ಬೆಂಗಳೂರು :10,12ನೇ ತರಗತಿಗೆ ಸಂಬಂಧಿಸಿದಂತೆ ಶಿಕ್ಷಣ ‌ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಇನ್ನು ಮುಂದೆ ಪಬ್ಲಿಕ್ ಪರೀಕ್ಷೆಯಲ್ಲಿ ಫೇಲಾದರೂ ವಿದ್ಯಾರ್ಥಿಗಳಿಗೆ ಮತ್ತೆ ಅದೇ ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗುವುದು.ಈ ಆದೇಶ ಹೊರಡಿಸುವ ಮೂಲಕ  ಶಿಕ್ಷಣ ಇಲಾಖೆ ನಿಯಮ ಬದಲಿಸಿದೆ.
 
10 ಮತ್ತು 12ನೇ ಕ್ಲಾಸಿನಲ್ಲಿ ಫೇಲಾದರೂ ಇನ್ನು ಮುಂದೆ ಮತ್ತೆ ಅದೇ ತರಗತಿಗೆ ಹೋಗುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ.ಇಲ್ಲಿಯವರೆಗೆ 10 ಮತ್ತು 12ನೇ ತರಗತಿಯಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಮತ್ತೆ ಅದೇ ತರಗತಿಗೆ ಪೋರವೇಶ ನೀಡುತ್ತಿರಲಿಲ್ಲ. ಆದ್ರೆ ಇನ್ನು ಕುಂಡೆ ಈ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Kerala Landslide: ಚಾಮರಾಜನಗರದ ಇಬ್ಬರು ಸಾವು, ಇಬ್ಬರು ನಾಪತ್ತೆ, ಓರ್ವನಿಗೆ ಗಾಯ


ಇತ್ತೀಚೆಗೆ  10  ಮತ್ತು 12 ನೇ ತರಗತಿಯಲ್ಲಿ ಡ್ರೌಪ್ ಔಟ್ ಆಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಇದನ್ನ ತಪ್ಪಿಸುವ ಸಲುವಾಗಿ ಫೇಲಾದ ವಿದ್ಯಾರ್ಥಿಗಳಿಗೆ ಮತ್ತೆ ಶಾಲಾ ಕಾಲೇಜಿಗೆ ಹೋಗುವ ಅವಕಾಶ ನೀಡಲಾಗಿದೆ‌. ರೆಗ್ಯೂಲರ್ ವಿದ್ಯಾರ್ಥಿಗಳಿಗೆ ಸಿಗುವ ಸೌಲಭ್ಯ ಈ ವಿದ್ಯಾರ್ಥಿಗಳಿಗೂ ಸಿಗಲಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ. ಅಲ್ಲದೆ, ಈ ವಿದ್ಯಾರ್ಥಿಗಳಿಗೂ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ,ಸಾಕ್ಸ್ ಎಲ್ಲವನ್ನೂ ನೀಡಲಾಗುವುದು. ಈ ವಿದ್ಯಾರ್ಥಿಗಳನ್ನೂ ಸಮಾನವಾಗಿ ಕಾಣುವಂತೆ ಶಿಕ್ಷಕರಿಗೆ ಇಲಾಖೆ ಸೂಚನೆ ನೀಡಿದೆ.


ಇದನ್ನೂ ಓದಿ : ವರುಣಾರ್ಭಟಕ್ಕೆ ಹಾವೇರಿ ಜಿಲ್ಲೆಯ ಜನ ಜೀವನ ಅಸ್ತವ್ಯಸ್ತ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.