ಮಂಡ್ಯ: ಇದೊಂದು ವಿಚಿತ್ರ ಪ್ರಕರಣ. ತನ್ನಅಂತ್ಯಕ್ರಿಯೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ರಾಕಿಂಗ್ ಸ್ಟಾರ್ ಯಶ್ (Rocking star Yash) ಬರಬೇಕೆಂದು ಅಭಿಮಾನಿಯೊಬ್ಬ ಪತ್ರ ಬರೆದಿಟ್ಟು  ಆತ್ಮಹತ್ಯೆ ಮಾಡಿಕೊಂಡ ವಿಚಿತ್ರ ಪ್ರಕರಣ ಮಂಡ್ಯ ಜಿಲ್ಲೆಯ ಕೆರಗೋಡು ಹೋಬಳಿಯ ಕೋಡಿದೊಡ್ಡಿಯಲ್ಲಿ ಸಂಭವಿಸಿದೆ.  ಯಶ್ ಅಣ್ಣ, ಸಿದ್ದರಾಮಯ್ಯ ಸರ್ ನಾನು ನಿಮ್ಮ ಅಪ್ಪಟ ಅಭಿಮಾನಿ. ದಯವಿಟ್ಟು ನನ್ನಅಂತ್ಯಕ್ರಿಯೆಗೆ ಬಂದು ನನ್ನಕೊನೆಯ ಆಸೆ ನೆರವೇರಿಸಿ ಎಂದು ಡೆತ್ ನೋಟಿನಲ್ಲಿ (Death Note) ಬರೆದಿದ್ದಾನೆ. 


COMMERCIAL BREAK
SCROLL TO CONTINUE READING

ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ರಾಮಕೃಷ್ಣ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಈತ ಮನೆಯಲ್ಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. 


ಡೆತ್ ನೋಟಿನಲ್ಲಿ ಏನಿದೆ..?
ಸೂಸೈಡ್ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ (Death note) ಸಿಕ್ಕಿದೆ. ಅದರಲ್ಲಿ ರಾಮಕೃಷ್ಣ ಹೀಗೆ ಬರೆದಿದ್ದಾನೆ. “ನನ್ನನ್ನು ದಯವಿಟ್ಟು ಕ್ಷಮಿಸಿ ಬಿಡಿ. ನಾನು ನಿಮಗೆಲ್ಲಾ ತುಂಬಾ ನೋವು ಕೊಟ್ಟಿದ್ದೇನೆ. ಅಮ್ಮನಿಗೆ ಒಬ್ಬ ಮಗನಾಗಿ, ಅಣ್ಣನಿಗೆ ತಮ್ಮನಾಗಿ, ಗೆಳೆಯರಿಗೆ ಒಂದೊಳ್ಳೆ ಸ್ನೇಹಿತನಾಗಿ, ನನ್ನ ಹುಡುಗಿಗೆ ಜೊತೆಗಾರನಾಗಿ, ಬಾಳ ಸಂಗಾತಿಯಾಗಲು ವಿಫಲನಾಗಿದ್ದೇನೆ. ಹಾಗಾಗಿ, ನಾನು ನಿಮ್ಮಿಂದ ದೂರವಾಗಬೇಕೆಂದು ತೀರ್ಮಾನಿಸಿ ನನ್ನ ಇಚ್ಛೆಯಂತೆ ಮರಣ ಹೊಂದುತ್ತಿದ್ದೇನೆ. ನನ್ನ ಅಂತ್ಯಕ್ರಿಯೆಗೆ ರಾಕಿಂಗ್ ಸ್ಟಾರ್ ಯಶ್ (Rocking star Yash)ಅಣ್ಣ ಭಾಗವಹಿಸಬೇಕು. ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ (Siddaramaiah) ಈ ಅಂತ್ಯಕ್ರಿಯೆಯಲ್ಲಿ ಭಾಗವಹಿಸಬೇಕು. ಏಕೆಂದರೆ ನಿಮ್ಮಿಬ್ಬರ ಅಪ್ಪಟ ಅಭಿಮಾನಿ ನಾನು. ದಯವಿಟ್ಟು ಕೇಳಿಕೊಳ್ಳುತ್ತೇನೆ ನನ್ನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ. ನನ್ನ ಕೊನೆಯ ಆಸೆ ಈಡೇರಿಸಿ ಪ್ಲೀಸ್. ಮಾಧ್ಯಮ ಮಿತ್ರರು (Medai) ಸಹ ಸಹಕರಿಸಬೇಕೆಂದು ಕೇಳಿಕೊಳ್ಳುತ್ತೇನೆ’’ ಹೀಗೆ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ್ದಾನೆ. 


ಇದನ್ನೂ ಓದಿ : Dr Ashwath Narayan: ಅತಿಥಿ ಉಪನ್ಯಾಸಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ ಡಿಸಿಎಂ ಅಶ್ವತ್ಥ್ ನಾರಾಯಣ!


ಅಭಿಮಾನಿಯ ಕೊನೆಯಾಸೆ ಈಡೇರಿಸಿದ ಸಿದ್ದರಾಮಯ್ಯ : 
ಈ ಘಟನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಕಿವಿಗೂ ಮುಟ್ಟಿದೆ. ರಾಜಕೀಯ ಜಂಜಾಟದ ನಡುವೆಯೂ ಸ್ವಲ್ಪ ಬಿಡುವು ಮಾಡಿಕೊಂಡು ಅಭಿಮಾನಿಯ ಕೊನೆಯಾಸೆ ಈಡೇರಿಸಿದ್ದಾರೆ ಸಿದ್ದರಾಮಯ್ಯ.  ಅಭಿಮಾನಿಯ ಬಯಕೆಯಂತೆ ಆತನ ಅಂತಿಮ ದರ್ಶನ ಪಡೆದಿದ್ದಾರೆ.  ಆದರೆ, ರಾಕಿಂಗ್ ಸ್ಟಾರ್ (Yash) ಏನು ಮಾಡುತ್ತಾರೆ ಎಂಬ ಮಾಹಿತಿ ಇದುವರೆಗೆ ಸಿಕ್ಕಿಲ್ಲ. ಯಶ್ ತಮ್ಮ ಎಂದಿನ ಚಟುವಟಿಕೆಗಳಲ್ಲಿ ವ್ಯಸ್ತರಾಗಿದ್ದು, ಅಭಿಮಾನಿಯ ಕೊನೆಯಾಸೆ ಹೇಗೆ ಈಡೇರಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿದೆ.


ಇದನ್ನೂ ಓದಿ : ಉಡುಪಿ ಕೃಷ್ಣಮಠದಲ್ಲಿ ಶೃದ್ದಾ ಭಕ್ತಿಯಿಂದ ನೆರವೇರಿದ ಪರ್ಯಾಯ ಪೂರ್ವಭಾವಿ ಅಕ್ಕಿ ಮುಹೂರ್ತ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.