ಉಡುಪಿ ಕೃಷ್ಣಮಠದಲ್ಲಿ ಶೃದ್ದಾ ಭಕ್ತಿಯಿಂದ ನೆರವೇರಿದ ಪರ್ಯಾಯ ಪೂರ್ವಭಾವಿ ಅಕ್ಕಿ ಮುಹೂರ್ತ

ಅಷ್ಟ ಮಠಗಳಲ್ಲಿ ಒಂದಾದ ಕೃಷ್ಣಮಠದ ಪರ್ಯಾಯದ  ಪೂರ್ವಭಾವಿಯಾಗಿ ನಡೆಯುವ ಅಕ್ಕಿ ಮೂಹೂರ್ತ ಧಾರ್ಮಿಕ ವಿಧಿವಿಧಾನಗಳೊಂದಿಗೆ ಇಂದು ನೆರವೇರಿತು.  

Written by - Ranjitha R K | Last Updated : Feb 17, 2021, 04:43 PM IST
  • ಪರ್ಯಾಯದ ಪೂರ್ವಭಾವಿಯಾಗಿ ನಡೆಯುವ ಅಕ್ಕಿ ಮೂಹೂರ್ತ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು
  • ಕೃಷ್ಣಾಪುರ ಮಠದ ಸ್ವಾಮೀಜಿ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆದ ಅಕ್ಕಿ ಮುಹೂರ್ತ
  • 10 ತಿಂಗಳಲ್ಲಿ ನೆರವೇರಲಿದೆ ಕಟ್ಟಿಗೆ ಮುಹೂರ್ತ ಮತ್ತು ಭತ್ತ ಮುಹೂರ್ತ.
ಉಡುಪಿ ಕೃಷ್ಣಮಠದಲ್ಲಿ ಶೃದ್ದಾ ಭಕ್ತಿಯಿಂದ ನೆರವೇರಿದ ಪರ್ಯಾಯ ಪೂರ್ವಭಾವಿ ಅಕ್ಕಿ ಮುಹೂರ್ತ title=
ಪರ್ಯಾಯದ ಪೂರ್ವಭಾವಿಯಾಗಿ ನಡೆಯುವ ಅಕ್ಕಿ ಮೂಹೂರ್ತ (file photo)

ಉಡುಪಿ : ಅಷ್ಟ ಮಠಗಳಲ್ಲಿ ಒಂದಾದ ಕೃಷ್ಣಮಠದ ಪರ್ಯಾಯದ (Paryaya) ಪೂರ್ವಭಾವಿಯಾಗಿ ನಡೆಯುವ ಅಕ್ಕಿ ಮೂಹೂರ್ತ ಧಾರ್ಮಿಕ ವಿಧಿವಿಧಾನಗಳೊಂದಿಗೆ ಇಂದು ನೆರವೇರಿತು.  ಕೃಷ್ಣಾಪುರ ಮಠದ (Krishnapura Mutt) ಸ್ವಾಮೀಜಿ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಅಕ್ಕಿ ಮುಹೂರ್ತ ನೆರವೇರಿಸಲಾಯಿತು. 

ಎರಡನೇಯ ಮುಹೂರ್ತವಾದ ಅಕ್ಕಿ ಮುಹೂರ್ತವನ್ನು (Akki Muhurtham) ಶೃದ್ಧಾ ಭಕ್ತಿಗಳಿಂದ ನೆರವೇರಿಸಲಾಯಿತು. ಮಠದ ಪಟ್ಟದ ದೇವರಿಗೆ ಪೂಜೆ ಸಲ್ಲಿಸಲಾಯಿತು. ನಂತರ ಅಕ್ಕಿ ಮುಡಿಯೊಂದಿಗೆ ಎಲ್ಲಾ ದೇವರ ದರ್ಶನ (Darshan) ನಡೆಸಿ, ಸ್ವರ್ಣ ಮಂಟಪದಲ್ಲಿ ಅಕ್ಕಿ ಮುಡಿಯನ್ನು ಪ್ರತಿಷ್ಟಾಪಿಸಲಾಯಿತು. ಯತಿಗಳ ಸ್ವಾಗತ, ಪಾದಪೂಜೆ, ಮಂಗಳಾರತಿ ಆಶೀರ್ವಚನ ಕಾರ್ಯಕ್ರಮಗಳೂ ನಡೆಯಿತು. 

