Mahashivratri 2022: ಮಹಾಶಿವರಾತ್ರಿಯ ದಿನ ಈ ಒಂದು ಕೆಲಸ ಮಾಡಿ ಸಾಕು, ಬಯಸಿದ ವರ ನಿಮ್ಮದಾಗಲಿದೆ!

Mahashivratri 2022: ಮಹಾಶಿವರಾತ್ರಿಯ ದಿನದಂದು ಶಿವಲಿಂಗದ (Lord Shiva) ವಿಶೇಷ ಆರಾಧನೆಯಿಂದ ದೇವಾದಿದೇವ ಮಹಾದೇವ ಬೇಗನೆ ಪ್ರಸನ್ನನಾಗುತ್ತಾನೆ. ಅಲ್ಲದೆ, ಕೆಲವು ವಿಶೇಷ ವಸ್ತುಗಳನ್ನು ಅರ್ಪಿಸುವ ಮೂಲಕ, ನೀವು ನಿಮ್ಮ ಇಷ್ಟಾರ್ಥ ಪ್ರಾಪ್ತಿ ಮಾಡಿಕೊಳ್ಳಬಹುದು.   

Written by - Nitin Tabib | Last Updated : Feb 27, 2022, 07:50 PM IST
  • ಸಿಗಲಿದೆ ಇಷ್ಟಾರ್ಥಸಿದ್ಧಿಯ ವರದಾನ.
  • ನಿಮ್ಮ ಪ್ರತಿಯೊಂದು ಇಚ್ಛೆ ಪೂರ್ಣಗೊಳ್ಳಲಿದೆ.
  • ಮಾರ್ಚ್ 1ರಂದು ಈ ಬಾರಿ ಮಹಾಶಿವರಾತ್ರಿಯ ಪರ್ವ ಆಚರಿಸಲಾಗುತ್ತಿದೆ
Mahashivratri 2022: ಮಹಾಶಿವರಾತ್ರಿಯ ದಿನ ಈ ಒಂದು ಕೆಲಸ ಮಾಡಿ ಸಾಕು, ಬಯಸಿದ ವರ ನಿಮ್ಮದಾಗಲಿದೆ! title=
Mahashivratri 2022 (File Photo)

Mahashivratri 2022: ದೇವಾದಿದೇವ ಮಹಾದೇವನ ಆರಾಧನೆಯ ಅತಿದೊಡ್ಡ ಹಬ್ಬ ಎಂದರೆ ಅದುವೇ ಮಹಾಶಿವರಾತ್ರಿ (Maha Shivratri 2022) ಹಬ್ಬ. ಈ ಮಹಾಪರ್ವದ ಆಗಮನಕ್ಕೆ ಕೇವಲ ಒಂದೇ ದಿನ ಬಾಕಿ ಉಳಿದಿವೆ. ಈ ದಿನದಂದು ದಿನದ ನಾಲ್ಕು ಹೊತ್ತು ಶಿವನನ್ನು ಪೂಜಿಸಲಾಗುತ್ತದೆ ಮತ್ತು ಆರಾಧಿಸಲಾಗುತ್ತದೆ. ಈ ದಿನದಂದು ಎಲ್ಲಾ ನಾಲ್ಕು ಹೊತ್ತು ಶಿವನನ್ನು (Lord Shiva) ಪೂಜಿಸುವ ಎಲ್ಲಾ ಭಕ್ತರ ಇಷ್ಟಾರ್ಥಗಳನ್ನು ಶಿವ ನೆರವೇರಿಸುತ್ತಾನೆ ಎಂಬುವುದು ಧಾರ್ಮಿಕ ನಂಬಿಕೆ. ಈ ಬಾರಿಯ ಮಹಾಶಿವರಾತ್ರಿಯನ್ನು ಮಾರ್ಚ್ 01 ರಂದು ಆಚರಿಸಲಾಗುತ್ತಿದೆ. ಮಹಾಶಿವರಾತ್ರಿಯ ದಿನದಂದು ಭಗವಾನ್ ಶಿವನ ವಿಶೇಷ ಆರಾಧನೆಯಿಂದ ಪರಮಾತ್ಮ ಬಹುಬೇಗನೆ ಪ್ರಸನ್ನನಾಗುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಮಹಾಶಿವರಾತ್ರಿಯ ದಿನದಂದು ಕೈಗೊಳ್ಳಬೇಕಾದ ವಿಶೇಷ ಕ್ರಮಗಳ ಕುರಿತು ಮಾಹಿತಿ ಪಡೆದುಕೊಳ್ಳೋಣ ಬನ್ನಿ.

