Kerala Landslide: ಚಾಮರಾಜನಗರದ ಇಬ್ಬರು ಸಾವು, ಇಬ್ಬರು ನಾಪತ್ತೆ, ಓರ್ವನಿಗೆ ಗಾಯ

Kerala Landslide: ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮದ ರಾಜನ್(50) ಹಾಗೂ ಇವರ ಪತ್ನಿ ರಜನಿ @ ರತ್ನಮ್ಮ(45) ಎಂಬವರ ಮನೆ ಕೊಚ್ಚಿ ಹೋಗಿದ್ದು ಇವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. 

Written by - Yashaswini V | Last Updated : Jul 31, 2024, 08:53 AM IST
  • ಕೇರಳದ ವಯನಾಡ್ ನಲ್ಲಿ ಭೂ ಕುಸಿತ ಪ್ರಕರಣ
  • ಚಾಮರಾಜನಗರ ಮೂಲದ ಇಬ್ಬರು ಸಾವು, ಮತ್ತಿಬ್ಬರಿಗಾಗಿ ಹುಡುಕಾಟ
  • ಮೆಪ್ಪಾಡಿಯಲ್ಲಿ ವಾಸವಿದ್ದ ಚಾಮರಾಜನಗರದ ಪುಟ್ಟ ಸಿದ್ದಿ(62) ಹಾಗು ರಾಣಿ ಎಂಬವರ ಶವ ಪತ್ತೆ
Kerala Landslide: ಚಾಮರಾಜನಗರದ ಇಬ್ಬರು ಸಾವು, ಇಬ್ಬರು ನಾಪತ್ತೆ, ಓರ್ವನಿಗೆ ಗಾಯ title=

Kerala Wayanad Landslide Case: ಕೇರಳ ರಾಜ್ಯದ ವಯನಾಡ್ ನಲ್ಲಿ ಸಂಭವಿಸಿರುವ ಭೂ ಕುಸಿತದಲ್ಲಿ ಚಾಮರಾಜನಗರದ ಇಬ್ಬರು ಮೃತಪಟ್ಟಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ‌. ಜೊತೆಗೆ, ಓರ್ವ ವ್ಯಕ್ತಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಮೆಪ್ಪಾಡಿಯಲ್ಲಿ ವಾಸವಿದ್ದ  ಚಾಮರಾಜನಗರ ಜಿಲ್ಲೆಯ ಪುಟ್ಟಸಿದ್ದಿ(62) ರಾಣಿ(50) ಎಂಬವರ ಶವ ಪತ್ತೆಯಾಗಿದೆ‌.

ಇದನ್ನೂ ಓದಿ- Wayanad Landslide: ಸಾವನ್ನಪ್ಪಿದವರ ಸಂಖ್ಯೆ 106ಕ್ಕೇರಿಕೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ!

ಚಾಮರಾಜನಗರ (Chamarajnagar) ತಾಲೂಕಿನ ಇರಸವಾಡಿ ಗ್ರಾಮದ ರಾಜನ್(50) ಹಾಗೂ ಇವರ ಪತ್ನಿ ರಜನಿ @ ರತ್ನಮ್ಮ(45) ಎಂಬವರ ಮನೆ ಕೊಚ್ಚಿ ಹೋಗಿದ್ದು ಇವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಇಬ್ಬರೂ ಕೂಡ 6 ತಿಂಗಳ ಹಿಂದೆ ಕೇರಳದ ಚೂರಲ್ ಮಲೆ ಎಂಬ ಪ್ರದೇಶದಲ್ಲಿ ಹೊಸ ಮನೆ ಕಟ್ಟಿಕೊಂಡು ವಾಸವಿದ್ದರು. ಇವರಿಗೆ ಮಕ್ಕಳಿರಲಿಲ್ಲ ಎಂದು ತಿಳಿದುಬಂದಿದೆ. 

ಇದನ್ನೂ ಓದಿ- ಗುಡ್ಡ ಕುಸಿತ: ಆಸರೆಯಾಗಿದ್ದ ಹೊಟೇಲ್ ಜೊತೆಯಲ್ಲೇ ಜೀವನದ ಅಂತ್ಯ ಕಂಡ ಕುಟುಂಬ

ಕೇರಳದ (Kerala) ಚೂರಲ್ ಮಲೆ ಎಂಬಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ರಾಜನ್ ಹಾಗು ರಜನಿ ಅವರ ಹುಡುಕಾಟಕ್ಕಾಗಿ ಕಾರ್ಯಾಚರಣೆ ಮುಂದುವರೆದಿದೆ. ಗುಂಡ್ಲುಪೇಟೆ ತಹಶಿಲ್ದಾರ್ ರಮೇಶ್ ಬಾಬು ತಂಡ ಸ್ಥಳಕ್ಕೆ ತೆರಳಿ ಚಾಮರಾಜನಗರ ಜನರ ಗುರುತು ಪತ್ತೆ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ.

ಇನ್ನು, ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ್ದ ಗುಂಡ್ಲುಪೇಟೆ ತಾಲೂಕಿನ ತ್ರಯಂಬಕರಪುರದ ಸ್ವಾಮಿಶೆಟ್ಟಿ(70) ಎಂಬವರು ಗಾಯಗೊಂಡಿದ್ದು  ವೈತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News