವುದೇ ಸಮಯದಲ್ಲಿ ಮೀನಿಗೆ ಹಿಟ್ಟಿನ ಮಾತ್ರೆಗಳನ್ನು ತಿನ್ನಿಸಿ. ಇದರಿಂದ ಹಣದ ಒಳಹರಿವು ಹೆಚ್ಚುತ್ತದೆ. ಧನ ಪ್ರಾಪ್ತಿಗೆ ಈ ಪರಿಹಾರ ಬಹುಮುಖ್ಯವೆಂದು ಹೇಳಲಾಗಿದೆ.

ಇದನ್ನೂ ಓದಿ: Astrology: ಸಂಗಾತಿಯ ಮೇಲೆ ಕಿಂಚಿತ್ತು ನಂಬಿಕೆ ಇಡಲ್ಲ ಈ 3 ರಾಶಿಗಳ ಜನರು, ಪ್ರತಿಯೊಂದು ಚಟುವಟಿಕೆಯ ಮೇಲೆ ನಿಗಾ ಇಡುತ್ತಾರೆ

ದಾಂಪತ್ಯದಲ್ಲಿನ ಅಡೆತಡೆ ನಿವಾರಿಸಲು: ತಮ್ಮ ದಾಂಪತ್ಯದಲ್ಲಿ ಅಡೆತಡೆಗಳನ್ನು ಎದುರಿಸುತ್ತಿರುವವರು ಮಹಾಶಿವರಾತ್ರಿಯ ದಿನದಂದು ಶಿವಲಿಂಗಕ್ಕೆ ಕುಂಕುಮ ಮಿಶ್ರಿತ ಹಾಲನ್ನು ಅರ್ಪಿಸಬೇಕು(Mahashivratri Remedies). ಇದು ಶೀಘ್ರದಲ್ಲೇ ನಿಮಗೆ ಅತ್ಯುತ್ತಮ ಪರಿಹಾರ ನೀಡುತ್ತದೆ.  

ಸಂತೋಷ ಮತ್ತು ಸಮೃದ್ಧಿ ಪಡೆಯಲು: ಜೀವನವು ಅನೇಕ ತೊಂದರೆಗಳಿಂದ ಆವೃತವಾಗಿದ್ದರೆ, ಮನೆಯವರ ಆಶೀರ್ವಾದ ಕಡಿಮೆಯಾದರೆ ಮಹಾಶಿವರಾತ್ರಿಯಂದು ನಂದಿಗೆ (ಗೂಳಿ) ಹಸಿರು ಮೇವನ್ನು ತಿನ್ನಿಸಿ. ಇದರಿಂದ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ.

ಇಷ್ಟಾರ್ಥಗಳ ನೆರವೇರಿಕೆಗೆ: ಮಹಾಶಿವರಾತ್ರಿಯ ದಿನ 21 ಎಲೆಗಳ ಮೇಲೆ ಶ್ರೀಗಂಧದಿಂದ ‘ಓಂ ನಮಃ ಶಿವಾಯ’ ಎಂದು ಬರೆದು ಶಿವಲಿಂಗಕ್ಕೆ ಅರ್ಪಿಸಿದರೆ ಭೋಲೇನಾಥನು ಸಂತೋಷಗೊಂಡು ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ.

ಮನಃಶಾಂತಿ ಪಡೆಯಲು: ಮಹಾಶಿವರಾತ್ರಿಯಂದು ನೀರಿನಲ್ಲಿ ಕಪ್ಪು ಎಳ್ಳನ್ನು ಬೆರೆಸಿ ಶಿವಲಿಂಗಕ್ಕೆ ಅರ್ಪಿಸಬೇಕು.

ಪಿತೃ ದೋಷ ನಿವಾರಣೆಗೆ: ಮಹಾಶಿವರಾತ್ರಿಯ ದಿನ ಬಡವರಿಗೆ ಅನ್ನ ನೈವೇದ್ಯ ಮಾಡಿ, ಇದರಿಂದ ಪೂರ್ವಜರು ಸಂತುಷ್ಟರಾಗುತ್ತಾರೆ ಮತ್ತು ಮನೆಯಲ್ಲಿ ಸಂತಸವನ್ನು ತರುತ್ತಾರೆ.