ಸಪ್ತಧಾನ್ಯ (Sapta Dhanya Shiva Mushti) ಎಂದರೇನು?
ಧಾರ್ಮಿಕ ನಂಬಿಕೆಗಳ ಪ್ರಕಾರ, ಮಹಾಶಿವರಾತ್ರಿಯ ದಿನ ಶಿವನಿಗೆ ಧತ್ತೂರಿ, ಬೇಲ್ಪತ್ರ, ಪಂಚಾಮೃತ, ಗಂಗಾಜಲ, ನೀರು, ಹಾಲು, ಗಾಂಜಾ, ಭಸ್ಮ ಇತ್ಯಾದಿಗಳನ್ನು ಅರ್ಪಿಸಲಾಗುತ್ತದೆ. ಇದಲ್ಲದೇ ಸಪ್ತಧಾನ್ಯ ನೀಡಲಾಗುತ್ತದೆ. ಅಕ್ಷತ, ಬಿಳಿ ಎಳ್ಳು, ಪರಿಪೂರ್ಣ ಹೆಸರುಬೆಳೆ, ಬಾರ್ಲಿ ಮತ್ತು ಸಜ್ಜೆ, ಜೋಳ ಮತ್ತು ಗೋಧಿಯನ್ನು ಸಪ್ತಧಾನ್ಯಗಳಲ್ಲಿ (Seven Grains) ಸೇರಿಸಲಾಗಿದೆ.

ಸಪ್ತ ಧಾನ್ಯಗಳನ್ನು ಹೇಗೆ ಅರ್ಪಿಸಬೇಕು
ಸಪ್ತಧಾನ್ಯಗಳ ಶಿವಮುಷ್ಠಿ ಅರ್ಪಿಸುವ ಮೊದಲು ಶಿವನಿಗೆ ಅಭಿಷೇಕ ಮಾಡಿ. ಇದರ ನಂತರ, ಶಿವಲಿಂಗಕ್ಕೆ ಪಂಚಾಮೃತವನ್ನು ಅರ್ಪಿಸಿ. ನಂತರ ಶಿವನಿಗೆ ಜಲಾಭಿಷೇಕ ಮಾಡಿದ ನಂತರ 108 ಬೆಲ್ಪತ್ರಿ ಅರ್ಪಿಸಿ 'ಓಂ ನಮಃ ಶಿವಾಯ' ಈ ಮಂತ್ರವನ್ನು ಪಠಿಸಿ. ಇದರ ನಂತರ, ಶಿವನಿಗೆ ಸುಗಂಧ ದ್ರವ್ಯ ಅರ್ಪಿಸಿ. ಬಿಳಿ ಬಣ್ಣದ ಪಂಚೆಯನ್ನು ಹಳದಿ ಬಣ್ಣದಲ್ಲಿ ಒದ್ದೆ ಮಾಡಿ ಮತ್ತು ಅದನ್ನು ಶಿವಲಿಂಗದ ಮೇಲೆ ಅರ್ಪಿಸಿ. ಹಾಗೆಯೇ ಪಾರ್ವತಿ ದೇವಿಗೆ ಚುನ್ನಿ ಅರ್ಪಿಸಿ. ಕೊನೆಯಲ್ಲಿ, ಶಿವ ಮುಷ್ಟಿಯನ್ನು ಅಂದರೆ ಸಪ್ತಧಾನ್ಯವನ್ನು ಅರ್ಪಿಸಿ.
 

ಮಹಾ ಶಿವರಾತ್ರಿಯ ದಿನದ ನಾಲ್ಕು ಹೊತ್ತಿನಲ್ಲಿ ಶಿವಪೂಜೆಗೆ ಮುಹೂರ್ತ ಇಲ್ಲಿದೆ
>> ಮೊದಲ ಹೊತ್ತಿನ  ಪೂಜೆ - ಸಂಜೆ 6.21 ರಿಂದ  ರಾತ್ರಿ 9.27 ರವರೆಗೆ

>> ಎರಡನೇ ಹೊತ್ತಿನ ಪೂಜೆ - ರಾತ್ರಿ 9.27 ರಿಂದ ಬೆಳಗಿನ ಜಾವ 00.33 ರವರೆಗೆ

>> ಮೂರನೇ ಹೊತ್ತಿನ  ಪೂಜೆ - ಬೆಳಗಿನ ಜಾವ 00:33 ರಿಂದ ಬೆಳಗಿನ ಜಾವ 3.39 ರವರೆಗೆ

>> ನಾಲ್ಕನೇ ಹೊತ್ತಿನ ಪೂಜೆ - ಮಾರ್ಚ್ 2 ರಂದು ಬೆಳಗಿನ ಜಾವ 3:39 ರಿಂದ ಬೆಳಗ್ಗೆ 6.45 ರವರೆಗೆ

>> ಉಪವಾಸಕ್ಕೆ ಶುಭ ಸಮಯ - ಮಾರ್ಚ್ 2, 2022, ಬುಧವಾರ ಸಂಜೆ 6.46 ರವರೆಗೆ

(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News