Rocking Star Yash ಅಭಿಮಾನಿಗಳಿಗೆ ಗುಡ್ ನ್ಯೂಸ್, ಜುಲೈ 16ರಂದು ತೆರೆಗೆ ಬರಲಿದೆ KGF 2

ವಿಶ್ವಾದ್ಯಂತ ತೆರೆ ಕಾಣಲು ಕೆಜಿಎಫ್ 2 (KGF 2) ಸಜ್ಜಾಗಿದೆ. ಟ್ರೇಲರ್ ಮೂಲಕ ಸಾಕಷ್ಟು ಕುತೂಹಲ ಮೂಡಿಸಿದ್ದ ಚಿತ್ರ ತೆರೆಗೆ ಬರುವ ದಿನಾಂಕ ನಿಗದಿಯಾಗಿದೆ. 

Written by - Ranjitha R K | Last Updated : Jan 29, 2021, 07:16 PM IST
  • ಜುಲೈ 16ಕ್ಕೆ ಚಿತ್ರಮಂದಿರಗಳಲ್ಲಿ ಕೆಜಿಎಫ್ 2 ಬಿಡುಗಡೆ
  • ಬಿಡುಗಡೆ ದಿನಾಂಕವನ್ನು ಫೋಷಿಸಿದ ಚಿತ್ರ ತಂಡ
  • ಯಶ್ ಅಭಿಮಾನಿಗಳ ಕಾತರಕ್ಕೆ ತೆರೆ
Rocking Star Yash ಅಭಿಮಾನಿಗಳಿಗೆ ಗುಡ್ ನ್ಯೂಸ್,  ಜುಲೈ 16ರಂದು ತೆರೆಗೆ ಬರಲಿದೆ  KGF 2 title=
ಜುಲೈ 16ಕ್ಕೆ ಚಿತ್ರಮಂದಿರಗಳಲ್ಲಿ ಕೆಜಿಎಫ್ 2 ಬಿಡುಗಡೆ (photo twitter)

ಬೆಂಗಳೂರು : ವಿಶ್ವಾದ್ಯಂತ ತೆರೆ ಕಾಣಲು ಕೆಜಿಎಫ್ 2 (KGF 2) ಸಜ್ಜಾಗಿದೆ. ಟ್ರೇಲರ್ ಮೂಲಕ ಸಾಕಷ್ಟು ಕುತೂಹಲ ಮೂಡಿಸಿದ್ದ ಚಿತ್ರ ತೆರೆಗೆ ಬರುವ ದಿನಾಂಕ ನಿಗದಿಯಾಗಿದೆ. ಹೌದು ಜುಲೈ 16, 2021 ಕೆಜಿಎಫ್ 2 ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ. ಚಿತ್ರ ತಂಡ  ಬಗ್ಗೆ ಪ್ರಕಟಿಸಿದೆ. ಚಿತ್ರ ಬಿಡುಗಡೆಯ ದಿನಾಂಕ ಘೋಷಿಸುತ್ತಿದ್ದಂತೆ ರಾಕಿಬಾಯ್ ಅಭಿಮಾನಿಗಳು ಸಂತಸದ ಕಡಲಲ್ಲಿ ತೇಲುತ್ತಿದ್ದಾರೆ. ಚಿತ್ರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಕೆಜಿ ಎಫ್ ನಂತರ ಕೆಜಿಎಫ್ 2 (KGF 2)  ರಾಕಿಂಗ್ ಸ್ಟಾರ್ (Rocking Star) ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿತ್ತು. ಕೆಜಿಎಫ್ 2 ಯಾವಾಗ ತೆರೆ ಕಾಣುತ್ತದೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಈಗ ಉತ್ತರ ಸಿಕ್ಕಿದೆ. ಕೆಜಿಎಫ್ 2 ಚಿತ್ರದ ಬಗ್ಗೆ ಪ್ರಕಟಿಸಿದ ನಂತರ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರರಾಗಿದ್ದಾರೆ. ಚಿತ್ರದ ಒಂದೊಂದೇ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿ ಚಿತ್ರ ತಂಡ ಚಿತ್ರ ರಸಿಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿತ್ತು. ಇನ್ನು ಈಗಾಗಲೇ ಬಿಡುಗಡೆಯಾಗಿರುವ ಕೆಜಿಎಫ್ 2ನ ಟ್ರೇಲರ್ (KGF 2 trailer) ಭಾರೀ ಸದ್ದು ಮಾಡಿತ್ತು. ಮಿಲಿಯನ್ ಗಟ್ಟಲೆ ವ್ಯೂಸ್ ಪಡೆದು ದಾಖಲೆ ಬರೆದಿದೆ. ಇದಾದ ಮೇಲೆ ಚಿತ್ರದ (Cinema) ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿತ್ತು. 
 
ಇದನ್ನೂ ಓದಿ : ಕೊನೆಗೂ ರಿಲೀಸ್ ಆಯ್ತು 'Bigg Boss ಸೀಸನ್-8' ರ ಪ್ರೋಮೋ! ಇಲ್ಲಿದೆ Video

ಅಭಿಮಾನಿಗಳು ಚಿತ್ರ ಯಾವಾಗ ತೆರೆ ಕಾಣಲಿದೆ ಎಂದು ರಾಕಿ ಭಾಯ್ ಯನ್ನು (Yash) ಒಂದೇ ಸಮನೆ ಪ್ರಶ್ನಿಸುತ್ತಿದ್ದರು. ಇದೀಗ ಎಲ್ಲಾ ಪ್ರಶ್ನೆಗಳಿಗೆ ಚಿತ್ರ ತಂಡ ಉತ್ತರ ನೀಡಿದೆ.  ಕೆಜಿಎಫ್ 2 ಜುಲೈ 16 2021ರಂದು ವಿಶ್ವಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. 

 

ಚಿತ್ರದಲ್ಲಿ ರಾಕಿಭಾಯ್ ಜೊತೆ ಬಾಲಿವುಡ್ ಖ್ಯಾತ ನಟರಾದ ಸಂಜಯ್ ದತ್ (Sanjay Dutt) , ರವೀನಾ ಟಂಡನ್ ಕೂಡಾ ನಟಿಸಿದ್ದಾರೆ. ಅಲ್ಲದೆ, ಚಿತ್ರದ ಹಿಂದಿ ರೈಟ್ಸ್ ಬಹು ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವ ಬಗ್ಗೆಯೂ ವರದಿಯಾಗಿದೆ.

ಇದನ್ನೂ ಓದಿ : ಇಂದಿರಾ ಗಾಂಧಿ ಪಾತ್ರದಲ್ಲಿ ಮಿಂಚಲಿರುವ Kangna Ranaut; ಚಿತ್ರದ ಬಗ್ಗೆ ಕಂಗನಾ ಮಾತು..

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News