ಇದನ್ನೂ ಓದಿ: Vastu Suggestions: ವ್ಯಾಪಾರ ಮತ್ತು ನೌಕರಿಯಲ್ಲಿ ಉನ್ನತಿಗಾಗಿ ಈ ಉಪಾಯಗಳನ್ನು ಅನುಸರಿಸಿ ನೋಡಿ!

ಸಂತಾನ ಪ್ರಾಪ್ತಿಗೆ: ಮಹಾಶಿವರಾತ್ರಿ(Mahashivratri)ಯ ದಿನ ಹಿಟ್ಟಿನಿಂದ 11 ಶಿವಲಿಂಗಗಳನ್ನು ಮಾಡಿ ಜಲಾಭಿಷೇಕ ಮಾಡುವುದರಿಂದ ಸಂತಾನ ಸುಖ ಬೇಗ ಸಿಗುತ್ತದೆ.

ಸಂತೋಷ ಪಡೆಯಲು: ಮಹಾಶಿವರಾತ್ರಿಯ ದಿನ ಶಿವನಿಗೆ ಎಳ್ಳು ಮತ್ತು ಬಾರ್ಲಿಯನ್ನು ಅರ್ಪಿಸುವುದರಿಂದ ಪಾಪಗಳು ಮತ್ತು ದುಃಖಗಳು ನಾಶವಾಗುತ್ತವೆ. ಜೀವನದಲ್ಲಿ ಸಂತೋಷ ಬರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
These tricks of Mahashivratri will awaken the sleeping fortune, there will be no shortage in life
News Source: 
Home Title: 

ಮಹಾಶಿವರಾತ್ರಿ: ಭಕ್ತಿಯಿಂದ ಈ ಕೆಲಸ ಮಾಡಿದರೆ ಜೀವನದಲ್ಲಿ ಯಾವುದಕ್ಕೂ ಕೊರತೆಯಿರುವುದಿಲ್ಲ

ಮಹಾಶಿವರಾತ್ರಿ: ಭಕ್ತಿಯಿಂದ ಈ ಕೆಲಸ ಮಾಡಿದರೆ ಜೀವನದಲ್ಲಿ ಯಾವುದಕ್ಕೂ ಕೊರತೆಯಿರುವುದಿಲ್ಲ
Caption: 
ಮಹಾಶಿವರಾತ್ರಿಯಂದು ಈ ವಿಶೇಷ ಪೂಜೆ ಮಾಡಿ
Yes
Is Blog?: 
No
Tags: 
Facebook Instant Article: 
Yes
Highlights: 

ಮಹಾಶಿವರಾತ್ರಿಯಂದು ಪೂಜೆ ಬಳಿಕ ಮೀನಿಗೆ ಹಿಟ್ಟಿನ ಮಾತ್ರೆ ತಿನ್ನಿಸಿದರೆ ಧನ ಪ್ರಾಪ್ತಿಯಾಗುತ್ತದೆ

ದಾಂಪತ್ಯದಲ್ಲಿನ ಅಡೆತಡೆ ನಿವಾರಿಸಲು ಮಹಾಶಿವರಾತ್ರಿಯಂದು ಶಿವಲಿಂಗಕ್ಕೆ ಕುಂಕುಮ ಮಿಶ್ರಿತ ಹಾಲನ್ನು ಅರ್ಪಿಸಬೇಕು

ಮಹಾಶಿವರಾತ್ರಿಯಂದು ನಂದಿಗೆ ಹಸಿರು ಮೇವು ತಿನ್ನಿಸಿದರೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ

Mobile Title: 
ಮಹಾಶಿವರಾತ್ರಿ: ಭಕ್ತಿಯಿಂದ ಈ ಕೆಲಸ ಮಾಡಿದರೆ ಜೀವನದಲ್ಲಿ ಯಾವುದಕ್ಕೂ ಕೊರತೆಯಿರುವುದಿಲ್ಲ
Puttaraj K Alur
Publish Later: 
No
Publish At: 
Sunday, February 27, 2022 - 10:49
Created By: 
Puttaraj K Alur
Updated By: 
Puttaraj K Alur
Published By: 
Puttaraj K Alur
Request Count: 
2
Is Breaking News: 
No