ಇದನ್ನೂ ಓದಿ : ಬಿಜೆಪಿಯವರು ಮಾಡುತ್ತಿರುವ ರಾಮಜಪ ಅಧಿಕ್ಕಾರಕ್ಕಾಗಿ ಮಾತ್ರ: HD Kumaraswamy

ಏನಿದು ಅಕ್ಕಿ ಮುಹೂರ್ತ :
ಪರ್ಯಾಯವು (Paryaya) ಪ್ರಾರಂಭವಾಗಲು ಒಂದು ವರ್ಷ ಇರುವಾಗ ಅಕ್ಕಿ ಮುಹೂರ್ತ ನಡೆಯುತ್ತದೆ. ಭಕ್ತರು, ಶ್ರೀಮಠದ ಶಿಷ್ಯವೃಂದ ಒಂದೆಡೆ ಸೇರಿಸಿ ಶ್ರೀಮಠದ ಧರ್ಮಾಧಿಕಾರಿಗಳು ಹರಿವಾಯುಗುರುಗಳ ಪ್ರಾರ್ಥನೆಯನ್ನು ಮಾಡುತ್ತಾರೆ. ಈ ಕಾರ್ಯಕ್ರಮಕ್ಕೆಂದೇ ವಿಶೇಷವಾಗಿ ಅಕ್ಕಿಯ ಮುಡಿಯನ್ನು ತಯಾರಿಸಲಾಗುತ್ತದೆ. ಹದಿನಾಲ್ಕು ಸೇರಿನಷ್ಟು ಅಕ್ಕಿಯನ್ನು (Rice) ಭತ್ತದ ಹುಲ್ಲಿನ ನಾರಿನಲ್ಲಿ ಚೆನ್ನಾಗಿ ಕಟ್ಟಿ ಈ ಮುಡಿಯನ್ನು ತಯಾರಿಸಲಾಗುತ್ತದೆ. ಈ ರೀತಿಯ 5 ಮುಡಿಗಳನ್ನು ಮಠದ ಪೂಜಾಮಂದಿರದ ಮುಂದೆ ಇರಿಸಿ, ದೇವರ (God) ಪ್ರಾರ್ಥನೆಯನ್ನು ಮಾಡಲಾಗುತ್ತದೆ. ಇದಾದ ನಂತರ ಚಂದ್ರಮೌಳೀಶ್ವರ, ಅನಂತೇಶ್ವರ ದೇಗುಲಗಳ ದರ್ಶನವನ್ನು ಮಾಡಿ, ಶ್ರೀಕೃಷ್ಣ-ಮುಖ್ಯಪ್ರಾಣರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ಶ್ರೀಮಠಕ್ಕೆ ಬರುತ್ತಾರೆ. ಈ ಅಕ್ಕಿಯ ಮುಡಿಗಳ ಮಧ್ಯದಲ್ಲಿ ಶ್ರೀಮಠದ ಆರಾಧ್ಯದೇವರನ್ನಿರಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ನಂತರ ಆ ಅಕ್ಕಿಯ ಮುಡಿಗಳನ್ನು ಪಲ್ಲಕ್ಕಿಯಲ್ಲಿ ಇರಿಸಿಕೊಂಡು ರಥಬೀದಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಇಇದು ಬರೀ ಅಕ್ಕಿಮುಡಿಯ ಮೆರವಣಿಯಾಗಿರದೆ ದೇವರ ಮೆರವಣಿಗೆ ಎಂದೇ ಭಾವಿಸಲಾಗುತ್ತದೆ. 

ಉಡುಪಿ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಜನವರಿ 18, 2022ಕ್ಕೆ ಪರ್ಯಾಯ ಪೀಠಾರೋಹಣ ಮಾಡಲಿದ್ದಾರೆ. ಇದು ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರ ನಾಲ್ಕನೇ ಪರ್ಯಾಯ ಪೀಠಾರೋಹಣವಾಗಲಿದೆ. ಪರ್ಯಾಯಕ್ಕೆ ಪೂರ್ವಭಾವಿಯಾಗಿ ನಾಲ್ಕು ಮುಹೂರ್ತಗಳು (Muhurtham) ನಡೆಯುತ್ತವೆ. ಇದರಲ್ಲಿ ಅಕ್ಕಿ ಮುಹೂರ್ತ ಎರಡನೇಯದ್ದಾಗಿದೆ. ಅಕ್ಕಿ ಮುಹೂರ್ತಕ್ಕೂ ಮೊದಲು ಕಳೆದ ನವೆಂಬರ್ 30ರಂದು ಬಾಳೆ ಮುಹೂರ್ತ ನೆರವೇರಿತ್ತು. ಬಾಳೆ ಮುಹೂರ್ತ ಪರ್ಯಾಯದ ಮೊದಲ ಮುಹೂರ್ತ. ಇನ್ನು ಉಳಿದ 10 ತಿಂಗಳಲ್ಲಿ ಇನ್ನೆರಡು ಮುಹೂರ್ತಗಳು ನಡೆಯಲಿವೆ. ಅವುಗಳೆಂದರೆ ಕಟ್ಟಿಗೆ ಮುಹೂರ್ತ ಮತ್ತು ಭತ್ತ ಮುಹೂರ್ತ. 

ಇದನ್ನೂ ಓದಿ : Aishwarya-Amartya Reception: ಇಂದು ಡಿಕೆಶಿ ಮಗಳ ಆರತಕ್ಷತೆ, ಪ್ರವೇಶಕ್ಕೆ BARCODE ವ್ಯವಸ್ಥೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News